Gruha Lakshmi fake sale of application: ಗೃಹಲಕ್ಷ್ಮೀ ಯೋಜ‌ನೆ ಜಾರಿ ಮುನ್ನವೇ ನಕಲಿ ಅರ್ಜಿ ಹಾವಳಿ ; ನೂರಿನ್ನೂರು ರೂ.ಗೆ ಅರ್ಜಿಗಳ ಮಾರಾಟ ಪತ್ತೆ, ಜನಸಾಮಾನ್ಯರ ಯಾಮಾರಿಸುತ್ತಿರುವ ನಕಲಿಗಳು ! 

18-07-23 10:31 pm       HK News Desk   ಕರ್ನಾಟಕ

ರಾಜ್ಯ ಸರ್ಕಾರ ಮಹಿಳೆಯರಿಗೆ ಎರಡು ಸಾವಿರ ಕೊಡುವ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತ ಜಾರಿಗೊಳಿಸುವ ಮೊದಲೇ ನಕಲಿ ಅರ್ಜಿಗಳು ಕಾಣಿಸಿಕೊಂಡಿದ್ದು ಜನರನ್ನು ಯಾಮಾರಿಸುವ ಪ್ರಯತ್ನ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು, ಜುಲೈ 18:  ರಾಜ್ಯ ಸರ್ಕಾರ ಮಹಿಳೆಯರಿಗೆ ಎರಡು ಸಾವಿರ ಕೊಡುವ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತ ಜಾರಿಗೊಳಿಸುವ ಮೊದಲೇ ನಕಲಿ ಅರ್ಜಿಗಳು ಕಾಣಿಸಿಕೊಂಡಿದ್ದು ಜನರನ್ನು ಯಾಮಾರಿಸುವ ಪ್ರಯತ್ನ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಗೃಹ ಲಕ್ಷ್ಮಿ ಯೋಜನೆ ಪಡೆಯಲೆಂದು ನಕಲಿ ಅರ್ಜಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ನಕಲಿ ನೋಂದಣಿ ಪತ್ರಗಳು ಜಿಲ್ಲೆಯ ಹಲವೆಡೆ ಕಂಡುಬಂದಿವೆ. ನಕಲಿ ಅರ್ಜಿಗಳನ್ನು 100 ರಿಂದ 200 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಅರ್ಜಿಯಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಫೋಟೋ ಬಳಸಲಾಗಿದೆ. ನಕಲಿ ಅರ್ಜಿಯನ್ನು ಸಿಎಂ, ಸಚಿವರ ಫೋಟೋ ಬಳಸಿ ಮಾರಾಟ ಮಾಡಿದ್ದಲ್ಲದೆ, ಜನರನ್ನು ಯಾಮಾರಿಸುವ ಯತ್ನ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳ ಸೈಬರ್ ಸೆಂಟರ್ ಗಳಲ್ಲಿ ನಕಲಿ ಅರ್ಜಿಯ ಹಾವಳಿ ಕಂಡುಬಂದಿದ್ದು ರಾಜ್ಯ ಸರ್ಕಾರ ಅಧಿಕೃತವಾಗಿ ಯೋಜನೆ ಜಾರಿ ಮಾಡುವ ಮೊದಲೇ ಅರ್ಜಿಗಳನ್ನು ಕೊಟ್ಟು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ನಕಲಿ ಅರ್ಜಿಯ ಜಾಲ ಪತ್ತೆ ಮಾಡಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಶೃಂಗೇರಿ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

Gruha Lakshmi Scheme fake sale of application, complaint filed at Sringeri.