ಬ್ರೇಕಿಂಗ್ ನ್ಯೂಸ್
19-07-23 05:37 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 19: ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಕಾರಣಕ್ಕಾಗಿ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
ಬಿಜೆಪಿ ಸದಸ್ಯರಾದ ಡಾ. ಸಿಎನ್ ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್, ಆರ್ ಅಶೋಕ್, ವೇದವ್ಯಾಸ್ ಕಾಮತ್, ಯಶ್ ಪಾಲ್ ಸುವರ್ಣ, ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಅರವಿಂದ ಬೆಲ್ಲದ, ಧೀರಜ್ ಮುನಿ ರಾಜ್, ಆರಗ ಜ್ಞಾನೇಂದ್ರ ಅವರನ್ನು ಅಮಾನತು ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಿಪಕ್ಷ ಒಕ್ಕೂಟದ ಸಭೆಗೆ ಆಗಮಿಸಿದ್ದ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನು ವಿರೋಧಿಸಿದ ಸದನದಲ್ಲಿ ಧರಣಿ ನಡೆಸಿತ್ತು. ಧರಣಿ ನಡುವೆಯೇ ಮಸೂದೆಗಳನ್ನು ಪಾಸ್ ಮಾಡಲಾಗಿದೆ. ಈ ವೇಳೆ ಭೋಜನ ವಿರಾಮಕ್ಕೆ ಅವಕಾಶ ನೀಡದೆ ಸದನ ಮುಂದುವರಿದ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೀಠದಲ್ಲಿ ಇದ್ದ ಉಪ ಸ್ಪೀಕರ್ ಮೇಲೆ ಬಿಲ್ ಪುತ್ರಿಯನ್ನು ಹರಿದು ಎಸೆದಿದ್ದರು. ಈ ನಿಟ್ಟಿನಲ್ಲಿ ಪೀಠಕ್ಕೆ ಅಗೌರವ ತೋರಿಸಿದ ಕಾರಣಕ್ಕಾಗಿ ಒಂಬತ್ತು ಸದಸ್ಯನ್ನು ಅಮಾನತು ಮಾಡಲಾಗಿದೆ.
ಪೀಠಕ್ಕೆ ಅಗೌರವ ತೋರಿಸುವ ಮೂಲಕ ಕಪ್ಪು ಚುಕ್ಕೆ ;
ಇದೇ ವಿಚಾರವಾಗಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ರಾಜಕೀಯ ಅಸ್ತಿತ್ವಕ್ಕಾಗಿ ಗಲಾಟೆ ಮಾಡುವುದು ಸರಿಯಲ್ಲ. ಪೀಠದ ಗೌರವ ಉಳಿಸುವ ಕೆಲಸ ಆಗಬೇಕು. ಸದಸ್ಯರ ಮಾತುಗಳನ್ನು ಕೇಳಲು ನಾವು ಸಿದ್ದ. ಪೀಠಕ್ಕೆ ಅಗೌರವ ತೋರಿಸುವ ಮೂಲಕ ಕಪ್ಪು ಚುಕ್ಕೆ. ಮತದಾರರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ರಾಜ್ಯದ ಜನರು ನಿಮ್ಮನ್ನು ಸಹಿಸುದಿಲ್ಲ ಎಂದರು.
Karnataka Assembly Session: BJP MLAs Throw Bill Copies On Speaker | ಸ್ಪೀಕರ್ ಪೀಠದತ್ತ ಹಾಳೆ ಹರಿದು ಎಸೆದ ಬಿಜೆಪಿ ಸದಸ್ಯರು.
— Ritam ಕನ್ನಡ (@RitamAppKannada) July 19, 2023
ಬಿಜೆಪಿಯ10 ಶಾಸಕರು ಅಮಾನತು! #Bengaluru #BJP #suspended #MLA #Congress #JDS #KarnatakaAssemblySession #CongressvsBJP #SpeakerUTKhader #Karnataka pic.twitter.com/gh4IW3dCEc
Karnataka Assembly Speaker UT Khader on Wednesday suspended 10 BJP MLAs for "unruly" behavior and “disrespect” to the chair. BJP MLAs C N Ashwath Narayan, V Sunil Kumar, R Ashoka, Vedavyas Kamath, Yashpal Suvarna, Dheeraj Muniraju, Umanath Kotiyan, Aravind Bellad, Araga Jnanendra and Y Bharath Shetty are barred from entering the Assembly in the current session that is expected to end this Friday.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm