ಬಿಜೆಪಿ ಮೈತ್ರಿಗೆ ಜೆಡಿಎಸ್ ಒಡೆದ ಮನೆ ; ಕುಮಾರಣ್ಣ ನಿಲುವಿಗೆ ಹಿರಿಯ ಶಾಸಕರಿಂದಲೇ ವಿರೋಧ, ಗೌಡ್ರ ಕುಟುಂಬದಲ್ಲೇ ಅಪಸ್ವರ ! 

21-07-23 08:37 pm       Bangalore Correspondent   ಕರ್ನಾಟಕ

ಇತ್ತ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾಗಿದ್ದರೆ, ಇದಕ್ಕೆ ಹಲವು ಜೆಡಿಎಸ್ ಶಾಸಕರೇ ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಬೆಂಗಳೂರು, ಜುಲೈ 21: ಇತ್ತ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾಗಿದ್ದರೆ, ಇದಕ್ಕೆ ಹಲವು ಜೆಡಿಎಸ್ ಶಾಸಕರೇ ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ, ದೇವೇಗೌಡರ ಕುಟುಂಬದ ಒಳಗಡೆಯೇ ಮೈತ್ರಿಗೆ ವಿರೋಧ ಬಂದಿದೆ ಎನ್ನುವ ಮಾತು ಕೇಳಿಬರುತ್ತಿದೆ.  

ಜೆಡಿಎಸ್ ಪಕ್ಷದ 19 ಶಾಸಕರಲ್ಲಿ ಕೆಲವು ಹಿರಿಯ ಶಾಸಕರೇ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಅಮಾನತುಗೊಂಡ ಬಿಜೆಪಿ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸುತ್ತಿರುವುದಕ್ಕೂ ಜೆಡಿಎಸ್ ಶಾಸಕರಲ್ಲಿಯೇ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ, ಮೈಸೂರು ಭಾಗದ ಪ್ರಬಲ ನಾಯಕ ಜಿ.ಟಿ.ದೇವೇಗೌಡ ಅವರು ‘ಪೇಪರ್ ಹರಿದು ಸ್ಪೀಕರ್ ಕುರ್ಚಿಯ ಮೇಲೆ ಎಸೆದದ್ದು ಅಶಿಸ್ತಿನ ವರ್ತನೆ’ ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಬ್ಬರೂ ಸಮಾನ ಹೊಣೆಗಾರರು ಎಂದವರು ಟೀಕಿಸಿದ್ದಾರೆ. 

Karnataka polls: Congress, BJP worry about giant killer G T Devegowda- The  New Indian Express

It's our govt for next five years: HD Revanna

ಪ್ರಾದೇಶಿಕ ಪಕ್ಷ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ಅಂತರದಲ್ಲಿ ಇಡಬೇಕು ಎಂಬ ಸ್ಪಷ್ಟ ಸೂಚನೆಯನ್ನು ಜಿ.ಟಿ ದೇವೇಗೌಡರು ನೀಡಿದ್ದಾರೆ. ಪಕ್ಷದ ಬಗ್ಗೆ ನಿಷ್ಠೆ ಹೊಂದಿರುವ ಇತರರು ಕೂಡ ಇದೇ ರೀತಿಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೂ ಇದೇ ಭಾವನೆ ಇದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ. 

Never thought I'd sit in new Parliament in my lifetime, I did now at age  91: Deve Gowda | Deccan Herald

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುಮಾರಸ್ವಾಮಿ ಅವರ ಇಚ್ಛೆಗೆ ಸುಮಾರು 12 ಜೆಡಿಎಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟದ ನಾಯಕರು ಕನಿಷ್ಠ ಪಕ್ಷ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಭೇಟಿಯಾಗುವಂತೆ ಕುಮಾರಸ್ವಾಮಿ ಸೂಚಿಸಬೇಕಿತ್ತು ಎಂದು ಜೆಡಿಎಸ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ದೂರು ಸಲ್ಲಿಸಿದ್ದು, ಅದರಲ್ಲಿ ಕುಮಾರಸ್ವಾಮಿ ಮೊದಲ ಸಹಿ ಹಾಕಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 

ಐದು ವರ್ಷಗಳ ಕಾಲ ಅಧಿಕಾರ ಇಲ್ಲದೆ, ಪಕ್ಷದ ಅಸ್ತಿತ್ವ ಉಳಿಸುವುದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೋಗಲು ಮುಂದಾಗಿದ್ದಾರೆ. ಆದರೆ ರೇವಣ್ಣ ಕೋಮುವಾದಿ ಪಕ್ಷದ ಜೊತೆ ಸೇರಿದರೆ, ಇರುವ ಅಸ್ತಿತ್ವಕ್ಕೂ ಕುತ್ತು ಬರಬಹುದು ಅನ್ನುವ ಭಾವನೆ ಹೊಂದಿದ್ದಾರೆ. ಅಲ್ಲದೆ, ಮೈತ್ರಿ ಏರ್ಪಟ್ಟರೆ ತಮ್ಮ ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕುತ್ತು ಬರುತ್ತಾ ಅನ್ನುವ ಭಯಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ನೇರ ಹೋರಾಟಕ್ಕಿಳಿದರೆ, ಮುಸ್ಲಿಂ ಇತರ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ಬಿಟ್ಟು ಹೋದಲ್ಲಿ ಹಾಸನ ಗೆಲ್ಲುವುದು ಕಷ್ಟವಾಗಬಹುದು ಎನ್ನುವ ಭೀತಿಯಲ್ಲಿ ರೇವಣ್ಣ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಒಂದು ಬಗೆದರೆ, ರೇವಣ್ಣ ಇನ್ನೊಂದು ಲೆಕ್ಕ ಹಾಕುತ್ತಿದ್ದಾರೆ. ಮೈತ್ರಿ ಪರಿಣಾಮ ಜೆಡಿಎಸ್ ಪಕ್ಷವೇ ಒಡೆದು ಹೋಗಬಹುದು ಎನ್ನುವ ಭೀತಿಯೂ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿದೆ‌.

HD Kumaraswamy Announces His Party Will Be BJP Ally, JDS leaders G T Devegowda and Revanna unhappy over move. leader and Karnataka's former Chief Minister HD Kumaraswamy today declared that his party has decided to work together with the BJP as an opposition, in the interest of the state.