Davanagere rain, death: ದಾವಣಗೆರೆ ; ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಒಂದು ವರ್ಷದ ಮಗು ಸಾವು

25-07-23 01:49 pm       HK News Desk   ಕರ್ನಾಟಕ

ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಒಂದು ವರ್ಷದ ಹೆಣ್ಣುಮಗು ಬಲಿಯಾಗಿದೆ. ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಗೋಡೆ ಕುಸಿದು‌ ಒಂದು ವರ್ಷದ ಮಗು ಸಾವನ್ನಪ್ಪಿದೆ.

ದಾವಣಗೆರೆ, ಜುಲೈ 25: ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಒಂದು ವರ್ಷದ ಹೆಣ್ಣುಮಗು ಬಲಿಯಾಗಿದೆ. ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಗೋಡೆ ಕುಸಿದು‌ ಒಂದು ವರ್ಷದ ಮಗು ಸಾವನ್ನಪ್ಪಿದೆ.

ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ಕೆಂಚಪ್ಪ ಎಂಬುವರ ಮನೆಯ ಗೋಡೆ ಬಿದ್ದ ಪರಿಣಾಮ ಸ್ಫೂರ್ತಿ (1) ಎಂಬ ಮಗು ಸಾವನ್ನಪ್ಪಿದೆ.

ಮಂಗಳವಾರ ಬೆಳಗಿನ ಜಾವ ನಾಲ್ಕು ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಮಗುವಿನ ತಂದೆ ಕೆಂಚಪ್ಪ (32) ಗೋಡೆ ಕುಸಿತದಿಂದ ಗಾಯಗೊಂಡಿದ್ದಾರೆ.

ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಮೂರು‌ ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಕೆಂಚಪ್ಪ‌ ಅವರ ಮನೆ ಸಂಪೂರ್ಣವಾಗಿ ಹಾಳಾಗಿದೆ.

Davanagere, one year old child dies after house wall collapses due to heavy rains.