Tumkur Superstitious beliefs, Baby death: ಗೊಲ್ಲರಹಟ್ಟಿಯ ಅನಿಷ್ಟ ಪದ್ಧತಿಗೆ ಮಗು ಬಲಿ ; ಬಾಣಂತಿ ಸೂತಕವೆಂದು ಊರ ಹೊರಗಿರಿಸಿದ್ದ ಕುಟುಂಬಸ್ಥರು, ಮಳೆ ಗಾಳಿ ಚಳಿಗೆ ಪ್ರಾಣಬಿಟ್ಟ ಹಸುಗೂಸು! 

26-07-23 03:59 pm       HK News Desk   ಕರ್ನಾಟಕ

ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮ ಅಲ್ಲಿನ ಜನರ ಮೌಢ್ಯತನಕ್ಕೆ ಕುಖ್ಯಾತಿ ಪಡೆದಿದೆ. ಹೊಸತಾಗಿ ಋತುಮತಿಯಾದವರು, ಸೂತಕ ಇದ್ದವರನ್ನು ಗ್ರಾಮದಿಂದ ಹೊರಗೆ ಇರಿಸುವಂತಹ ಅನಿಷ್ಟ ಪದ್ಧತಿ ಅಲ್ಲಿ ಚಾಲ್ತಿಯಲ್ಲಿದೆ.‌

ತುಮಕೂರು, ಜುಲೈ 26: ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮ ಅಲ್ಲಿನ ಜನರ ಮೌಢ್ಯತನಕ್ಕೆ ಕುಖ್ಯಾತಿ ಪಡೆದಿದೆ. ಹೊಸತಾಗಿ ಋತುಮತಿಯಾದವರು, ಸೂತಕ ಇದ್ದವರನ್ನು ಗ್ರಾಮದಿಂದ ಹೊರಗೆ ಇರಿಸುವಂತಹ ಅನಿಷ್ಟ ಪದ್ಧತಿ ಅಲ್ಲಿ ಚಾಲ್ತಿಯಲ್ಲಿದೆ.‌ ಆದರೆ ಈಗ ಈ ಅನಿಷ್ಟ ಪದ್ಧತಿಯ ಕಾರಣಕ್ಕೆ ನವಜಾತ ಶಿಶುವೊಂದು ಅಸುನೀಗಿದೆ. 

ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ ಮತ್ತು ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಮಗುವನ್ನೇ ಕಳೆದುಕೊಂಡಿದ್ದಾರೆ. ಗೊಲ್ಲರಹಟ್ಟಿ ಗ್ರಾಮದ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ಮೃತಪಟ್ಟಿದೆ. ಸೂತಕದ ಕಾರಣ ಮಗು ಮತ್ತು ಬಾಣಂತಿಯನ್ನು ಮಳೆ ಎಂದೂ ಲೆಕ್ಕಿಸದೆ ಊರ ಹೊರಗಿನ ಗುಡಿಸಲಿನಲ್ಲಿ ಇರಿಸಿದ್ದರು. 

ಈ ನಡುವೆ, ಮಗುವಿಗೆ ಶೀತ ಹೆಚ್ಚಾಗಿದ್ದರಿಂದ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು.26ರಂದು ಪ್ರಾಣಬಿಟ್ಟಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ವಿಪರೀತ ಗಾಳಿ, ಮಳೆ ಇದ್ದರೂ ಸಹ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗಿದೆ. 

ವಸಂತ ಕಳೆದ ತಿಂಗಳು ಜೂನ್ 22ರಂದು ಅವಳಿ‌ ಮಕ್ಕಳಿಗೆ ಜನ್ಮ ನೀಡಿದ್ದರು. ಏಳು ತಿಂಗಳಲ್ಲಿ ಹೆರಿಗೆ ಆಗಿದ್ದರಿಂದ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು. ಮಗುವನ್ನು 22 ದಿನ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಟ್ಟು ಬಳಿಕ ಬಿಟ್ಟು ಕೊಡಲಾಗಿತ್ತು. ಜು.14 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.‌ ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿಗೆ ರವಾನೆ ಮಾಡಿದ್ದರು. ಹೀಗಾಗಿ ಬಾಣಂತಿ ಮತ್ತು ಹಸುಗೂಸು ಉಸಿರುಗಟ್ಟಿಸುವ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ವಿಪರೀತ ಮಳೆ, ಗಾಳಿಯಿಂದಾಗಿ ಮಗು ಅನಾರೋಗ್ಯಕೀಡಾಗಿ ಪ್ರಾಣಬಿಟ್ಟಿದ್ದು ಗ್ರಾಮಸ್ಥರ ಮೌಢ್ಯಕ್ಕೆ ಜನರು ಅಮಾಯಕ ಶಿಶು ಪ್ರಾಣ ಬಿಡುವಂತಾಗಿದೆ..

Tumkur Superstitious beliefs, Mother loses new born baby due to heavy wind and rains after daughter in law pushed to live in hut due to Superstitious beliefs of death.