Udupi College Video Toilet: ಉಡುಪಿ ಕಾಲೇಜು ವಿಡಿಯೋ  ಎಫೆಕ್ಟ್ ; ರಾಮನಗರದ ಕಾಲೇಜಿನಲ್ಲಿ ಮೊಬೈಲ್ ತಪಾಸಣಾ ತಂಡ ರಚನೆ

27-07-23 08:28 pm       HK News Desk   ಕರ್ನಾಟಕ

ಉಡುಪಿ ಕಾಲೇಜಿನ ಟಾಯ್ಲೆಟ್ ನಲ್ಲಿ ಮೊಬೈಲ್ ಬಳಕೆ ವಿವಾದ ಹಿನ್ನೆಲೆಯಲ್ಲಿ ಇದೀಗ ರಾಮನಗರದ ಖಾಸಗಿ ಕಾಲೇಜೊಂದರ ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೊಬೈಲ್ ತಪಾಸಣೆ ನಡೆಸುವ ಸಲುವಾಗಿಯೇ ವಿಶೇಷ ತಂಡವನ್ನು ರಚಿಸಿದೆ.

ರಾಮನಗರ, ಜುಲೈ 27: ಉಡುಪಿ ಕಾಲೇಜಿನ ಟಾಯ್ಲೆಟ್ ನಲ್ಲಿ ಮೊಬೈಲ್ ಬಳಕೆ ವಿವಾದ ಹಿನ್ನೆಲೆಯಲ್ಲಿ ಇದೀಗ ರಾಮನಗರದ ಖಾಸಗಿ ಕಾಲೇಜೊಂದರ ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೊಬೈಲ್ ತಪಾಸಣೆ ನಡೆಸುವ ಸಲುವಾಗಿಯೇ ವಿಶೇಷ ತಂಡವನ್ನು ರಚಿಸಿದೆ.

ನಗರದ ಗೌಸಿಯಾ ಇಂಜಿನಿಯರ್ ಕಾಲೇಜು ಈ ರೀತಿಯ ಕ್ರಮ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಅಲ್ಪಸಂಖ್ಯಾತ ಸಮುದಾಯ ಮಾಲಿಕತ್ವದ ಈ ಕಾಲೇಜಿನಲ್ಲಿ ಶೇ.60ಕ್ಕಿಂತಲೂ ಹೆಚ್ಚು ಹಿಂದೂ ವಿದ್ಯಾನಿಯರಿಂದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಕಾಲೇಜು ಆವರಣ ಸೇರಿದಂತೆ ಕ್ಲಾಸ್ ರೂಮ್ ಗೂ ಮೊಬೈಲ್ ತರೋ ಹಾಗಿಲ್ಲ ಎಂದು ಈಗಾಗಲೇ ಕಾಲೇಜಿನಲ್ಲಿ ನಿಯಮ ಇದೆ. ಆದರೆ ಉಡುಪಿಯಲ್ಲಿ ಅನ್ಯಕೋಮಿನ ಮೂವರು ವಿದ್ಯಾರ್ಥಿನಿಯರು ಸೇರಿ ಶೌಚಾಲಯದಲ್ಲಿ ಒಬ್ಬಾಕೆ ವಿದ್ಯಾರ್ಥಿನಿಯ ವೀಡಿಯೋ ಮಾಡಿರುವ ವಿಚಾರ ಭಾರೀ ವಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಮನಗರದ ಗೌಸಿಯಾ ಕಾಲೇಜು ಆಡಳಿತ ಮಂಡಳಿ ತಮ್ಮಲ್ಲೂ ಮೊಬೈಲ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಮೊಬೈಲ್ ತರಬೇಡಿ ಎಂದು ಹೇಳಿದರೂ ವಿದ್ಯಾರ್ಥಿಗಳು ತಂದೇ ತರುತ್ತಾರೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲ ನೇತ್ವತ್ವದಲ್ಲಿ 5 ಮಂದಿಯ ತಂಡವನ್ನು ರಚಿಸಿದೆ. ಈ ತಂಡದಲ್ಲಿ ಇಬ್ಬರು ಮಹಿಳಾ ಅಧ್ಯಾಪಕರು ಮತ್ತು ಮೂವರು ಮಂದಿ ಪುರುಷ ಅಧ್ಯಾಪಕರು ಇದ್ದಾರೆ. ಅವರು ಬೆಳಗ್ಗೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ರ‍್ಯಾಂಡಮ್ ಆಗಿ ತಪಾಸಣೆ ನಡೆಸಿ ಕ್ಲಾಸ್ ರೂಂಗಳಿಗೆ ತೆರಳಲು ಅನುವು ಮಾಡಿಕೊಡುತ್ತಿದೆ.

Ramnagara college forms team to stop students getting mobile phone to college after Udupi Toilet camera case creates spark.