Terror news, Lashkar Afsar pasha, Mangalore cooker blast case: ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಲಷ್ಕರ್ ಉಗ್ರ ಅಫ್ಸರ್ ಪಾಷಾ ; ಶಾರೀಕ್ ಗೆ ಜೈಲಿನಲ್ಲೇ ತರಬೇತಿ ನೀಡಿದ್ನಂತೆ !

31-07-23 02:08 pm       Bangalore Correspondent   ಕರ್ನಾಟಕ

ಮಂಗಳೂರಿನ 'ಕುಕ್ಕರ್‌ ಬಾಂಬ್‌’ ಸ್ಫೋಟ ಪ್ರಕರಣದ ಮಾಸ್ಟರ್‌ ಮೈಂಡ್‌ ಬೆಳಗಾವಿ ಜೈಲಿನಲ್ಲಿದ್ದ ಲಷ್ಕರ್‌ ಇ ತೊಯ್ಬಾ ಸಂಘಟನೆಯ ಉಗ್ರ ಅಫ್ಸರ್‌ ಪಾಷಾ ಎಂಬ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ.

ಬೆಂಗಳೂರು, ಜುಲೈ 31: ಮಂಗಳೂರಿನ 'ಕುಕ್ಕರ್‌ ಬಾಂಬ್‌’ ಸ್ಫೋಟ ಪ್ರಕರಣದ ಮಾಸ್ಟರ್‌ ಮೈಂಡ್‌ ಬೆಳಗಾವಿ ಜೈಲಿನಲ್ಲಿದ್ದ ಲಷ್ಕರ್‌ ಇ ತೊಯ್ಬಾ ಸಂಘಟನೆಯ ಉಗ್ರ ಅಫ್ಸರ್‌ ಪಾಷಾ ಎಂಬ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ. 

2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣ ಮತ್ತು 2012ರಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣದಲ್ಲಿ ಆರೋಪಿಯಾಗಿರುವ ಅಫ್ಸರ್ ಪಾಷಾ, ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದ ಮೊಹಮ್ಮದ್‌ ಶಾರೀಕ್ ಗೆ ತರಬೇತಿ ನೀಡಿದ್ದ ಎಂಬ ಮಾಹಿತಿಯನ್ನು ಹೊರಗೆಡವಿದ್ದಾರೆ. 

Union govt approves draft notification for mandating air conditioned truck  cabins, ac cabins, truck drivers, nitin gadkari, rahul gandhi

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಬೆಳಗಾವಿ ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಅಫ್ಸರ್‌ ಪಾಷಾನನ್ನು ಬೆಳಗಾವಿ ಜೈಲಿನಿಂದ ಜುಲೈ 14ರಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕರೆದೊಯ್ದು ನಾಗಪುರ ಕೇಂದ್ರ ಕಾರಾಗೃಹದಲ್ಲಿರಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತನಿಗೆ ಮಂಗಳೂರು ಕುಕ್ಕರ್‌ ಬಾಂಬ್‌ ಪ್ರಕರಣದಲ್ಲಿ ನಂಟು ಇರುವ ಮಾಹಿತಿ ಪತ್ತೆಯಾಗಿದೆ. ಇದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳ ಜತೆ ಹಂಚಿಕೊಂಡಿರುವುದಾಗಿ ಹಾಗೂ ಪಾಷಾ ಮಾಹಿತಿ ಆಧರಿಸಿ ಸಮಗ್ರ ವರದಿ ಸಿದ್ಧಪಡಿಸಿರುವುದಾಗಿ ಮಹಾರಾಷ್ಟ್ರ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. 

NIA cracks down on gangster-terror nexus, raids underway at 72 locations -  India Today

ಗಡ್ಕರಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದಾಗ, ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಪಾಷಾ ಮಾಸ್ಟರ್‌ ಮೈಂಡ್‌ ಎಂಬ ಸಂಗತಿ ಬೆಳಕಿಗೆ ಬಂದಿದೆ. ಹಲವು ವರ್ಷಗಳ ಹಿಂದೆಯೇ ಬಾಂಗ್ಲಾದೇಶದ ಢಾಕಾದಲ್ಲಿ ಪಾಷಾ ಬಾಂಬ್‌ ತಯಾರಿಕೆಯ ತರಬೇತಿ ಪಡೆದು ಭಾರತಕ್ಕೆ ಬಂದಿದ್ದ. ಬೆಂಗಳೂರಿನ ಐಐಎಸ್ಸಿ ದಾಳಿ ಪ್ರಕರಣದಲ್ಲಿ ಬಂಧಿತನಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ವೇಳೆ ಸಹ ಕೈದಿಗಳಿಗೆ ಇಸ್ಲಾಮಿಕ್‌ ಮೂಲಭೂತವಾದ ಪಸರಿಸುತ್ತಿದ್ದರು. ಪಾಷಾ ಖಾತೆಗೆ ಹಲವು ತಿಂಗಳ ಹಿಂದೆಯೇ 5 ಲಕ್ಷ ರು. ಹಣವನ್ನು ಪಿಎಫ್‌ಐ ಸಂದಾಯ ಮಾಡಿತ್ತು. ಅಬ್ದುಲ್‌ ಜಲೀಲ್‌ ಎಂಬಾತನ ಖಾತೆಯಿಂದ ಈ ಹಣ ವರ್ಗವಾಗಿತ್ತು ಎಂದು ಏಶ್ಯಾನೆಟ್ ಸುವರ್ಣ ವೆಬ್ ಸೈಟ್ ಸುದ್ದಿ ಮಾಡಿದೆ. 

2022ರ ನ.19ರಂದು ಮಂಗಳೂರಿನಲ್ಲಿ ಶಿವಮೊಗ್ಗ ಮೂಲದ ಮೊಹಮ್ಮದ್‌ ಶಾರೀಕ್ ಆಟೋದಲ್ಲಿ ‘ಕುಕ್ಕರ್‌ ಬಾಂಬ್‌’ ಒಯ್ಯುತ್ತಿದ್ದಾಗ ಸ್ಫೋಟಗೊಂಡಿತ್ತು. ಪ್ರೆಷರ್‌ ಕುಕ್ಕರ್‌ಗೆ ಡಿಟೋನೇಟರ್‌, ವೈರ್‌ ಹಾಗೂ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆದರೆ ಆ ಘಟನೆ ಆಕಸ್ಮಿಕವಲ್ಲ. ಭಾರೀ ಸ್ವರೂಪದ ಹಾನಿ ಮಾಡುವ ಉದ್ದೇಶದಿಂದಲೇ ನಡೆಸಲಾದ ಭಯೋತ್ಪಾದಕ ಕೃತ್ಯ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

Investigating officers have unearthed that the mastermind of the pressure cooker blast that occurred in November 2022 at Nagori in Mangaluru is Afsar Pasha of Lashkar-E-Taiba terrorist organization.