Karkala Crusher blast: ಕಾರ್ಕಳದಲ್ಲಿ ಕ್ರಷರ್ ಸ್ಫೋಟ ; ಬಾಗಲಕೋಟ ಮೂಲದ ಕಾರ್ಮಿಕ ಸಾವು 

02-08-23 02:58 pm       HK News Desk   ಕರ್ನಾಟಕ

ತಾಲೂಕಿನ ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಕೆಲಸಕ್ಕಿದ್ದ ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಸಾವಿಗೀಡಾದ ಘಟನೆ ಸಂಭವಿಸಿದೆ. 

ಕಾರ್ಕಳ, ಆಗಸ್ಟ್ 2: ತಾಲೂಕಿನ ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಕೆಲಸಕ್ಕಿದ್ದ ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಸಾವಿಗೀಡಾದ ಘಟನೆ ಸಂಭವಿಸಿದೆ. 

ಬಾಗಲಕೋಟೆ ಮೂಲದ ಕಾರ್ಮಿಕ ವೆಂಕಟೇಶ್ (32) ಸಾವಿಗೀಡಾದ ದುರ್ದೈವಿ. ಕ್ವಾರಿಯಲ್ಲಿ ಜಿಲೆಟಿನ್ ಬಳಸಿ ಬಂಡೆಯನ್ನು ಸಿಡಿಸುತ್ತಿದ್ದಾಗ ಅಕಸ್ಮಾತ್ ಸ್ಫೋಟದ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದಿಬಂದಿದೆ.

ಅದೇ ಕ್ವಾರಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕ ವೆಂಕಟೇಶ್ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಒಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Udupi Karkala crusher blast, Bagalkot native youth dies on spot.