ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಗುತ್ತಿಗೆ ಮುಸ್ಲಿಮರಿಗೆ ; ರಾಮನನ್ನು ನಂಬದವರಿಗೆ ಗುತ್ತಿಗೆ ಕೊಟ್ಟಿದ್ದು ಹಿಂದುಗಳಿಗೆ ಅವಮಾನ - ಪ್ರಮೋದ್ ಮುತಾಲಿಕ್ 

03-08-23 10:57 pm       Bangalore Correspondent   ಕರ್ನಾಟಕ

ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಕೇಂದ್ರ ಸರ್ಕಾರ ಮುಸ್ಲಿಮರಿಗೆ ಟೆಂಡರ್ ನೀಡಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. 

ಬೆಂಗಳೂರು, ಆಗಸ್ಟ್ 3: ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಕೇಂದ್ರ ಸರ್ಕಾರ ಮುಸ್ಲಿಮರಿಗೆ ಟೆಂಡರ್ ನೀಡಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣ ಸಾಧ್ಯವಾಗ್ತಿದೆ. ಇದಕ್ಕೆ ತೊಡಕಾಗಿದ್ದು ಮುಸ್ಲಿಮರು. ಕೋರ್ಟ್ ಆದೇಶದ ಬಳಿಕವೂ ನಾವು ಅಲ್ಲೇ ಮಸೀದಿ ನಿರ್ಮಾಣ ಮಾಡ್ತೀವಿ ಅಂತ ಹೇಳ್ತಾರೆ. ಈ ರೀತಿ ಇರಬೇಕಾದ್ರೆ ಮುಸ್ಲಿಮರಿಗೆ ಈಗ ಕಟ್ಟಡ ನಿರ್ಮಾಣದ ಟೆಂಡರ್ ನೀಡಲಾಗಿದೆ. ಕೇಂದ್ರ ಸರ್ಕಾರ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್ ನೀಡಿರುವುದು ಖಂಡನೀಯ ಎಂದರು.

ರಾಜಸ್ತಾನ ಮೂಲದ ಕಂಪನಿಯ ಇಕ್ಬಾಲ್ ಮಿಸ್ತ್ರಿ ಎಂಬಾತನಿಂದ ಕಟ್ಟಡ ಕೆಲಸ ನಡೆಯುತ್ತಿದೆ. ಗರ್ಭಗುಡಿ ನಿರ್ಮಾಣದ ಟೆಂಡರ್ ಈತನಿಗೆ ನೀಡಲಾಗಿದೆ. ಇದು 100 ಕೋಟಿ ಹಿಂದೂಗಳಿಗೆ ಮಾಡಿರುವ ಅವಮಾನ. ಟ್ರಸ್ಟಿಗಳಲ್ಲಿ ಒಬ್ಬರಾದ ಪೇಜಾವರ ಶ್ರೀಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಅಲ್ಲಿರುವಂತಹ ಮುಸ್ಲಿಂ ಕೆಲಸಗಾರರನ್ನು ಹೊರ ಹಾಕಬೇಕು. ಅಲ್ಲಾ ಒಬ್ಬನೇ ದೇವರು ಅನ್ನುವವನಿಗೆ ರಾಮನ ಗುಡಿ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು. 

ಗೋಮಾಂಸ ಭಕ್ಷಕರು, ದೇವರನ್ನ ನಂಬದವರಿಗೆ ಹೇಗೆ ಗುತ್ತಿಗೆ ಕೊಟ್ಟಿದ್ದೀರಿ. ಅವರನ್ನ ಕೂಡಲೇ ವಾಪಸ್ ಕಳಿಸಬೇಕು. ಅವರು ವಾಪಸ್ ಆದ ಬಳಿಕ ನಾವು ಅಲ್ಲಿಗೆ ಹೋಗಿ ಶುದ್ಧಿ ಮಾಡ್ತೇವೆ. ಈ ಬಗ್ಗೆ ಶ್ರೀಗಳಿಗೆ ಮನವಿ ಮಾಡಲಾಗಿದೆ. ಕೂಡಲೇ ಅಲ್ಲಿರುವ ಗುತ್ತಿಗೆದಾರ ಮುಸ್ಲಿಮರನ್ನ ಹೊರ ಹಾಕಬೇಕು. ಇದು ಇಡೀ ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ ಎಂದು ತಿಳಿಸಿದರು. 

ಟೆಂಡರ್ ರದ್ದಾಗದಿದ್ರೆ ದೇಶಾದ್ಯಂತ ಆಂದೋಲನ ಶುರು ಮಾಡುತ್ತೇವೆ. ಈಗಾಗಲೇ ಈ ಬಗ್ಗೆ 12 ರಾಜ್ಯಗಳ ಜೊತೆ ಚರ್ಚಿಸಿದ್ದೇವೆ. 12 ರಾಜ್ಯದ ಹಿಂದು ಸಂಘಟನೆಗಳು ನಮಗೆ ಬೆಂಬಲ ಸೂಚಿಸಿದ್ದಾರೆ. ಟೆಂಡರ್ ರದ್ದು ಮಾಡದಿದ್ರೆ ರಾಮಮಂದಿರ ಉದ್ಘಾಟನೆ ಮಾಡುವುದಕ್ಕೆ ಬಿಡಲ್ಲ ಎಚ್ಚರಿಸಿದರು.

Sri Ram Sena national president Pramod Muthalik has stirred a controversy by demanding the termination of Muslim workers and contractors appointed to carry out construction of the Ram temple at Ayodhya.