ಬೆಂಗಳೂರು ನಗರದ 45 ಕಚೇರಿಗಳಿಗೆ ಲೋಕಾಯುಕ್ತ ದಾಳಿ ; ಖುದ್ದು ಫೀಲ್ಡಿಗಿಳಿದ ನ್ಯಾ.ಬಿ.ಎಸ್.ಪಾಟೀಲ್, ಕಂದಾಯ ಅಧಿಕಾರಿಗಳಿಗೆ ಕ್ಲಾಸ್ ! 

03-08-23 11:20 pm       Bangalore Correspondent   ಕರ್ನಾಟಕ

ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಇಲಾಖೆ ವ್ಯಾಪ್ತಿಯ ಆರ್ ಒ, ಎಆರ್ ಒ, ಎಡಿಟಿಪಿ ಸೇರಿ ಸುಮಾರು 45 ಕಚೇರಿಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. 

ಬೆಂಗಳೂರು, ಆಗಸ್ಟ್ 3: ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಇಲಾಖೆ ವ್ಯಾಪ್ತಿಯ ಆರ್ ಒ, ಎಆರ್ ಒ, ಎಡಿಟಿಪಿ ಸೇರಿ ಸುಮಾರು 45 ಕಚೇರಿಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. 

ಆರ್‍ಪಿಸಿ ಲೇಔಟ್, ಬ್ಯಾಟರಾಯನಪುರ, ಮಲ್ಲೇಶ್ವರಂನ ಕಂದಾಯ ಕಚೇರಿ, ಟೌನ್ ಪ್ಲಾನಿಂಗ್ ಕಚೇರಿ, ಯಟಿಲಿಟಿ ಬಿಲ್ಡಿಂಗ್‍ನಲ್ಲಿರುವ ಕಂದಾಯ ಕಚೇರಿ ಸೇರಿ ಒಟ್ಟು 45 ಕಡೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಧಿಕಾರಿಗಳು, ಸಿಬ್ಬಂದಿಯನ್ನು ಕಚೇರಿಯಲ್ಲಿಯೇ ಇರಿಸಿಕೊಂಡು ಶೋಧ ಕಾರ್ಯ ನಡೆಸಿದ್ದಾರೆ. 

ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ದಾಳಿ ನೇತೃತ್ವ ವಹಿಸಿದ್ದಾರೆ. ವಿಜಯನಗರ, ರಾಜಾಜಿನಗರ ಕಂದಾಯ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಖುದ್ದಾಗಿ ಕರೆ ಮಾಡಿ ಬಿಬಿಎಂಪಿ ಅಧಿಕಾರಿಗಳು ಲಂಚ ಕೇಳಿದ್ರಾ ಎಂದು ಕೇಳಿದ್ದಾರೆ. ನಿಮ್ಮ ಆಫೀಸ್‍ಗಳ ಮುಂದೆ ಬಂದು ನಿಂತ್ರೆ ರಕ್ತ ಹೀರುತ್ತಿದ್ದಾರೆ ಅಂತಾ ಜನ ಹೇಳ್ತಿದ್ದಾರೆ. ಇದಕ್ಕೆ ಏನಂತೀರಾ? ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ತಪ್ಪುಗಳನ್ನು ತೋರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Lokayukta sleuths caught a Bruhat Bengaluru Mahanagara Palike (BBMP) Revenue Inspector and his two assistants red-handed while accepting a bribe of ₹1 lakh for an official favour.The accused Rajgopal, Revenue Inspector, Raghavendra, First Division Assistant, and Suresh, data entry operator, were working at the Karisandra BBMP office in Banashankari.