ಮಡಿಕೇರಿ ; 50 ಅಡಿ ಎತ್ತರದ ಮರದಿಂದ ಬಿದ್ದು ಪೊಲೀಸ್‌ ಸಿಬ್ಬಂದಿ ಸಾವು  

06-08-23 07:18 pm       HK News Desk   ಕರ್ನಾಟಕ

ಪೊಲೀಸ್‌ ಸಿಬ್ಬಂದಿಯೊಬ್ಬರು ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪದ ಕಾನ್‌ಬೈಲ್‌ ನಲ್ಲಿ ನಡೆದಿದೆ.

ಮಡಿಕೇರಿ, ಆಗಸ್ಟ್ 6: ಪೊಲೀಸ್‌ ಸಿಬ್ಬಂದಿಯೊಬ್ಬರು ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪದ ಕಾನ್‌ಬೈಲ್‌ ನಲ್ಲಿ ನಡೆದಿದೆ.

ಮಡಿಕೇರಿ ಕೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರ ಗನ್‌ ಮ್ಯಾನ್‌ ಆಗಿದ್ದ ಲೋಕೇಶ್‌ ಪೂಜಾರಿ(37) ಮೃತ ದುರ್ದೈವಿಯಾಗಿದ್ದಾರೆ.

ತಮ್ಮ ತೋಟದಲ್ಲಿ ಮಾವಿನ ಮರ ಏರಿ ಅದರ ಕೊಂಬೆಗೆ ಕಸಿ ಮಾಡುವ ಸಂದರ್ಭ ರಕ್ತದೊತ್ತಡ ಕಡಿಮೆಯಾಗಿ 50 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರು ಆ ವೇಳೆಗೆ ಅವರು ಮೃತಪಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಮೃತ ಲೋಕೇಶ್‌ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್‌ ಇಲಾಖೆ ಸಿಬ್ಬಂದಿಯಾಗಿದ್ದ ಲೋಕೇಶ್‌ ಕಳೆದ 15 ವರ್ಷಗಳ ಕಾಲ ಅಪ್ಪಚ್ಚು ರಂಜನ್‌ ಅವರ ಗನ್‌ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

Police constable dice falling from 50 feet tall Tree at Madikeri.