ಪಬ್ ಜಿ ಗೇಮ್ ನಲ್ಲಿ ಹಣ ಕಳ್ಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವಿಗೆ ಶರಣು 

07-08-23 07:04 pm       HK News Desk   ಕರ್ನಾಟಕ

ಪಬ್ ಜಿ ಗೇಮ್ ನಲ್ಲಿ ಹಣ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. 

ಕಲಬುರಗಿ, ಆಗಸ್ಟ್ 8: ಪಬ್ ಜಿ ಗೇಮ್ ನಲ್ಲಿ ಹಣ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. 

ಪಬ್ ಜಿ ಗೇಮ್‌ ನಿಂದಾಗಿ ಸಾಲ ಮಾಡಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಪಾಟೀಲ್(20) ಆತ್ಮಹತ್ಯೆ ಮಾಡಿಕೊಂಡಾತ. ಕಲಬುರಗಿ ನಗರದ ದೇವಿನಗರದ ತನ್ನ ಮನೆಯಲ್ಲಿ ಈತ ಸಾವಿಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾನೆ‌. ಕಲಬುರಗಿ ನಗರದ ಖಾಸಗಿ ಕಾಲೇಜ್ ನಲ್ಲಿ ಪ್ರವೀಣ್ ಬಿಇ ವಿದ್ಯಾಬ್ಯಾಸ ಮಾಡ್ತಿದ್ದ. 

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

An engineering student committed suicide by hanging himself at home after losing money in the PUBG game. A student named Praveen Patil (20) committed suicide, originally a resident of Sulahalli village in Chittapur taluk of Kalburgi district, he was living in Kalaburgi.