ಹಾಲಿ ಬಿಜೆಪಿ ಸಂಸದರಲ್ಲಿ ಹಲವರಿಗೆ ಕೊಕ್ ಖಚಿತ ; ವಿಧಾನಸಭೆ ಸೋತವರಿಂದಲೇ ಲೋಕಸಭೆಗೆ ಲಾಬಿ, ಹತ್ತಕ್ಕೂ ಹೆಚ್ಚು ಸ್ಥಾನಗಳಿಗೆ ಹಕ್ಕು ಸ್ಥಾಪನೆ ! 

08-08-23 03:55 pm       Bangalore Correspondent   ಕರ್ನಾಟಕ

ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ ಅಭ್ಯರ್ಥಿಗಳು ಈಗ ಲೋಕಸಭಾ ಚುನಾವಣೆ ಮೇಲೆ ಕಣ್ಣೀಟ್ಟಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

ಬೆಂಗಳೂರು, ಆಗಸ್ಟ್ 8: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ ಅಭ್ಯರ್ಥಿಗಳು ಈಗ ಲೋಕಸಭಾ ಚುನಾವಣೆ ಮೇಲೆ ಕಣ್ಣೀಟ್ಟಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಕಡೆ ಕಳೆದ ಬಾರಿ ವಿಧಾನಸಭೆ ಚುನಾವಣೆ ಸೋತವರೇ ಲೋಕಸಭೆ ಅಭ್ಯರ್ಥಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಹಾಲಿ ಸಂಸದರ ಪೈಕಿ ಬಹುತೇಕರಿಗೆ ಮರು ಸ್ಪರ್ಧೆಗೆ ಅವಕಾಶ ಇಲ್ಲವೆಂಬ ಸುಳಿವು ಹಿನ್ನೆಲೆಯಲ್ಲಿ ಮಾಜಿ ಶಾಸಕರೇ ಲೋಕಸಭೆ ಟಿಕೆಟಿಗಾಗಿ ಲಾಬಿಗೆ ಮುಂದಾಗಿದ್ದಾರೆ. 

ಮಾಜಿ ಸಚಿವರು, ಶಾಸಕರು ಲೋಕಸಭಾ ಟಿಕೆಟ್ ಪಡೆಯಲು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದು, ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ಬಿ.ಸಿ.ಪಾಟೀಲ್, ಡಾ.ಸುಧಾಕರ್, ಮುರುಗೇಶ್ ನಿರಾಣಿ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ ಹಾಗು ಹಾಸನದ ಪ್ರೀತಂ ಗೌಡ ಸೇರಿದಂತೆ ಹಲವು ನಾಯಕರು ಲೋಕಸಭೆ ಟಿಕೆಟ್ ಪಡೆಯಲು ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. 

Chikkmagaluru Assembly Election Result 2023 BJP CT Ravi Congress HD  Thammaiah eci results karnataka- Chikkmagaluru Assembly Election Result  2023: क्या चिक्कमंगलुरु सीट पर कायम रहेगा भाजपा का कब्जा? थोड़ी ...

Bengaluru: I got Sriramulu's portfolio to fix technical issues says Medical  education Minister Dr K Sudhakar

News9 on Twitter: "#ResultDayOnNEWS9: #BJP candidate BN Bachegowda defeats  #Congress' Veerappa Moily in #Chikkaballapur constituency by a margin of  182,110 votes. #ElectionResults2019 #Verdict2019 https://t.co/DDZ2jE4B8d" /  Twitter

ಮಾಜಿ ಶಾಸಕ ಸಿ.ಟಿ.ರವಿ ಉಡುಪಿ-ಚಿಕ್ಕಮಗಳೂರು ಇಲ್ಲವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಆಸಕ್ತಿ ತೋರಿದ್ದಾರೆ. ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಈ ಕ್ಷೇತ್ರದ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡ ಅವರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ದೊರೆಯುವುದು ಅನುಮಾನವಾಗಿದೆ. ವಿ.ಸೋಮಣ್ಣ ಬೆಂಗಳೂರು ದಕ್ಷಿಣ ಅಥವಾ ತುಮಕೂರು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಎಂ.ಪಿ.ರೇಣುಕಾಚಾರ್ಯ ದಾವಣಗೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರ ಕ್ಷೇತ್ರ ಹಾವೇರಿ ಮೇಲೆ ಬಿ.ಸಿ.ಪಾಟೀಲ್ ಕಣ್ಣಿಟ್ಟಿದ್ದಾರೆ. ಬಾಗಲಕೋಟೆಯಿಂದ ಮುರುಗೇಶ್ ನಿರಾಣಿ, ಬಳ್ಳಾರಿ ಕ್ಷೇತ್ರಕ್ಕಾಗಿ ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿ ನಡುವೆ ಪೈಪೋಟಿ ನಡೆದಿದೆ. ಗೋವಿಂದ ಕಾರಜೋಳ ವಿಜಯಪುರ ಕ್ಷೇತ್ರಕ್ಕೆ, ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

Congress has nothing to offer to voters: BJP minister Somanna

Ban madrasas in Karnataka, says BJP MLA Renukacharya

ಇದೇ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದಾಗಿ ಜನರ ಒಲವು ಬದಲಾಗಿದೆ ಎನ್ನಲಾಗುತ್ತಿದ್ದು ಹೀಗಾಗಿ ಕೆಲವು ಕಡೆ ಬಿಜೆಪಿಯ ಹಾಲಿ ಲೋಕಸಭೆ ಸದಸ್ಯರೇ ಮತ್ತೆ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆ. ವಿರೋಧಿ ಅಲೆ ಮತ್ತು ವಯೋಮಾನದ ಕಾರಣಕ್ಕೆ ಈ ಬಾರಿ ಲೋಕಸಭಾ ಟಿಕೆಟ್  ಕೈತಪ್ಪುವ ಸಾಧ್ಯತೆ ಇರುವುದರಿಂದ ಆ ಕ್ಷೇತ್ರಗಳ ಮೇಲೆ ಹೊಸಬರು ಕಣ್ಣು ಹಾಕಿದ್ದಾರೆ. ಕರಾವಳಿ ಸೇರಿದಂತೆ ಬಹುತೇಕ ಬಿಜೆಪಿ ಹಾಲಿ ಸದಸ್ಯರನ್ನು ಬದಲಾಯಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನುವ ಮಾಹಿತಿಯಿದೆ. ಈ ಸುಳಿವು ಅರಿತ ಕೆಳ ಹಂತದ ನಾಯಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಲೋಕಸಭೆ ಟಿಕೆಟಿಗೆ ಲಾಬಿ ನಡೆಸಿದ್ದಾರೆ.

Many MLAs plan for master plan to get ticket for MP elections in Karnataka.