ಬ್ರೇಕಿಂಗ್ ನ್ಯೂಸ್
23-08-23 01:41 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 23: ಕೇವಲ 15 ವರ್ಷಗಳಲ್ಲಿ ಇಸ್ರೋದಿಂದ ಮೂರನೇ ಚಂದ್ರಯಾನ! ಹೌದು.. ಚಂದ್ರನಿಗೂ ಭಾರತದ ಇಸ್ರೋ ವಿಜ್ಞಾನಿಗಳಿಗೂ ಹತ್ತಿರದ ನಂಟು. ನಿರಂತರ ಅಧ್ಯಯನ, ಸಾಧಿಸಲೇಬೇಕೆಂಬ ಛಲದಿಂದ ಇಸ್ರೋ ವಿಜ್ಞಾನಿಗಳು ಕೇವಲ 15 ವರ್ಷಗಳಲ್ಲಿ ಮೂರನೇ ಬಾರಿಗೆ ಚಂದ್ರನತ್ತ ದೃಷ್ಟಿ ನೆಟ್ಟಿದ್ದಾರೆ.
2009 ರಲ್ಲಿ ಇಸ್ರೋ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡಿದ್ದರು. ಮೊದಲ ಬಾಹ್ಯಾಕಾಶ ನೌಕೆ ಕಳಿಸಿಕೊಟ್ಟ ಮಾಹಿತಿಗಳನ್ನು ಬಳಸಿಕೊಂಡು ವಿಜ್ಞಾನಿಗಳು ಮೊದಲ ಬಾರಿಗೆ ಚಂದ್ರನ ಧ್ರುವ ಪ್ರದೇಶಗಳಲ್ಲಿ ಹೆಪ್ಪುಗಟ್ಟಿದ ನೀರಿನ ನಿಕ್ಷೇಪಗಳನ್ನು ಕಂಡುಹಿಡಿದಿದ್ದರು. ಅಕ್ಟೋಬರ್ 22, 2008 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಮೊದಲ ನೌಕೆ ಚಂದ್ರನತ್ತ ಉಡಾವಣೆಯಾಗಿತ್ತು. ಭಾರತ, ಯುಎಸ್ಎ, ಯುಕೆ, ಜರ್ಮನಿ, ಸ್ವೀಡನ್ ಮತ್ತು ಬಲ್ಗೇರಿಯಾದಲ್ಲಿ ನಿರ್ಮಿಸಲಾಗಿದ್ದ 11 ವೈಜ್ಞಾನಿಕ ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ನೌಕೆ ಚಂದ್ರನತ್ತ ಸಾಗಿತ್ತು. ಮೊದಲಿಗೆ ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರದಲ್ಲಿ ನೌಕೆ ಚಂದ್ರನ ಸುತ್ತ ಸುತ್ತತೊಡಗಿತ್ತು. ಮೇ 2009 ರಲ್ಲಿ ಕಕ್ಷೆಯನ್ನು 200 ಕಿಮೀ ಅಂತರಕ್ಕೆ ತಗ್ಗಿಸಲಾಗಿತ್ತು.
ನಿಗದಿತ ಎರಡು ವರ್ಷಗಳ ಕಾರ್ಯಾಚರಣೆ ಬಳಿಕ ಆರ್ಬಿಟರ್ ಮಿಷನ್, 2009ರ ಆಗಸ್ಟ್ 29 ರಂದು ಬಾಹ್ಯಾಕಾಶ ನೌಕೆಯೊಂದಿಗಿನ ಸಂವಹನವನ್ನು ಕಳೆದುಕೊಂಡ ನಂತರ ಅಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಚಂದ್ರಯಾನ-1ರ ಉದ್ದೇಶಿತ ಗುರಿಯಲ್ಲಿ ಶೇಕಡಾ 95ರಷ್ಟನ್ನು ಸಾಧಿಸಲಾಗಿದೆ ಎಂದು ಅಂದಿನ ಇಸ್ರೊ ಅಧ್ಯಕ್ಷ ಜಿ ಮಾಧವನ್ ನಾಯರ್ ಹೇಳಿದ್ದರು.
ಆನಂತರ ಹತ್ತು ವರ್ಷಗಳ ಬಳಿಕ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿದ್ದ ಚಂದ್ರಯಾನ-2 ಅನ್ನು ಜುಲೈ 22, 2019 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆದರೆ, ರೋವರ್ ಹೊತ್ತುಕೊಂಡು ಇಳಿಯಬೇಕಿದ್ದ ಲ್ಯಾಂಡರ್ ಅಂತಿಮ ಹಂತದಲ್ಲಿ ಕೈಕೊಟ್ಟಿತ್ತು. ಚಂದ್ರನ ಮೇಲ್ಮೈ ಸ್ಪರ್ಶಿಸುವ ಸಂದರ್ಭದಲ್ಲಿ ಕೊನೆಯ ಎರಡು ಕಿಮೀ ಅಂತರದಲ್ಲಿ ವೇಗ ನಿಯಂತ್ರಿಸಲಾಗದೆ ಲ್ಯಾಂಡಿಂಗ್ ವಿಫಲವಾಗಿತ್ತು.
ಆದಾಗ್ಯೂ, ಲ್ಯಾಂಡರ್ ಮತ್ತು ರೋವರ್‌ನಿಂದ ಬೇರ್ಪಟ್ಟಿದ್ದ ಆರ್ಬಿಟರ್‌ನಲ್ಲಿ ಇರಿಸಲಾಗಿದ್ದ ಎಂಟು ಮಾದರಿಯ ವೈಜ್ಞಾನಿಕ ಉಪಕರಣಗಳು ನಿಗದಿಯಂತೆ ಕಾರ್ಯ ನಿರ್ವಹಿಸುತ್ತಿವೆ.
2009 ರಲ್ಲಿ ಚಂದ್ರನ ಮೇಲಿನ ನೀರಿನ ಆವಿಷ್ಕಾರವು ಅತ್ಯಂತ ಮಹತ್ವದ ಘಟನೆಯಾಗಿದೆ. ಅದರ ನಂತರ ವಿಜ್ಞಾನಿಗಳು, ಭಾರತದ ಚಂದ್ರಯಾನ -1 ಬಾಹ್ಯಾಕಾಶ ನೌಕೆಯ ಮೇಲೆ ಹಾರಿದ ಧೂಳನ್ನು ಆಧರಿಸಿ ಚಂದ್ರನ ಮಣ್ಣಿನಲ್ಲಿರುವ ನೀರಿನ ಅಂಶದ ನಕ್ಷೆಯನ್ನು ರಚಿಸಿತ್ತು ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದರು.
ಭಾರತದ ಚಂದ್ರಯಾನ-1ರ ಮಿಷನ್ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು, ಅಮೆರಿಕದ ನಾಸಾ ಸಂಸ್ಥೆ ಚಂದ್ರನ ಮೇಲ್ಮೈಯಲ್ಲಿ ಲಾಕ್ ಮ್ಯಾಗ್ಮ್ಯಾಟಿಕ್ ನೀರನ್ನು ಪತ್ತೆ ಮಾಡಿದೆ. ಈ ಸಂಶೋಧನೆಗಳು ಚಂದ್ರನ ಒಳಭಾಗದ ಆಳದಿಂದ ಹುಟ್ಟುವ ನೀರಿನ ಅಂಶವನ್ನು ಪತ್ತೆ ಮಾಡುತ್ತವೆ ಎಂದು ನಾಸಾ ಸಂಶೋಧಕರು ಹೇಳಿದ್ದಾರೆ.
Three Lunar missions in 15 years! It seems the Moon truly beckons ISRO. And why not? Scientists found frozen water deposits in the darkest and coldest parts of the Moon's polar regions for the first time using data from the Chandrayaan-1 spacecraft in 2009.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm