ಬ್ರೇಕಿಂಗ್ ನ್ಯೂಸ್
01-09-23 08:32 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.1: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಖಾಸಗಿ ಟಿವಿ ವಾಹಿನಿಗೆ ಸಂದರ್ಶನ ನೀಡಿರುವ ರೇಣುಕಾಚಾರ್ಯ, ತಾನೇ ಮುಖ್ಯಮಂತ್ರಿ ಆಗಬೇಕೆಂದು ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದರು. ಸಿಎಂ ಪಟ್ಟದ ಮೇಲೆ ಕಣ್ಣಿಟ್ಟು 72 ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದ್ದರು. ಎಲ್ಲ ಹಿರಿಯ ನಾಯಕರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿರುವ ಬಿ.ಎಲ್. ಸಂತೋಷ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಬಿ.ಎಸ್ ಯಡಿಯೂರಪ್ಪನವರನ್ನು ಕಡೆಗಣಿಸಿ ಇಡೀ ರಾಜ್ಯದಲ್ಲಿ ಪಕ್ಷವನ್ನು ತಲೆಯೆತ್ತದ ರೀತಿ ಮಾಡಿದರು. ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದೇ ಸಂತೋಷ್ ಎಂದು ಕಿಡಿಕಾರಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷಕ್ಕಾಗಿ ಜೀವ ತೇಯ್ದವರು. ಅವರ ತಂದೆ ಶಿವಪ್ಪ ಜನಸಂಘದ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬೆಳೆಸಿದವರು. ಶೆಟ್ಟರ್ ಶಾಸಕನಾಗಿ, ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಅಂಥವರಿಗೆ ಟಿಕೆಟ್ ನೀಡಲಿಲ್ಲ. ಕುರುಬ ಜನಾಂಗದಿಂದ ಪಕ್ಷದಲ್ಲಿ ಏಕೈಕ ಪ್ರತಿನಿಧಿಯಾಗಿದ್ದ, ಹಿರಿಯ ನಾಯಲ ಕೆಎಸ್ ಈಶ್ವರಪ್ಪ ಅವರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೂ ಸಂತೋಷ್ ಟಿಕೆಟ್ ಸಿಗದಂತೆ ಮಾಡಿದರು. ಯಡಿಯೂರಪ್ಪನವರನ್ನು ದ್ವೇಷಿಸುತ್ತಿದ್ದವರಿಗೆ ಮಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಲಾಗುತಿತ್ತು.
ತಾನು ಮುಖ್ಯಮಂತ್ರಿ ಆಗಬೇಕೆನ್ನುವ ಏಕೈಕ ಉದ್ದೇಶದಿಂದ ಸಂತೋಷ್ ಗುಂಪುಗಾರಿಕೆ ನಡೆಸಿದ್ದರು. ರಾಜ್ಯದಲ್ಲಿ ತನ್ನದೇ ಪಟಾಲಂ ಕಟ್ಟಿಕೊಂಡು 72 ಹೊಸಮುಖಗಳಿಗೆ ಟಿಕೆಟ್ ಕೊಡಿಸಿದ್ದರು. ಇದು ಯಾಕೆ ಕೊಡಬೇಕಿತ್ತು. ತನ್ನದೇ ನಡೆಯಬೇಕೆಂದು ಹೀಗೆಲ್ಲ ಮಾಡಿದ್ರು. ನೇಮಿರಾಜ ನಾಯ್ಕ ಜೆಡಿಎಸ್ ಹೋಗಿ ಗೆಲ್ತಾರೆ. ಬೊಮ್ಮಾಯಿ ಅವರು ಸಿಎಂ ಆದ್ರೂ ಅವರನ್ನು ಸರಿಯಾಗಿ ಆಡಳಿತ ಮಾಡಲು ಬಿಡಲಿಲ್ಲ. ಕೈಕಟ್ಟಿ ಹಾಕಿದ್ರು. ನಾವು ಮೋದಿ, ಅಮಿತ್ ಷಾ ಭೇಟಿ ಆಗಬೇಕೆಂದು ಕೇಳಿದರೆ ಅವಕಾಶ ನೀಡಲಿಲ್ಲ. ನಾನು ಜಾತಿವಾದಿ ಅಲ್ಲ. ಯಡಿಯೂರಪ್ಪ ಅವರನ್ನು ಜಾತಿಯ ಕಾರಣಕ್ಕೆ ಬೆಂಬಲಿಸೋದಲ್ಲ.
ನಾನೊಬ್ಬ ಜಾತ್ಯತೀತ ವ್ಯಕ್ತಿ. ಹೋರಾಟ ಮಾಡಿಕೊಂಡು ಮೇಲೆ ಬಂದವನು. ಹೊನ್ನಾಳಿ ಕ್ಷೇತ್ರದಲ್ಲಿ ಎರಡು ಸಾವಿರದಷ್ಟು ಲಿಂಗಾಯತ ವೋಟ್ ಇರೋದು. ವಿಶ್ವ ಹಿಂದು ಪರಿಷತ್ತಿನೊಂದಿಗೆ ಹೋರಾಟ ಮಾಡಿ ಮೇಲೆ ಬಂದೀನಿ. ಯಡಿಯೂರಪ್ಪ ನನಗೆ ರಾಜಕೀಯದಲ್ಲಿ ಗಾಡ್ ಫಾದರ್. ಬಿಜೆಪಿ ತಾಯಿ ಇದ್ದಂತೆ. ಈಗಲೂ ಹೇಳ್ತೇನೆ, ಯಡಿಯೂರಪ್ಪ ಅವರಿಗೆ ನಾಯಕತ್ವ ಕೊಟ್ಟರೆ ಲೋಕಸಭೆ ಗೆಲ್ತೇವೆ, ಈ ಮಾತನ್ನು ಅಮಿತ್ ಷಾ ಅವರಿಗೂ ಹೇಳ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಅವರೆಲ್ಲ ಜನರನ್ನು ಎದುರಿಸಿ ಗೆದ್ದು ಬಂದವರಲ್ಲ. ಅವರೊಂದು ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಯಾರು ಕೂಡ ಜನರಿಂದ ಆಯ್ಕೆ ಆದವರಿಲ್ಲ. ಪಾರ್ಟಿ ಕಟ್ಟಿದವರಲ್ಲ ಎಂದು ಸಂತೋಷ್ ಹೆಸರೇಳದೆ ನೇರ ವಾಗ್ದಾಳಿ ನಡೆಸಿದ್ದಾರೆ.
In an all-out attack on BJP general secretary (organisation) BL Santhosh, former minister MP Renukacharya on Friday accused him of sidelining four-time Chief Minister BS Yediyurappa. Blaming Santhosh for the party’s defeat in the Karnataka Assembly polls, Renukacharya said that several leaders were denied tickets as the former had set his eyes on the Chief Minister’s chair.
10-02-25 10:51 pm
HK News Desk
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
Hubballi Dead Man Ambulance: ಆಸ್ಪತ್ರೆಯಲ್ಲಿ ಸತ...
10-02-25 07:01 pm
13th edition Kumbh Mela, Triveni Sangama, T N...
10-02-25 05:18 pm
Magadi MLA Balakrishna, Bdcc bank, fake gold:...
10-02-25 01:40 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
10-02-25 11:09 pm
Mangalore Correspondent
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm