ಡ್ರಗ್ ನಂಟು ; ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಅರೆಸ್ಟ್

09-11-20 05:05 pm       Bangalore Correspondent   ಕರ್ನಾಟಕ

ಬೆಂಗಳೂರು ಸಿಸಿಬಿ ಪೊಲೀಸರು ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನನ್ನು ಗೋವದಲ್ಲಿ ಬಂಧಿಸಿದ್ದಾರೆ.

ಬೆಂಗಳೂರು, ನವೆಂಬರ್ 09: ಸ್ಯಾಂಡಲ್ ವುಡ್ ಡ್ರಗ್ ಕೇಸ್ ಬೆನ್ನತ್ತಿದ ಬೆಂಗಳೂರು ಸಿಸಿಬಿ ಪೊಲೀಸರು ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನನ್ನು ಗೋವದಲ್ಲಿ ಬಂಧಿಸಿದ್ದಾರೆ.

ಹಾವೇರಿ ಮೂಲದ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧಿತ. ಬೆಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಗೋವಾದಲ್ಲಿ ಆಶ್ರಯ ನೀಡಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ, ಡಾರ್ಕ್ ನೆಟ್ ವೆಬ್ ನಿಂದ  ಡ್ರಗ್ ತರಿಸಿಕೊಳ್ಳುವ ಜಾಲದ ಬಗ್ಗೆ ಪೊಲೀಸರು ತಲಾಶೆಯಲ್ಲಿದ್ದರು. ವಿದೇಶಗಳಿಂದ ಅಂಚೆ ಕಚೇರಿ ಮೂಲಕ ಡ್ರಗ್ ಪೂರೈಕೆ ಆಗುತ್ತಿದ್ದ ಮಾಹಿತಿ ಮೇರೆಗೆ ಚಾಮರಾಜ ನಗರದಲ್ಲಿ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ಸುಜಯ್ ಎಂಬಾತ ಡ್ರಗ್ ಸಹಿತ ಸಿಕ್ಕಿಬಿದ್ದಿದ್ದು ಆತ ಸುನೀಶ್ ಮತ್ತು ಹೇಮಂತ್ ಎನ್ನುವ ಪೆಡ್ಲರ್ ಗಳ ಬಗ್ಗೆ ಬಾಯಿ ಬಿಟ್ಟಿದ್ದ. ಹುಡುಕಾಟದ ಸಂದರ್ಭದಲ್ಲಿ ಆರೋಪಿಗಳು ಗೋವಾದಲ್ಲಿ ಬಲೆಗೆ ಬಿದ್ದಿದ್ದು , ಅವರಿಗೆ ಆಶ್ರಯ ನೀಡಿದ್ದ ದರ್ಶನ್ ಲಮಾಣಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ದರ್ಶನ್ ಲಮಾಣಿಗೆ ಡ್ರಗ್ ಪೆಡ್ಲರ್ ಗಳ ಜೊತೆ ಲಿಂಕ್ ಇದ್ದು, ಪೊಲೀಸರು ಹುಡುಕಾಡುತ್ತಿರುವ ವಿಚಾರ ತಿಳಿದು ಆರೋಪಿಗಳಿಗೆ ಗೋವಾದಲ್ಲಿ ಆಶ್ರಯ ನೀಡಿದ್ದ. 

The son of a former minister Rudrappa Lamani was among three persons arrested on Monday by CCB officials in connection with the drug peddling racket via the darknet.