ಬ್ರೇಕಿಂಗ್ ನ್ಯೂಸ್
13-10-23 04:13 pm Bangalore Correspondent ಕರ್ನಾಟಕ
ಬೆಂಗಳೂರು, ಅ.13: ನಗರದಲ್ಲಿ ಗುತ್ತಿಗೆದಾರರು, ಜ್ಯುವೆಲ್ಲರಿ ಶಾಪ್ ಮಾಲೀಕರು ಹಾಗೂ ಮಾಜಿ ಕಾರ್ಪೊರೇಟರ್ಗಳ ಮನೆಗಳ ಮೇಲೆ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ, ಮಾಜಿ ಕಾರ್ಪೊರೇಟರ್ ಅವರ ಸಂಬಂಧಿಯ ಫ್ಲ್ಯಾಟ್ನಲ್ಲಿ 42 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ. ಆರ್ಟಿ ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲ್ಯಾಟ್ನಲ್ಲಿ ಈ ದಾಳಿ ನಡೆದಿದೆ.
ಮಾಜಿ ಶಾಸಕರೊಬ್ಬರ ಸಂಬಂಧಿ ಎಂದು ಹೇಳಲಾಗುತ್ತಿರುವ ಮಾಜಿ ಮಹಿಳಾ ಕಾರ್ಪೊರೇಟರ್ ಅವರ ಸಂಬಂಧಿಕರ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇನ್ನು ಮಾಜಿ ಮಹಿಳಾ ಕಾರ್ಪೋರೇಟರ್ ಪತಿ ಅವರ ಸಹೋದರನಿಗೆ ಸೇರಿದ ಫ್ಲ್ಯಾಟ್ನಲ್ಲಿ ಸದ್ಯ ಹಣ ಸಿಕ್ಕಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಫ್ಲ್ಯಾಟ್ನಲ್ಲಿ ದೊರೆತ 42 ಕೋಟಿ ರೂ ಕುರಿತು ಆದಾಯ ತೆರಿಗೆ ಅಧಿಕಾರಿಗಳು ಮಾಜಿ ಕಾರ್ಪೊರೇಟರ್ ಸಂಬಂಧಿಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಕಾರ್ಪೊರೇಟರ್ಗೆ ಸಂಬಂಧಿಸಿದ ವ್ಯವಹಾರ, ಬ್ಯಾಂಕ್ ಖಾತೆಗಳ ಮಾಹಿತಿಯನ್ನ ಸಂಗ್ರಹಿಸಲಾಗುತ್ತಿದೆ. ಮಾಜಿ ಕಾರ್ಪೋರೇಟರ್ ಅವರ ಸಂಬಂಧ ಗುತ್ತಿಗೆದಾರರಾಗಿದ್ದು, ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಐದಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ 42 ಕೋಟಿ ರೂಪಾಯಿ ಹಣವನ್ನ ಐಟಿ ಅಧಿಕಾರಿಗಳ ತಂಡ ಜಪ್ತಿ ಮಾಡಿದೆ.
ಚುನಾವಣೆಗೆ ವ್ಯಯಿಸಲು ಹಣ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಮೇರೆಗೆ ನಿನ್ನೆಯಿಂದ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ಉದ್ಯಮಿಗಳು, ಜ್ಯುವೆಲರಿ ಶಾಪ್ ಮಾಲೀಕರ ಮನೆ ಮತ್ತು ಕಚೇರಿಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಸರ್ಜಾಪುರ ಬಳಿಯ ಮುಳ್ಳೂರು, ಆರ್.ಎಂ.ವಿ ಎಕ್ಸ್ಟೆನ್ಷನ್, ಬಿಇಎಲ್ ಸರ್ಕಲ್, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಸದಾಶಿವನಗರ, ಮತ್ತಿಕೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ನಿನ್ನೆ ಪರಿಶೀಲನೆ ನಡೆಸಿದ್ದರು.
ಆದಾಯ ತೆರಿಗೆ ವಂಚನೆ ಆರೋಪ ಕಂಡು ಬಂದ ಹಿನ್ನೆಲೆ ಚಿನ್ನ ಗಿರವಿ ಮತ್ತು ಖರೀದಿ ಮಾಡುವ ಕಂಪನಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಕಳೆದ ವಾರ ಕೂಡ ತೆರಿಗೆ ವಂಚನೆ ಆರೋಪದ ಮೇಲೆ ಜ್ಯುವೆಲರಿ ಉದ್ಯಮಿಗಳ ಮೇಲೆ ಐಟಿ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಕಳೆದ ಬಾರಿ ಸಿಕ್ಕ ದಾಖಲಾತಿಗಳ ಆಧರಿಸಿ ನಿನ್ನೆ ದಾಳಿ ಮಾಡಲಾಗಿತ್ತು.
Officials of the Income Tax (I-T) department on Friday continued their raids in several parts of the city and found approximately Rs 42 crore in cash.
13-02-25 07:28 pm
HK News Desk
ಜನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ...
13-02-25 05:05 pm
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಸುಳಿವು ಕೊಟ...
12-02-25 12:55 pm
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 09:40 pm
Mangalore Correspondent
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
13-02-25 10:20 pm
Mangalore Correspondent
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm
Honor killing Bangalore, Daughter killed, Cri...
12-02-25 06:23 pm