ಬ್ರೇಕಿಂಗ್ ನ್ಯೂಸ್
09-06-26 06:15 pm HK News Staffer ಕರಾವಳಿ
ಮಂಗಳೂರು, ಜೂನ್ 9: ವಸತಿ- ಆಹಾರ ಸೌಲಭ್ಯದೊಂದಿಗೆ ಪ್ರಾಕ್ಟಿಕಲ್ ಆಗಿ AI ತರಬೇತಿ ಮತ್ತು ಸರ್ಕಾರದ ಸಂಸ್ಥೆಯಿಂದಲೇ (Govt Certified AI Professional) ಸರ್ಟಿಫಿಕೇಟ್ ನೀಡುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೋರ್ಸಿಗೆ ಯತಿಕಾರ್ಪ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಈ ಕೋರ್ಸ್ ಪೂರೈಸಿದರೆ, ಅತ್ಯಂತ ಬೇಡಿಕೆ ಇರುವ 84ಕ್ಕೂ ಹೆಚ್ಚು ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಗಳಿಸುವ ಅವಕಾಶ ಸಿಗಲಿದೆ.
ಇಂದಿನ ಜಮಾನದಲ್ಲಿ ಪದವಿ ಮತ್ತು ಇಂಜಿನಿಯರಿಂಗ್ ಸರ್ಟಿಫಿಕೇಟ್ ಕೈಯಲ್ಲಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ನಿರೀಕ್ಷಿತ ಉದ್ಯೋಗ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಜಾಗತಿಕ ಉದ್ಯೋಗ ಮಾರುಕಟ್ಟೆ ಈಗ ಸಂಪೂರ್ಣ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಕಡೆಗೆ ಬದಲಾಗಿರುವುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ಸುಮಾರು 7 ಕೋಟಿ ಸಾಂಪ್ರದಾಯಿಕ ಉದ್ಯೋಗಗಳು ಕಣ್ಮರೆಯಾಗಲಿದ್ದು, ಅದೇ ಸಮಯದಲ್ಲಿ AI ಆಧಾರಿತ 17 ಕೋಟಿಯಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ. ಇದನ್ನು ಬಳಸಿಕೊಳ್ಳಲು AI ಕೌಶಲ್ಯ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರತಿಷ್ಢಿತ ಕರ್ನಾಟಕ ಪಾಲಿಟೆಕ್ನಿಕ್ (KPT Mangalore) ಸಂಸ್ಥೆಯು YATICORP ಸಹಭಾಗಿತ್ವದಲ್ಲಿ "AI ಪ್ರಗತಿ ಪಥ" ಎಂಬ ವಿಶಿಷ್ಟ ತರಬೇತಿಯನ್ನು ಆಯೋಜಿಸಿದೆ. ಇದರಲ್ಲಿ 1 ವಾರದ ವಸತಿ ಸಹಿತ ಪ್ರಾಯೋಗಿಕ ತರಬೇತಿ ಮತ್ತು ಆಸಕ್ತರಿಗೆ ಮೂರು ತಿಂಗಳ ಇಂಟರ್ನ್‌ಶಿಪ್ ದೊರೆಯಲಿದೆ. AI ಬಗ್ಗೆ ಮತ್ತಷ್ಟು ಪರಿಣತಿ ಹಾಗೂ ಉದ್ಯೋಗ ಅಥವಾ ಸ್ವಂತ ಉದ್ಯಮ ಆರಂಭಿಸಲು ಬೆಂಬಲವನ್ನು ನೀಡಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವುದರಿಂದ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆ ಮಾಡಲಾಗಿದ್ದು ಪ್ರತಿ ತಾಲೂಕಿನಿಂದ ಕೇವಲ 10 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ತರಬೇತಿಯಲ್ಲಿ ಏನಿರತ್ತೆ ?
ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ AI ತಂತ್ರಜ್ಞಾನಗಳನ್ನು ಪ್ರಾಕ್ಟಿಕಲ್ ಆಗಿ ಕಲಿಸಲಾಗುತ್ತದೆ. ಪ್ರಾಂಪ್ಟ್ ಇಂಜಿನಿಯರಿಂಗ್, ಕಸ್ಟಮ್ AI ಡೇಟಾ ಸಿಸ್ಟಮ್ ರೂಪಿಸಲು RAG Applications, ಅತ್ಯಾಧುನಿಕ AI ರೋಬೋಟ್‌ಗಳು/ಏಜೆಂಟ್‌ಗಳ ಅಭಿವೃದ್ಧಿಗಾಗಿ ಏಜೆಂಟಿಕ್ ಎಐ, ಯಾವುದೇ ಕೋಡಿಂಗ್ ಜ್ಞಾನ ಇಲ್ಲದೆ ಜಗತ್ತಿನ ಅತ್ಯಾಧುನಿಕ ಹಾಗೂ ಹೈ-ಡಿಮಾಂಡ್ AI ಬಳಕೆಗಾಗಿ ಕ್ಲೌಡ್ (Claude), ಚಾಟ್‌ಜಿಪಿಟಿ (ChatGPT), ಗೂಗಲ್ ನಂತಹ 10 ಸಮಗ್ರ ಅಪ್ಲಿಕೇಶನ್‌ಗಳ ತರಬೇತಿ ಜೊತೆಗೆ, 5 ವರ್ಷದ ಅನುಭವಕ್ಕೆ ಸಮನಾದ 7 ಕ್ಯಾಪ್ಸ್ಟೋನ್ ಪ್ರಾಜೆಕ್ಟ್ ಗಳು ಈ ತರಬೇತಿಗೆ ಅತಿ ಹೆಚ್ಚಿನ ಬೇಡಿಕೆಯನ್ನು ತಂದಿರಿಸಿವೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ಉಚಿತ ಟ್ಯಾಲೆಂಟ್ ಪೋರ್ಟಲ್ ಮೂಲಕ ಉದ್ಯೋಗ ಮತ್ತು ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು.

ಯಾರೆಲ್ಲ ಭಾಗವಹಿಸಬಹುದು ?
ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು PUC, ಡಿಪ್ಲೊಮಾ, ಪದವಿ(ಎಲ್ಲಾ ಪದವೀಧರರು), ಇಂಜಿನಿಯರಿಂಗ್ ಸೇರಿದಂತೆ ಪ್ರಸ್ತುತ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಗಳೂರಿನ ಪಿಲಿಕುಳದ ತರಬೇತಿ ಕೇಂದ್ರದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಜೊತೆಗೆ AI ಲ್ಯಾಪ್‌ಟಾಪ್ ಸೌಲಭ್ಯವನ್ನು ನೀಡಲಾಗುತ್ತದೆ. ತರಬೇತಿಯ ನಂತರ ಅಭ್ಯರ್ಥಿಗಳಿಗೆ ಅತ್ಯಂತ ಮೌಲ್ಯಯುತವಾದ 'Government AI Professional Certificate' ನೀಡಲಾಗುತ್ತದೆ.
ಉದ್ಯೋಗದ ಆಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಪ್ಲೇಸ್‌ಮೆಂಟ್ ನೆರವು ನೀಡಲಾಗುವುದಲ್ಲದೆ, ಸ್ವಂತ ಬಿಸಿನೆಸ್ ಅಥವಾ ಸ್ಟಾರ್ಟ್ ಅಪ್ ಆರಂಭಿಸಲು ಆಸಕ್ತಿ ಇರುವವರಿಗೆ ಉದ್ಯಮದ ತಜ್ಞರಿಂದ ಮೆಂಟರ್‌ಶಿಪ್, ಬ್ಯಾಂಕ್ ಫಂಡಿಂಗ್ ಮತ್ತು ಸರ್ಕಾರದ ಸೀಡ್ ಫಂಡಿಂಗ್ ಪಡೆಯಲು ಅವಕಾಶವಿದೆ. ತಾಲೂಕು ಮಟ್ಟದ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೂ ಜಾಗತಿಕ ಮಟ್ಟದ AI ಅವಕಾಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಇದೊಂದು ಅತ್ಯಪೂರ್ವ ವೇದಿಕೆಯಾಗಿದೆ.
ಯಾಕೆ ಈ ತರಬೇತಿಗೆ ಅತ್ಯಂತ ಬೇಡಿಕೆ ?
ಇಂದಿನ ಮಾರುಕಟ್ಟೆಯಲ್ಲಿ ಈ ತರಬೇತಿ ಇಷ್ಟೊಂದು ದೊಡ್ಡ ಸಂಚಲನ ಮೂಡಿಸಲು ಕಾರಣ, ಇದರ ವ್ಯಾಪ್ತಿ ಮತ್ತು ಬಹುಮುಖಿ ಉದ್ಯೋಗ ಅವಕಾಶಗಳು. ಈ ಸುಧಾರಿತ AI ತರಬೇತಿಯು ಕೇವಲ ಸಾಫ್ಟ್‌ವೇರ್ ಅಥವಾ ಕಂಪ್ಯೂಟರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಪ್ರಸ್ತುತ ಮಾರುಕಟ್ಟೆಯ ಬಿಸಿನೆಸ್, ಮಾರ್ಕೆಟಿಂಗ್, ಅಕೌಂಟ್ಸ್, ಹೆಚ್.ಆರ್ (HR), ಶಿಕ್ಷಣ, ಮಾಧ್ಯಮ, ಕೃಷಿ, ಕಾನೂನು ಮತ್ತು ವಿನ್ಯಾಸ (Design) ಸೇರಿದಂತೆ ಬರೋಬ್ಬರಿ 84ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಆಧುನಿಕ ಉದ್ಯೋಗಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಲು ಅಥವಾ ಸ್ವಂತ ಉದ್ಯಮವನ್ನು ಸ್ಥಾಪಿಸಲು ಸಂಪೂರ್ಣ ಸಹಾಯ ಮಾಡುತ್ತದೆ.
ಸೀಟುಗಳ ಹಂಚಿಕೆ ಹೇಗೆ?
ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಯುವಕ- ಯುವತಿಯರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ, ಪ್ರತಿ ತಾಲೂಕಿಗೆ ಲಭ್ಯವಿರುವ 10 ಸೀಟುಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ (50% - 5 ಸೀಟುಗಳು): ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಅಥವಾ BCA ಮುಗಿಸಿ ಕೆಲಸ ಹುಡುಕುತ್ತಿರುವ ಯುವಕರಿಗೆ.
ಮಹಿಳಾ ಅಭ್ಯರ್ಥಿಗಳಿಗೆ (30% - 3 ಸೀಟುಗಳು): ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯಲು ಬಯಸುವ ಯುವತಿಯರಿಗೆ ವಿಶೇಷ ಆದ್ಯತೆ.
ಕೆರಿಯರ್ ಅಪ್‌ಗ್ರೇಡ್‌ಗೆ (20% - 2 ಸೀಟುಗಳು): ಈಗಾಗಲೇ ಕಡಿಮೆ ಸಂಬಳದ ಕೆಲಸದಲ್ಲಿದ್ದು, ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ.
ಹೀಗೆ ಪ್ರತಿ ತಾಲೂಕಿನಿಂದ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆ ಮೂಲಕ ಒಟ್ಟು 10 ಅರ್ಹ ಅಭ್ಯರ್ಥಿಗಳನ್ನು ವಿಶಿಷ್ಟ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ "AI ತಿಳಿದವನು ಜಗತ್ತನ್ನು ಆಳುತ್ತಾನೆ" ಎಂಬುದು ಕಹಿ ಸತ್ಯ. ಈ ನಿಟ್ಟಿನಲ್ಲಿ, “ಪ್ರತಿ ತಾಲೂಕಿನಿಂದ 10 AI ಪ್ರೊಫೆಷನಲ್ಸ್” ಸೃಷ್ಟಿಸುವ ಈ ಕಲ್ಪನೆ ರಾಜ್ಯದ ಯುವಕರ ಭವಿಷ್ಯಕ್ಕೆ ಹೊಸ ದಾರಿದೀಪ ಆಗುವುದರಲ್ಲಿ ಸಂಶಯವಿಲ್ಲ. ಈ ಅಪರೂಪದ ಹೈಟೆಕ್ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೆಳಗಿನ ಅಧಿಕೃತ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬಹುದು :
https://www.sunailabs.com/kpt-govt-polytechnic
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9141160295
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am