ಬ್ರೇಕಿಂಗ್ ನ್ಯೂಸ್
30-10-23 10:12 pm Bangalore Correspondent ಕರ್ನಾಟಕ
ಬೆಂಗಳೂರು, ಅ.30: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೆ ಶಾಕ್ ಸುದ್ದಿ ಸಿಕ್ಕಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ನಡುವಲ್ಲೇ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 2600 ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿದೆ. ಸೋಮವಾರ ದಿಲ್ಲಿಯನ್ನು ಕೇಂದ್ರವಾಗಿಟ್ಟು ನಡೆದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ ನಡೆಸಿದ 89ನೇ ಸಭೆ ಇದಾಗಿತ್ತು. ಇತ್ತೀಚೆಗೆ ನಡೆದ ಐದು ಸಭೆಗಳಲ್ಲಿ ಸಮಿತಿಯು ಕರ್ನಾಟಕಕ್ಕೆ 15 ದಿನಗಳ ಕಾಲ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸುತ್ತ ಬಂದಿತ್ತು. ತಮಿಳುನಾಡು ಪ್ರತಿ ಬಾರಿಯೂ ದಿನಕ್ಕೆ 12500 ಕ್ಯೂಸೆಕ್ ನೀರಿಗೆ ಬೇಡಿಕೆ ಇಡುವುದು, ಕರ್ನಾಟಕ ಸರ್ಕಾರ ಬರದ ಕಾರಣ ನೀಡಿ ನಿರಾಕರಿಸುವುದು, ಬಳಿಕ ಸಿಡಬ್ಲ್ಯೂಆರ್‌ಸಿ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸುವುದು ನಡೆದಿತ್ತು.
ಕಾವೇರಿ ನೀರು ನಿಯಂತ್ರಣ ಸಮಿತಿಯು ಆಗಸ್ಟ್ 26ರಂದು ನೀಡಿದ ಆದೇಶದಲ್ಲಿ ಆಗಸ್ಟ್ 29ರಿಂದ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡಲು ಸೂಚಿಸಿತ್ತು. ಬಳಿಕ ಸೆ.12ರಂದು ಮತ್ತೆ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿತ್ತು. ಸೆಪ್ಟೆಂಬರ್ 26ರಂದು ಇದೇ ಆದೇಶವನ್ನು ರಿಪೀಟ್ ಮಾಡಿತ್ತು. ಅಕ್ಟೋಬರ್ 12ರಂದು ನೀಡಿದ ಆದೇಶದಲ್ಲಿ ಈ ಪ್ರಮಾಣವನ್ನು 3000ಕ್ಕೆ ಇಳಿಸಿತ್ತು. ಅ.30ರ ಸೋಮವಾರ ನಡೆದ ಐದನೇ ಮೀಟಿಂಗ್‌ನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್‌ಗೆ ಇಳಿಸಿದೆ. ಕರ್ನಾಟಕದಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ನಿರಂತರ ಪ್ರತಿಭಟನೆ ನಡೆದಿದ್ದು ರೈತರು ಬೀದಿಗೆ ಇಳಿದಿದ್ದಾರೆ. ಈಗ ಮತ್ತೆ ರೈತರ ಮೇಲೆ ಬರೆ ಎಳೆಯುವ ಆದೇಶವನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದೆ.
The Cauvery Water Regulation Committee (CWR) Tuesday asked the Karnataka government to release 2,600 cusecs of water to Tamil Nadu at Biligundlu. The CWRC in its 89th meeting passed the order after considering the submissions from both the Karnataka and Tamil Nadu governments, the report said.
13-02-25 07:28 pm
HK News Desk
ಜನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ...
13-02-25 05:05 pm
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಸುಳಿವು ಕೊಟ...
12-02-25 12:55 pm
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 09:40 pm
Mangalore Correspondent
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
13-02-25 10:20 pm
Mangalore Correspondent
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm
Honor killing Bangalore, Daughter killed, Cri...
12-02-25 06:23 pm