ಬ್ರೇಕಿಂಗ್ ನ್ಯೂಸ್
30-10-23 10:21 pm Bangalore Correspondent ಕರ್ನಾಟಕ
ಬೆಂಗಳೂರು, ಅ.30: ನಿಗಮ, ಮಂಡಳಿಗಳ ವಿವಿಧ ಹುದ್ದೆ(ಎಫ್‌ಡಿಎ)ಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದಿದ್ದು ಇದರಲ್ಲೂ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲನೇ ಎ1 ಆರೋಪಿ ಎಂದು ತಿಳಿದುಬಂದಿದೆ. ಕಲಬುರಗಿಯ ಮೂರು ಮತ್ತು ಯಾದಗಿರಿಯ ಐದು ಸೇರಿ ಒಟ್ಟು ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಕನ್ನಡ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಆರ್.ಡಿ.ಪಾಟೀಲನನ್ನು ಎ-1 ಆರೋಪಿ ಎಂದು ಪರಿಗಣಿಸಲಾಗಿದೆ. ಆರ್.ಡಿ. ಪಾಟೀಲ್ ಮತ್ತು ಆತನ ಕಡೆಯವರೇ ಬ್ಲೂಟೂತ್ ಡಿವೈಸ್ ಹಾಗೂ ಸರಿ ಉತ್ತರ ಪೂರೈಕೆ ಮಾಡಿದ್ದಾರೆಂದು ಬಂಧಿತರ ಹೇಳಿಕೆ ಆಧರಿಸಿ ಎ1 ಆರೋಪಿ ಎಂದು ಪರಿಗಣಿಸಲಾಗಿದೆ ಎಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲೂ ಬ್ಲೂಟೂತ್ ಬಳಸಲಾಗಿತ್ತು. ಈ ಅಕ್ರಮ ಬಯಲಾಗುತ್ತಿದ್ದಂತೆ ಆರ್.ಡಿ.ಪಾಟೀಲ್ ಸೇರಿ ರಾಜ್ಯಾದ್ಯಂತ 107 ಮಂದಿಯನ್ನು ಬಂಧಿಸಲಾಗಿತ್ತು. ಸದ್ಯ ಪ್ರಕರಣದಲ್ಲಿ ಜಾಮೀನಿನಲ್ಲಿರುವ ಆರ್.ಡಿ.ಪಾಟೀಲ್ ಹೆಸರು ಮತ್ತೊಂದು ಪರೀಕ್ಷಾ ಅಕ್ರಮದಲ್ಲೂ ಕೇಳಿಬಂದಿದೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಮಾದರಿಯಲ್ಲೇ ಕೆಇಎ ನಡೆಸಿದ ಪರೀಕ್ಷೆಯಲ್ಲೂ ಅಕ್ರಮಕ್ಕೆ ಬ್ಲೂಟೂತ್ ಬಳಸಲಾಗಿದೆ. ಹಗರಣದ ಕಿಂಗ್‌ಪಿನ್‌ಗಳು ಡೀಲ್ ಮಾಡಿಕೊಂಡ ಪರೀಕ್ಷಾರ್ಥಿಗಳಿಗೆ ಸಣ್ಣ ಬ್ಲೂಟೂತ್ ಒಂದನ್ನು ಹಣ ಪಡೆದು ಒದಗಿಸುತ್ತಿದ್ದರು. ಅದರ ಮೂಲಕ ಕೀ ಉತ್ತರಗಳನ್ನು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಒದಗಿಸಲಾಗಿತ್ತು. ಕಿವಿಯೊಳಗೆ ಅಡಗಿಸಿಡಬಹುದಾದ ಬರಿಗಣ್ಣಿಗೆ ಸುಲಭವಾಗಿ ಕಾಣಿಸದ ಅತ್ಯಾಧುನಿಕ ಕಿರು ಬ್ಲೂಟೂತ್ ಅನ್ನು ಪರೀಕ್ಷಾ ಅಕ್ರಮಕ್ಕಾಗಿ ಬಳಕೆ ಮಾಡಲಾಗಿದೆ. ಇದಕ್ಕೆ ಪೂರಕ ಸಂಪರ್ಕ ಕಲ್ಪಿಸುವ ಸಿಮ್ ಕಾರ್ಡ್ ಹೊಂದಿದ ಬ್ಲೂಟೂತ್ ಡಿವೈಸ್ ಅನ್ನು ಶರ್ಟಿನ ಕಾಲರ್, ಅಂಡರ್‌ವೇರ್ ಅಥವಾ ಬನಿಯಾನ್‌ನಲ್ಲಿ ಅಡಗಿಸಿಡಲಾಗಿತ್ತು. ಸಿಮ್ ಕಾರ್ಡ್ ಒಳಗೊಂಡ ಈ ಬ್ಲೂಟೂತ್ ಡಿವೈಸ್‌ಗೆ ಹೊರಗಿನ ವ್ಯಕ್ತಿಯೊಬ್ಬ ಕರೆ ಮಾಡುತ್ತಾನೆ. ಆಟೋಮ್ಯಾಟಿಕ್ ಕರೆ ಸಂಪರ್ಕಗೊಂಡು, ಇಯರ್‌ಪೀಸ್ (ಕಿವಿಯೊಳಗೆ ಅಡಗಿಸಿಟ್ಟಿದ್ದ ಸಾಧನ)ದಲ್ಲಿ ಹೊರಗಿನ ವ್ಯಕ್ತಿ ಉತ್ತರ ಹೇಳುವುದು ಸೂಕ್ಷ್ಮವಾಗಿ ಕೇಳಿಸುತ್ತದೆ. ಪರೀಕ್ಷೆ ಮುಗಿಸಿ ಹೊರ ಬಂದ ನಂತರ, ಅದನ್ನು ಅಯಸ್ಕಾಂತ ಬಳಸಿ ಹೊರತೆಗೆಯಲಾಗುತ್ತದೆ ಎನ್ನಲಾಗಿದೆ.
ಅಂಡರ್‌ವೇರ್, ಶರ್ಟ್ ಕಾಲರ್‌ನಲ್ಲಿ ಬ್ಲೂಟೂತ್ ಡಿವೈಸ್ ಪತ್ತೆ
ಪರೀಕ್ಷಾ ಅಕ್ರಮಕ್ಕಾಗಿ ಅಭ್ಯರ್ಥಿಗಳು ಶರ್ಟ್ ಕಾಲರ್, ಅಂಡರ್‌ವೇರ್ ಸೇರಿ ಒಳ ಉಡುಪಿನಲ್ಲಿ ಬ್ಲೂಟೂತ್ ಡಿವೈಸ್ ಅಳವಡಿಸಿದ್ದು ಪರಿಶೀಲನೆಯಲ್ಲಿ ಕಂಡುಬಂದಿದೆ. ಯಾದಗಿರಿಯ ನ್ಯೂ ಕನ್ನಡ ಶಾಲೆ ಪರೀಕ್ಷಾ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಸುಮ್ಮನೆ ಕುಳಿತಿದ್ದ ಅಭ್ಯರ್ಥಿಯೊಬ್ಬನನ್ನು ಅನುಮಾನದಲ್ಲಿ ವಿಚಾರಣೆ ನಡೆಸಿದ್ದು ಶರ್ಟ್ ಕಾಲರ್ ತುದಿಯಲ್ಲಿ ಬ್ಲೂಟೂತ್ ಕನೆಕ್ಟರ್ ಅಳವಡಿಸಿಕೊಂಡಿದ್ದು ಬೆಳಕಿಗೆ ಬಂದಿತ್ತು. ಪರೀಕ್ಷೆ ಬರೆಯುತ್ತಿದ್ದ ತಮ್ಮನಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿಕೊಡುತ್ತಿದ್ದ ಅಕ್ಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕಲಬುರಗಿ ಪರೀಕ್ಷಾ ಕೇಂದ್ರದ ಹೊರಗೆ ಕಾರಿನಲ್ಲಿ ಕುಳಿತು ಶೈಲಶ್ರೀ ತಳವಾರ ಎಂಬಾಕೆ ಪರೀಕ್ಷೆ ಬರೆಯುತ್ತಿದ್ದ ಲಕ್ಷ್ಮೀಕಾಂತನಿಗೆ ಫೋನ್‌ನಲ್ಲಿ ಉತ್ತರ ಹೇಳುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಕೆಇಎ ಶನಿವಾರ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಪ್ರಶ್ನೆಪತ್ರಿಕೆಯಲ್ಲಿ ಬ್ಲೂಟೂತ್ ಅಕ್ರಮ ಬೆನ್ನತ್ತಿದ್ದಾಗ ಸಿಕ್ಕ ಮಾಹಿತಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ಜತೆಗೆ ಡೀಲ್ ಕುದುರಿಸಲಾಗಿದೆ, ಅಕ್ರಮಕ್ಕೆ ಬಳಸಾದ ಬ್ಲೂಟೂತ್ ಪೂರೈಸಲೆಂದೇ ಪ್ರತಿ ಅಭ್ಯರ್ಥಿಯಿಂದ ಸುಮಾರು ಎರಡು ಲಕ್ಷ ರೂ. ವರೆಗೆ ಮುಂಗಡ ಪಡೆಯಲಾಗಿದೆ ಎಂಬ ಮಾಹಿತಿ ಲಭಿಸಿದೆ. ಪರೀಕ್ಷೆಯಲ್ಲಿ ಪಾಸಾಗಲು ಪ್ರತಿ ಅಭ್ಯರ್ಥಿಯಿಂದ 5ರಿಂದ 8 ಲಕ್ಷ ರೂ. ವ್ಯವಹಾರ ನಡೆಸಲಾಗಿದೆ. ಬ್ಲೂಟೂತ್ ಡಿವೈಸ್ ನೀಡುವುದಕ್ಕಾಗಿ ಮುಂಗಡ 1 ರಿಂದ 2 ಲಕ್ಷ ರು. ಹಣ ಪಡೆದಿದ್ದರೆನ್ನಲಾಗಿದೆ. ಅ.28 ಹಾಗೂ ಅ.29ರ ಎರಡು ಪರೀಕ್ಷೆಗೆಂದು ಒಂದು ದಿನ ಲಾಡ್ಜ್‌ಗಳಲ್ಲಿ ಉಳಿದು, ಕೇಂದ್ರದ ಸುತ್ತಮುತ್ತಲ ಸ್ಥಳ ವೀಕ್ಷಿಸಿ, ಅಕ್ರಮದ ರೂಪುರೇಷೆ ಸಿದ್ಧಪಡಿಸಲಾಗಿತ್ತು ಎನ್ನೋದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
RD Patil, who is one of the kingpins in the PSI entrance test scam too, has been named the prime accused in the FIR registered at the Afzalpur Police Station, accused No 3 in the FIR at the Ashok Nagar Police Station and his name figures in the FIR registered at the University and Yadgir police stations. Most of the candidates arrested are from Sonna village, from where Patil too hails.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am