ಬ್ರೇಕಿಂಗ್ ನ್ಯೂಸ್
01-11-23 12:22 pm Bangalore Correspondent ಕರ್ನಾಟಕ
ಬೆಂಗಳೂರು, ನ.01: ನಾವೆಲ್ಲರೂ ಕನ್ನಡ ಭಾಷೆಯಲ್ಲೇ ವ್ಯವಹರಿಸುತ್ತೇವೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹರಿಸಲ್ಲ ಎಂದು ಪ್ರತಿಜ್ಞೆ ಮಾಡಬೇಕಾದ ಪರಿಸ್ಥಿತಿ ಇದೆ. ಭಾಷೆ, ನೆಲ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾಗದ್ದು ಅಗತ್ಯ. ಇದು ನನ್ನ ತಾಯಿ ನಾಡು, ಕನ್ನಡ ನನ್ನ ತಾಯಿ ಭಾಷೆ ಈ ನೆಲದಲ್ಲಿ ಹುಟ್ಟಿದ್ದೇನೆ, ಅದರ ಋಣ ತೀರಿಸಬೇಕಾದರೆ ಕನ್ನಡ ನೆಲ ಭಾಷೆ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾಗ ಕೆಲಸ ಮಾಡಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಂಠೀರವ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ತಮಿಳು, ಮಲಯಾಳಂ, ತೆಲುವು ಭಾಷೆ ಮಾತನಾಡಿ ಬದುಕು ನಡೆಸಬಹುದಾದ ಪರಿಸ್ಥಿತಿ ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದರು.
ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರಿನ ಘೋಷಣೆ ;
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂದಿನಿಂದ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ಕೊಡಲಾಗುವುದು ಎಂದು ಸಿಎಂ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. ಶಿಕ್ಷಣ ಇಲಾಖೆಯ ಮನವಿಯ ಮೇರೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘೋಷಣೆಯನ್ನು ಸಿಎಂ ಮಾಡಿದರು.
ಸರ್ಕಾರದ ಆಡಳಿತ ಕನ್ನಡ ಭಾಷೆಯಲ್ಲೇ ಆಗಬೇಕು. ಕೇಂದ್ರದ ಜೊತೆಗೆ ವ್ಯವಹರಿಸಬೇಕಾದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆ ಬಳಸಬೇಕು. ಆಡಳಿತ ಪರಿಣಾಮಕಾರಿಯಾಗಿ ಜನರನ್ನು ತಲುಪಬೇಕಾದರೆ ಕನ್ನಡ ಭಾಷೆಯನ್ನೇ ಬಳಸಬೇಕು. ಅಧಿಕಾರಿಗಳು ಮತ್ತು ರಾಜಕಾರಣಿಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಹೇಳಿದರು.
ಮೈಸೂರು ರಾಜ್ಯಕ್ಕೆ ದೇವರಾಜ್ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಇವತ್ತಿಗೆ 50 ವರ್ಷ ತುಂಬಿದೆ. ಇದರ ಸವಿ ನೆನಪಿಗಾಗಿ ರಾಜ್ಯದಲ್ಲಿ 1 ವರ್ಷ ಕರ್ನಾಟಕ ಸಂಭ್ರಮ 50 ಎಂಬ ಹೆಸರಿನ ಮೂಲಕ ನಮ್ಮ ಸಾಹಿತ್ಯ, ಜಾನಪತ, ಕಲೆ, ಸಂಸ್ಕತಿ, ಸಂಪ್ರದಾಯವನ್ನು ಇಡೀ ವರ್ಷ ರಾಜ್ಯದ ಉದ್ದಗಲಕ್ಕೆ ತಿಳಿಸುವ ಕೆಲಸ ಮಾಡಲಿದ್ದೇವೆ ಎಂದರು. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷಾ ವಾಕ್ಯದೊಂದಿಗೆ ರಾಜ್ಯಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಹಿಂದಿನ ಸರ್ಕಾರ ಮಾಡದೆ ಇದ್ದ ಕಾರಣಕ್ಕಾಗಿ ಆಯವ್ಯಯ ಭಾಷಣದಲ್ಲಿ ಕರ್ನಾಟಕ ಸಂಭ್ರಮ ವರ್ಷ ಆಚರಣೆಯ ಘೋಷಣೆ ಮಾಡಿದ್ದೆ. ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
Speaking at the Karnataka Rajyotsava Award CM Siddaramaiah announced free power and water supply to all government schools in the state. The announcement was made during the 68th Kannada Rajyotsava celebrations held on Wednesday.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm