ಬ್ರೇಕಿಂಗ್ ನ್ಯೂಸ್
12-11-20 10:22 pm Political Correspondent - HK ಕರ್ನಾಟಕ
ಬೆಂಗಳೂರು, ನವೆಂಬರ್ 12: ಕರ್ನಾಟಕದ ಕೇಸರಿ ಪಾಳಯದ ಬಗ್ಗೆ ಹೇಳೋದಾದ್ರೆ, ಅದು ಯಾವತ್ತೂ ಕೆಸುವಿನ ಮೇಲಿನ ಹನಿಗಳ ಹಾಗೆ. ಯಾವತ್ತೂ ಒಬ್ಬನನ್ನು ಯಶಸ್ವಿ ನಾಯಕ ಅನ್ನುವಷ್ಟರ ಮಟ್ಟಿಗೆ ಬೆಳೆಯಲು ಬಿಡಲ್ಲ ಹಿಂದಿರುವ ಶಕ್ತಿ. ಅದು ಏಕಮೇವಾದ್ವಿತೀಯ ಯಡಿಯೂರಪ್ಪರೇ ಆಗಿರಲಿ, ಮತ್ತೊಬ್ಬರೇ ಆಗಿರಲಿ. ಒಂದು ಹಂತಕ್ಕೆ ಬಂದು ಅಧಿಕಾರ ಕೇಂದ್ರದತ್ತ ಬರುತ್ತಾರೆ ಎನ್ನುವಾಗ ಕಾಲೆಳೆದಿದ್ದು, ಮೂಲೆಗೆ ತಳ್ಳಲು ಪ್ರಯತ್ನ ಪಟ್ಟಿದ್ದೆಲ್ಲ ಇತಿಹಾಸ. ಆದರೆ, ಇದೆಲ್ಲವನ್ನೂ ಚೆನ್ನಾಗಿ ಅರಿತಿರುವ ರಾಜಾಹುಲಿ ಯಡಿಯೂರಪ್ಪ ಈಗ ಸದ್ದಿಲ್ಲದೆ ದಾಳ ಉರುಳಿಸಿ ಯಶಸ್ವಿಯಾಗಿದ್ದಾರೆ. ಅದೇ ವಿಜಯೇಂದ್ರ ಗಾಥೆ..
ಹೌದು.. ಇತ್ತ ಯಡಿಯೂರಪ್ಪ ಸಿಎಂ ಆಗಿದ್ದೇ ಮುಳ್ಳಿನ ಹಾದಿಯಲ್ಲಿ. ಅಗತ್ಯ ಸ್ಥಾನಗಳೇ ಇಲ್ಲದೇ ಇದ್ದರೂ, ಅಧಿಕಾರ ಹಿಡಿದು ಕೂತಿದ್ದೇ ಚಾಣಾಕ್ಷ ನಡೆ. 16 ಮಂದಿಯನ್ನು ರಾಜಿನಾಮೆ ಕೊಡಿಸಿ, ವಿಧಾನಸಭೆಯ ಬಲವನ್ನೇ ತಗ್ಗಿಸಿಕೊಂಡು ಅಧಿಕಾರ ಹಿಡಿದವರು ಯಡಿಯೂರಪ್ಪ. ಆದರೆ, ಯಡಿಯೂರಪ್ಪ ಅಧಿಕಾರ ಹಿಡಿಯುತ್ತಿದ್ದಂತೆ ಇತ್ತ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರಿಗೇ ಗೊತ್ತಿಲ್ಲದಂತೆ ಮತ್ತೊಬ್ಬರನ್ನು ಕೂರಿಸಲಾಗಿತ್ತು. ಯಡಿಯೂರಪ್ಪ ಅಧಿಕಾರ ಬಲದಿಂದ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಾರೆಂಬ ಗೂಢಾಲೋಚನೆಯಿಂದಲೇ ತನ್ನ ನಿಷ್ಠ ನಳಿನ್ ಕುಮಾರ್ ಅವರನ್ನು ಪರ್ಯಾಯ ಬಣವೆಂದೇ ಗುರುತಿಸಿಕೊಂಡಿದ್ದ ಸಂತೋಷ್ ಅಂಡ್ ಟೀಮ್ ರಾಜ್ಯಾಧ್ಯಕ್ಷ ಹುದ್ದೆಗೆ ಕೂರಿಸಿತ್ತು. ವಯಸ್ಸು, ವಿರೋಧಿ ಬಣದ ಈ ರಾಜಕೀಯ ಪಟ್ಟಿನ ಬಗ್ಗೆ ಚೆನ್ನಾಗೇ ಅರಿತುಕೊಂಡ ಯಡಿಯೂರಪ್ಪ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಲು ಕಾರ್ಯತಂತ್ರ ಹೆಣೆದಿದ್ದರು. ಅದೇ ಪುತ್ರ ವಿಜಯೇಂದ್ರನ ಎಂಟ್ರಿ. ಅಲ್ಲಿ ವರೆಗೂ ಪಕ್ಷದಲ್ಲಿ ತನ್ನ ಪಾಡಿಗಿದ್ದ ವಿಜಯೇಂದ್ರನಿಗೆ ಪಕ್ಷದ ಚಟುವಟಿಕೆಯಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವಂತೆ ಸ್ವತಃ ತಂದೆಯೇ ಸೂಚನೆ ಕೊಟ್ಟಿದ್ದರು.
ಈ ನಡುವೆ, ಮೊದಲ ಬಾರಿಗೆ ವರುಣಾ ಕ್ಷೇತ್ರದ ಚುನಾವಣೆ ಎದುರಾದಾಗ ವಿಜಯೇಂದ್ರನ ಹೆಸರು ತೇಲಿಬಂದಿತ್ತು. ಸ್ಪರ್ಧಾ ಕಣಕ್ಕಿಳಿಯೋದು ಪಕ್ಕಾ ಅನ್ನುವಷ್ಟರಲ್ಲಿ ಕೊನೆಕ್ಷಣದಲ್ಲಿ ತಂದೆ, ಮಗ ವಿಧಾನಸಭೆಯಲ್ಲಿ ಇರೋದು ಉಚಿತವಲ್ಲ ಎಂಬ ಸಲಹೆ ನೀಡಿ ಟಿಕೆಟ್ ತಪ್ಪಿಸಲಾಯ್ತು. ಆದರೆ, ಅಲ್ಲಿಂದಲೇ ವಿಜಯೇಂದ್ರನ ವರ್ಚಸ್ಸು, ಕಾರ್ಯಶೈಲಿ ಬದಲಾಗಿತ್ತು. ಬುಡಕ್ಕೆ ಬಿದ್ದ ಪೆಟ್ಟು ರಾಜಾಹುಲಿಗೇ ಸಿಕ್ಕ ಏಟಾಗಿತ್ತು. ವೈಯಕ್ತಿಕ ವರ್ಚಸ್ಸು ಸಾಬೀತುಪಡಿಸಲೆಂದೇ ವಿಜಯೇಂದ್ರನನ್ನು ಫೀಲ್ಡಿಗಿಳಿಸಿದ್ದರು. ಆನಂತ್ರ ಎದುರಾದ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಅತ್ಯಂತ ಕಷ್ಟ ಎಂದೇ ಎನಿಸಿದ್ದ ಕೆ.ಆರ್.ಪೇಟೆ ಉಸ್ತುವಾರಿ ಕೊಡಲಾಯ್ತು. ಸಿಎಂ ತವರು ಸ್ಥಾನ, ಆದರೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಕಷ್ಟ ಎಂದೇ ಹೇಳಲಾಗಿತ್ತು. ಸವಾಲು ಸ್ವೀಕರಿಸಿದ ವಿಜಯೇಂದ್ರ ತಂತ್ರಗಾರಿಕೆ ಫಲ ಕೊಟ್ಟಿತ್ತು. ಲಿಂಗಾಯತರ ಮತಗಳೇ ಕನಿಷ್ಠ ಇರುವ ಗೌಡರ ಪ್ರಾಬಲ್ಯದ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದು ಸ್ವತಃ ನಾರಾಯಣ ಗೌಡರನ್ನೇ ಅಚ್ಚರಿಗೆ ಕೆಡವಿತ್ತು.
ಈ ಬಾರಿ ಶಿರಾ ಕ್ಷೇತ್ರದಲ್ಲೂ ವಿಜಯೇಂದ್ರ ಅದೇ ರೀತಿಯ ಸವಾಲನ್ನು ಚಿಟಿಕೆ ಹೊಡೆದಂತೆ ಇಲ್ಲವಾಗಿಸಿದ್ದಾರೆ. ಒಂದೆಡೆ ಗೌಡ ಜನಾಂಗದ ಪ್ರಾಬಲ್ಯ, ಇನ್ನೊಂದೆಡೆ ಬಿಜೆಪಿಗೆ ನೆಲೆಯೇ ಇಲ್ಲದ ತಳಮಟ್ಟ. ಇತಿಹಾಸದಲ್ಲೇ ಕಮಲ ಅರಳದ ಬರದ ನಾಡಿನಲ್ಲಿ ಬಿಜೆಪಿ ಪಾಲಿಗೆ ಕಾರ್ಯಕರ್ತರದ್ದೇ ಕೊರತೆ ಇತ್ತು. ಆದರೆ, ಚುನಾವಣೆಗೆ ಎರಡು ತಿಂಗಳ ಮೊದಲೇ ಫೀಲ್ಡಿಗಿಳಿದ ವಿಜಯೇಂದ್ರ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಪಕ್ಷದ ತಳಹಂತದಿಂದಲೇ ತಂತ್ರಗಾರಿಕೆ ಹೆಣೆದು ಪೂರ್ವಣಾವಧಿ ಅಲ್ಲೇ ಉಳಿದು ಮತಬುಟ್ಟಿಗೆ ಕೈಹಾಕಿದ್ದರು. ವಿಜಯೇಂದ್ರನ ಈ ಸಾಧನೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಶಿರಾ ಜೆಡಿಎಸ್ ಬೆಲ್ಟ್. ತಪ್ಪಿದರೆ ಕಾಂಗ್ರೆಸ್ ಅಂತೂ ಖಚಿತ ಎನ್ನುವ ಮಾತಿತ್ತು. ಇದೇ ಕಾರಣದಿಂದ ಸಿದ್ದರಾಮಯ್ಯ ಅಂಡ್ ಟೀಮ್ ಆರಂಭದಿಂದಲೂ ಜಯಚಂದ್ರ ಗೆಲುವು ಖಚಿತ ಎನ್ನುವಂತೆ ಬೀಗಿತ್ತು. ಆದರೆ, ಬರ ಬರುತ್ತ ಕ್ಷೇತ್ರದ ಸ್ಥಿತಿಯೇ ಬದಲಾಗಿತ್ತು. ಬಿಜೆಪಿಯವರು ಅದೇನು ಕರಾಮತ್ತು ನಡೆಸಿದ್ರೋ ಎನ್ನುವ ರೀತಿ ಕಾಂಗ್ರೆಸ್ ನಾಯಕರು ಮೂಗಿಗೆ ಬೆರಳೇರಿಸಿಕೊಂಡಿದ್ದರು. ಮತದಾನ ಮುಗಿದ ಬಳಿಕ ಕಾಂಗ್ರೆಸ್ ನಾಯಕರೇ ಭರವಸೆ ಕಳಕೊಂಡಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ 80 ಶೇಕಡಾ ಮತದಾನ ಆಗಿತ್ತು. ಈ ಪರಿಯ ಮತದಾನವೇ ತಮಗೆ ಕೈಕೊಡ್ತು ಎನ್ನುವ ಅನುಮಾನ ಅವರನ್ನು ಕಾಡಿತ್ತು. ತಮಗೇ ಖಚಿತ ಎಂದುಕೊಂಡಿದ್ದ ಮತಬುಟ್ಟಿಯನ್ನು ವಿಜಯೇಂದ್ರ ತಂತ್ರಗಾರಿಕೆ ಸೆಳೆದುಕೊಂಡಿತ್ತು.
ಈಮೂಲಕ ಪರ್ಯಾಯ ಶಕ್ತಿಕೇಂದ್ರ ಸಂತೋಷ್ ಬಣದ ಸಾರಥ್ಯ, ಸಹಕಾರ ಇಲ್ಲದಿದ್ದರೂ ಗೆಲ್ಲಬಲ್ಲೆ ಎನ್ನುವ ವಿಶ್ವಾಸವನ್ನು ಸಿಎಂ ಯಡಿಯೂರಪ್ಪ ಅಂಡ್ ಟೀಂ ತೊರಿಸಿಕೊಟ್ಟಿದೆ. ಜೊತೆಗೆ, ಕೊನೆಕ್ಷಣದಲ್ಲಿ ಸೀಟು ತಪ್ಪಿಸಿ ಮುಖಭಂಗಕ್ಕೀಡಾಗಿದ್ದ ಅದೇ ಮುಖವನ್ನು ಈಗ ರಾಜ್ಯ ರಾಜಕೀಯದಲ್ಲಿ ಮುಂಚೂಣಿ ನಾಯಕನಾಗಿ ತಂದು ನಿಲ್ಲಿಸಿದ್ದಾರೆ. ಯಡಿಯೂರಪ್ಪ ಬಿಟ್ಟರೆ ರಾಜ್ಯದಲ್ಲಿ ಲಿಂಗಾಯತ ಮತ್ತು ಲಿಂಗಾಯತೇತರ ವಿಭಾಗದಲ್ಲೂ ಭರವಸೆಯ ನಾಯಕ ಎಂಬುದನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ. ಈಗಿನ ಸನ್ನಿವೇಶ ಹೇಗಿದೆ ಅಂದ್ರೆ, ಮುಂದಿನ ಉಪ ಚುನಾವಣೆಗೆ ತಮ್ಮ ಕ್ಷೇತ್ರಕ್ಕೆ ವಿಜಯೇಂದ್ರನನ್ನೇ ಉಸ್ತುವಾರಿಯನ್ನಾಗಿ ಮಾಡಿಸಿ ಎಂದು ನಾಯಕರು ದುಂಬಾಲು ಬೀಳುತ್ತಿದ್ದಾರೆ. ಉತ್ತರ ಕರ್ನಾಟಕದ ಮಸ್ಕಿ ಮತ್ತು ಬಸವಕಲ್ಯಾಣದ ಉಪ ಚುನಾವಣೆಗಾಗಿ ಅಲ್ಲಿನ ನಾಯಕರು ವಿಜಯೇಂದ್ರನೇ ಬರಬೇಕೆಂದು ಹಾತೊರೆಯುತ್ತಿದ್ದಾರೆ. ಅಷ್ಟೇ ಅಲ್ಲ, ವಿಜಯೇಂದ್ರನೇ ಅಭ್ಯರ್ಥಿಯಾಗಿಸುವುದಕ್ಕೂ ಅಲ್ಲಿನ ನಾಯಕರು ರೆಡಿಯಾಗಿದ್ದಾರೆ.
ಇದು ರಾಜಾಹುಲಿ ಉರುಳಿಸಿದ ಸಾಧಾರಣ ರಾಜಕೀಯ ಪಟ್ಟಂತೂ ಅಲ್ಲ. ಒಂದ್ಕಡೆ ವಯಸ್ಸಿನ ಕಾರಣಕ್ಕೆ ತನ್ನ ಸ್ಥಾನದಿಂದ ಕೆಳಗಿಳಿಯುವ ವೇಳೆಗೆ ತನ್ನ ಮಗನೇ ಮುಂದಿನ ನಾಯಕ ಎನ್ನುವುದನ್ನು ರಾಜ್ಯದ ಉದ್ದಗಲಕ್ಕೆ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಒಂದೇ ವರ್ಷದಲ್ಲಿ ಹೈಕಮಾಂಡ್ ಕಡೆಯಿಂದಲೇ ವಿಜಯೇಂದ್ರನಿಗೆ ಶಹಭಾಷ್ ಹೇಳಿಸುವಷ್ಚರ ಮಟ್ಟಿಗೆ ಪ್ರಭಾವ ಬೆಳೆಸಿಕೊಂಡಿದ್ದು ಯಡಿಯೂರಪ್ಪ ರಾಜಕಾರಣದ ಹೊಸ ದಿಶೆ ಎನ್ನುವುದೂ ಅಷ್ಟೇ ಸತ್ಯ.
BY Vijayendra steps out of father BSY’s shadow, delivers Sira to BJP. Vijayendra has repeated the feat in Sira where the BJP had never even come second and mostly lost deposit in all previous polls.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm