ಬ್ರೇಕಿಂಗ್ ನ್ಯೂಸ್
02-11-23 11:00 pm HK News Desk ಕರ್ನಾಟಕ
ವಿಜಯನಗರ, ನ.2: ಹಂಪಿಗೆ ಹೋದಲ್ಲಿ ಅಧಿಕಾರ ಹೋಗುತ್ತೆ ಎನ್ನುವ ಅಪವಾದ, ಮೂಢನಂಬಿಕೆಯನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸಪೇಟೆಯ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿಯೇ ಜ್ಯೋತಿ ರಥಯಾತ್ರೆ ಚಾಲನೆ ನೀಡಿದ್ದಾರೆ.
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ರುದ್ರಾಕ್ಷಿ ಮಾಲೆಯನ್ನು ಧರಿಸಿ ಗಂಗಾ ಜಲಾಭಿಷೇಕ ನೆರವೇರಿಸಿದ್ದಾರೆ. ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಪೂಜೆ ಸಲ್ಲಿಸಿ, ರಥಬೀದಿಯಲ್ಲಿ ಜನಪದ ಕಲಾತಂಡಗಳೊಂದಿಗೆ ಕಾಲ್ನಡಿಗೆಯಲ್ಲೇ ಬಸವಣ್ಣ ಮಂಟಪದ ವರೆಗೆ ಸಾಗಿದ್ದಾರೆ. ಇದೇ ವೇಳೆ, ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಟಿ ನಡೆಸಲಾಗಿದ್ದು ಬಸವಣ್ಣ ಮಂಟಪದಲ್ಲಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಂಪಿಯಿಂದಲೇ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದೇವೆ. 1973ರ ನವೆಂಬರ್ 2ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಹಂಪಿಯಿಂದಲೇ ಕರ್ನಾಟಕ ನಾಮಕರಣದ ಘೋಷಣೆ ಮಾಡಿದ್ದರು. ಅಲ್ಲದೆ, ಜ್ಯೋತಿ ರಥಯಾತ್ರೆಯನ್ನೂ ಚಾಲನೆ ನೀಡಿದದ್ರು. ಅರಸು ಕೂಡ ಮೈಸೂರು ಜಿಲ್ಲೆಯವರು. ನಾನೂ ಮೈಸೂರು ಜಿಲ್ಲೆಯವನು. ಒಂದು ವರ್ಷ ಸಂಭ್ರಮಾಚರಣೆ ನಡೆಯುತ್ತದೆ. ಅಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಇಂದು ನನಗೆ ಅವಕಾಶ ಸಿಕ್ಕಿರುವುದು ಕಾಕತಾಳೀಯವಾಗಿದೆ. ನನಗೆ ಮೂಢನಂಬಿಕೆ, ಮೌಢ್ಯಗಳಲ್ಲಿ ನಂಬಿಕೆ ಇಲ್ಲ. ಆಗಂತೇಳಿ ದೇವರನ್ನು ನಂಬದೆ ಇರಲ್ಲ, ದೇವರನ್ನು ನಂಬುತ್ತೇನೆ. ಸಮಾಜಕ್ಕೆ ಒಳ್ಳೆಯದಾಗುವುದನ್ನು ನಂಬುತ್ತೇನೆ. ಕೆಟ್ಟದಾಗೋದನ್ನು ನಂಬೋದಿಲ್ಲ ಎಂದರು.
ಹಂಪಿ ವಿರೂಪಾಕ್ಷನಿಗೆ ಅಂಟಿತ್ತು ಮೌಢ್ಯ
ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತೆ ಅನ್ನುವ ಮೂಢನಂಬಿಕೆ ಇದೆ. 1973ರ ನ.2ರಂದು ಹಂಪಿಗೆ ಆಗಮಿಸಿದ್ದ ದೇವರಾಜ ಅರಸು, ಇಲ್ಲಿ ಬಂದು ಹೋದ ಕೆಲವೇ ದಿನಗಳಲ್ಲಿ ಅಧಿಕಾರ ಬಿಟ್ಟು ಕೊಡಬೇಕಾಗಿ ಬಂದಿತ್ತು. ಹೀಗಾಗಿ ಅಂದಿನಿಂದಲೇ ಈ ಕ್ಷೇತ್ರಕ್ಕೆ ಅಪವಾದ ಅಂಟಿಕೊಂಡಿತ್ತು. ಆನಂತರ, ಎಚ್.ಡಿ.ದೇವೇಗೌಡ, ಧರಮ್ ಸಿಂಗ್, ಎಸ್.ಎಂ. ಕೃಷ್ಣ, ಬಿಎಸ್ ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ ಅವರು ಕೂಡ ಕಾಕತಾಳೀಯ ಎಂಬಂತೆ ವಿರೂಪಾಕ್ಷ ದೇವಸ್ಥಾನಕ್ಕೆ ಬಂದು ಹೋದ ಕೆಲವೇ ಸಮಯದ ಅಂತರದಲ್ಲಿ ಅಧಿಕಾರ ಕಳಕೊಂಡಿದ್ದರು. ಉಪ ಪ್ರಧಾನಿಯಾಗಿದ್ದ ಎಲ್.ಕೆ. ಆಡ್ವಾಣಿ ಕೂಡ ಹಂಪಿಗೆ ಬಂದು ಹೋದ ಕೆಲವು ದಿನಗಳಲ್ಲಿ ಅಧಿಕಾರ ತ್ಯಜಿಸಬೇಕಾಗಿ ಬಂದಿತ್ತು. ಆದರೆ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಢ್ಯ ನಂಬುವುದಿಲ್ಲ ಎನ್ನುತ್ತಲೇ ಹಂಪಿಗೆ ಬಂದು ರುದ್ರಾಕ್ಷಿ ಮಾಲೆ ಧರಿಸಿ ಪೂಜೆ ಮಾಡಿದ್ದಾರೆ. ನಾಸ್ತಿಕವಾದಿ ಎಂದು ಹೀಗಳೆಯುವ ಮಂದಿಗೂ ದಿಟ್ಟ ಉತ್ತರ ನೀಡಿದ್ದಾರೆ.
Defying the myth that those who visit Virupaksha Temple in Hampi would lose power, Chief Minister Siddaramaiah flagged off Karnataka Sambhrama – 50, the year-long celebration of renaming the State as Karnataka, after visiting the Virupaksha Temple in the UNESCO World Heritage Site of Hampi and paying his respect to the god on Thursday.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 05:18 pm
Mangalore Correspondent
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm