ಬ್ರೇಕಿಂಗ್ ನ್ಯೂಸ್
13-11-20 08:22 am Bangalore Correspondent ಕರ್ನಾಟಕ
ಬೆಂಗಳೂರು, ನವೆಂಬರ್ 13: ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಓದುಗರಲ್ಲಿ ಓದಿನ ಹುಚ್ಚು ಹತ್ತಿಸಿದ್ದ ಅಕ್ಷರ ಮಾಂತ್ರಿಕ, ನಾಡು ಕಂಡ ಖ್ಯಾತ ಪತ್ರಕರ್ತ ರವಿ ಬೆಳಗೆರೆ(62) ಇನ್ನಿಲ್ಲ. ರವಿಯವರು ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಪದ್ಮನಾಭ ನಗರದಲ್ಲಿರುವ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಹೃದಯಾಘಾತಕ್ಕೀಡಾಗಿದ್ದು ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಡರಾತ್ರಿ 2.30ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ರವಿ ಬೆಳಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
1995ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಿಂದ ಹೊರಬಂದು ಸ್ವಂತ ಟ್ಯಾಬ್ಲಾಯ್ಡ್ ಪತ್ರಿಕೆ ಆರಂಭಿಸಿದ್ದ ರವಿಯವರು, ಅದಕ್ಕೆ ಹಾಯ್ ಬೆಂಗಳೂರ್ ಹೆಸರಿಟ್ಟಿದ್ದರು. ಪತ್ರಿಕೆಯಲ್ಲಿ ಬರುತ್ತಿದ್ದ ಅವರ ಥರಾವರಿ ಅಂಕಣಗಳು, ವಿಶಿಷ್ಟ ಶೈಲಿಯ ಬರವಣಿಗೆ ಕನ್ನಡದಲ್ಲಿ ಹೊಸ ಓದುಗ ಬಳಗವನ್ನೇ ಸೃಷ್ಟಿ ಮಾಡಿತ್ತು. ಖಾಸ್ ಬಾತ್, ಬಾಟಂ ಐಟಮ್ ರೀತಿಯ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತು ಅಂದರೆ ಓದುಗರು ವಾರ ಪತ್ರಿಕೆಯನ್ನು ಕಾದು ಕುಳಿತು ತೆಗೆದುಕೊಳ್ಳುವಷ್ಟರ ಮಟ್ಟಿಗಿತ್ತು. ಆ ಕಾಲದಲ್ಲಿ ಅತ್ಯಂತ ಯಶಸ್ವೀ ಮತ್ತು ಜನರ ಮನೆಮಾತಾಗಿದ್ದ ಪ್ರತಿಸ್ಪರ್ಧಿ ಲಂಕೇಶ್ ಪತ್ರಿಕೆಯನ್ನು ಕೆಲವೇ ಸಮಯದಲ್ಲಿ ಹಿಂದಿಕ್ಕಿದ್ದಲ್ಲದೆ ಕನ್ನಡದಲ್ಲಿ ಹಾಯ್ ಬೆಂಗಳೂರ್ ಅನ್ನು ಅತಿ ಹೆಚ್ಚು ಮಾರಾಟವಾಗುವ ಪತ್ರಿಕೆಯಾಗಿ ರೂಪಿಸಿದ್ದರು. ಬರೀಯ ಕ್ರೈಂ ಸುದ್ದಿಯನ್ನು ರಂಜನಾತ್ಮಕ ರೀತಿಯಲ್ಲಿ ಬರೆಯುತ್ತಿದ್ದುದಲ್ಲದೆ ಮನಸ್ಸಿಗೆ ಸಂಬಂಧಪಟ್ಟ ಖಾಸಗಿ ಬದುಕಿನ ವಿಚಾರಗಳನ್ನು ರಸವತ್ತಾಗಿ ಬರೆಯುವುದರಲ್ಲಿ ರವಿ ಪಳಗಿದ್ದರು. ಅವರ ಅಂಕಣಗಳು ಬಳಿಕ ಪುಸ್ತಕ ರೂಪದಲ್ಲಿ ಬಂದಾಗ ಬಿಸಿ ದೋಸೆಯಂತೆ ಖರ್ಚಾಗಿದ್ದು ಅವರ ಮಾಂತ್ರಿಕ ಸೆಳೆತಕ್ಕೆ ಸಾಕ್ಷಿ.
ಇದಲ್ಲದೆ, ಓ ಮನಸೇ ಎಂದು ಪ್ರತ್ಯೇಕವಾಗಿ ವೀಕ್ಲಿಯನ್ನೂ ಪುಸ್ತಕ ರೂಪದಲ್ಲಿ ತರುತ್ತಿದ್ದರು. ಮಹಿಳೆಯರು, ಯುವತಿಯರು, ಯುವ ಓದುಗರಲ್ಲಿ ಕಚಗುಳಿ ಇಡುತ್ತಿದ್ದ ಅವರ ವಿಶಿಷ್ಟ ಬರವಣಿಗೆ ಓ ಮನಸೇ ಪತ್ರಿಕೆಯಲ್ಲಿ ಇರುತ್ತಿದ್ದವು. ಈ ಎರಡೂ ಪತ್ರಿಕೆಗಳಲ್ಲಿ ಅಸಂಖ್ಯಾತ ಪತ್ರಕರ್ತರನ್ನು ರೂಪಿಸಿದ್ದು ರವಿ ಬೆಳಗೆರೆ ಹೆಚ್ಚುಗಾರಿಕೆ. ಅನಂತ ಚಿನಿವಾರ್, ಮಂಜುನಾಥ್ ಚಾಂದ್ ಮುಂತಾದ ಖ್ಯಾತನಾಮರು ರವಿಯವರ ಜೊತೆಗೇ ಪಳಗಿದವರು. ಹಿಂದಿ, ಉರ್ದು, ಇಂಗ್ಲಿಷ್, ಮರಾಠಿ, ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ರವಿಯವರದ ಅನುವಾದದಲ್ಲೂ ವಿಶಿಷ್ಟ ಬರವಣಿಗೆ. ಅನುವಾದಿತ ಕಾದಂಬರಿಗಳು, ಕಥೆಗಳು, ಜೀವನ ಕಥನ, ಪ್ರವಾಸ ಕಥನಗಳಿಗೆ ಲೆಕ್ಕವಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾದ, 1961ರ ಭಾರತ - ಚೀನಾ ಯುದ್ಧದಲ್ಲಿ ಭಾರತೀಯ ಸೈನಿಕರ ಹೀನಾಯ ಸೋಲಿಗೆ ಕಾರಣವಾದ ಅಂಶಗಳು, ಆಗಿನ ರಾಜಕಾರಣಿಗಳು ವರ್ತಿಸಿದ ರೀತಿ ಬಗ್ಗೆ ಬರೆದಿದ್ದ ಮೇಜರ್ ದಳವಿಯವರ ಇಂಗ್ಲಿಷ್ ಪುಸ್ತಕ ಹಿಮಾಲಯನ್ ಬ್ಲಂಡರ್ ಅನ್ನು ಕನ್ನಡಕ್ಕೆ ತಂದಿದ್ದ ರವಿಯವರು ಓದುಗರ ಕಣ್ಣಲ್ಲಿ ನೀರು ಇಳಿಸಿದ್ದರು. ಆ ಪುಸ್ತಕ ಮಾರುಕಟ್ಟೆಯಲ್ಲಿ ಸಿಗದಷ್ಟರ ಮಟ್ಟಿಗೆ ಮಾರಾಟ ಆಗಿತ್ತು. ಖ್ಯಾತ ಇಂಗ್ಲಿಷ್ ಪತ್ರಕರ್ತ ಖುಷ್ಚಂತ್ ಸಿಂಗರ ಶಿಷ್ಯ, ಅವರ ಗರಡಿಯಲ್ಲಿ ಬೆಳೆದವನು ಎಂದು ಹೇಳಿಕೊಳ್ಳುತ್ತಲೇ ಅವರ ಬರಹಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಹಲವಾರು ಉರ್ದು ಸಾಹಿತ್ಯಗಳನ್ನು ಕನ್ನಡಕ್ಕೆ ತಂದಿದ್ದು , ಅದರ ಶಾಯರಿಗಳನ್ನು ತನ್ನ ಭಾಷಣಗಳಲ್ಲಿ ಹೇಳಿಕೊಂಡು ತನ್ನ ಉರ್ದು ಭಾಷೆಯ ಸಾಹಿತ್ಯ ಸಮೃದ್ಧಿಯನ್ನು ತೋರಿಸಿದ್ದು ರವಿ ಬೆಳಗರೆ. ನಿರ್ಮಾಪಕರು ಬಯಸಿದರೆ ಒಂದೇ ರಾತ್ರಿಯಲ್ಲಿ ಕುಳಿತು ಯಾವುದೇ ಬಗೆಯ ಸಿನಿಮಾ ಕತೆಗಳನ್ನು ಬರೆದು ಕೊಡುತ್ತಿದ್ದರು. ಅದಕ್ಕಾಗಿ ಅಷ್ಟೇ ಪೇಮೆಂಟನ್ನೂ ಪಡೆಯುತ್ತಿದ್ದರು.
ಇಂಥ ರವಿ ಬೆಳಗೆರೆ ಕನ್ನಡದಲ್ಲಿ ಅತಿ ಹೆಚ್ಚು ವಿವಾದಕ್ಕೂ ಒಳಗಾಗಿದ್ದ ಪತ್ರಕರ್ತ. ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ಸೇಡು, ದ್ವೇಷ ಮತ್ತಿತರ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಬರವಣಿಗೆಯಲ್ಲಿ ಮಾಂತ್ರಿಕ ಹಿಡಿತ ಹೊಂದಿದ್ದರೂ ರಾಜಕಾರಣಿಗಳು, ಉದ್ಯಮಿಗಳ ಖಾಸಗಿ ಬದುಕನ್ನು ತೆರೆದಿಟ್ಟು ಕೋರ್ಟು ಕಚೇರಿ ಅಲೆದಾಡಿದ್ದಾರೆ. ಪತ್ರಿಕೆಯ ಜೊತೆ ಜೊತೆಗೇ ಪ್ರಾರ್ಥನಾ ಎನ್ನುವ ಶಾಲೆಯನ್ನು ಕಟ್ಟಿ ನೂರಾರು ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಇಂಥ ರವಿ ಬೆಳಗೆರೆಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಗೆ ಇಬ್ಬರು ಹೆಣ್ಮಕ್ಕಳಿದ್ದರೆ, ಎರಡನೇ ಪತ್ನಿಗೆ ಒಬ್ಬ ಮಗನಿದ್ದಾನೆ. ಮೂರು ವರ್ಷಗಳ ಹಿಂದೆ ತನ್ನದೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಗೆ ಸುಪಾರಿ ಕೊಟ್ಟು ಕೊಲ್ಲಲು ಪ್ರಯತ್ನಿಸಿದ್ದು ಬಳಿಕ ಜೈಲು ಪಾಲಾಗಿದ್ದೂ ಆಗಿತ್ತು. ಇದೇನೇ ಇದ್ದರೂ, ಕನ್ನಡದ ಪತ್ರಿಕೋದ್ಯಮ ಕಂಡ ಅತ್ಯಂತ ಅಪರೂಪದ ಬರಹಗಾರ, ಅನುವಾದಕಾರ, ವಿಶಿಷ್ಟ ಶೈಲಿಯ ಲೇಖಕ, ಪತ್ರಕರ್ತ ರವಿ ಬೆಳಗೆರೆ ಎಂಬ ರೈಟಿಂಗ್ ಮೆಷಿನ್ ಇನ್ನು ನೆನಪು ಮಾತ್ರ.
ರವಿ ಬೆಳಗೆರೆಯ ಪಾರ್ಥಿವ ಶರೀರವನ್ನು ಅವರ ಕನಸಿನ ಶಾಲೆ ಪ್ರಾರ್ಥನಾದಲ್ಲಿ ಸಾರ್ವಜನಿಕ ದರ್ಶನಕ್ಕಿಡಲು ವ್ಯವಸ್ಥೆ ಮಾಡಲಾಗಿದೆ.
Writer and Journalist Ravi Belagere passes at 62 in Bangalore at Appollo Hospital after he had a Heart Attack. Ravi Belagere was the Chief Editor of Hi Bangalore News Paper.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm