Ballari, Pranavananda Swamiji: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ, ಡಿಕೆಶಿ ಮಾತ್ರ ಕಾರಣರಲ್ಲ, ಹರಿಪ್ರಸಾದ್ ಕೊಡುಗೆಯಿದೆ ; ಪ್ರಣವಾನಂದ 

07-12-23 03:42 pm       HK News Desk   ಕರ್ನಾಟಕ

ಕಾಂಗ್ರೆಸ್ ಬಿ.ಕೆ ಹರಿಪ್ರಸಾದ್ ಅವರನ್ನು ಕಡೆಗಣಿಸಿರುವುದು ಸರಿಯಲ್ಲ, ಅವರಿಗೆ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಈಡಿಗ ಸಮಾಜ ಪ್ರಣಾವನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಳ್ಳಾರಿ, ಡಿ.7: ಕಾಂಗ್ರೆಸ್ ಬಿ.ಕೆ ಹರಿಪ್ರಸಾದ್ ಅವರನ್ನು ಕಡೆಗಣಿಸಿರುವುದು ಸರಿಯಲ್ಲ, ಅವರಿಗೆ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಈಡಿಗ ಸಮಾಜ ಪ್ರಣಾವನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ಪಕ್ಷದಲ್ಲಿ ಬಿ.ಕೆ.ಹರಿಪ್ರಸಾದ್ ಹಿರಿಯರಿದ್ದಾರೆ, ಆದರೆ ಕಾಂಗ್ರೆಸ್ ನಡೆಸಿಕೊಳ್ಳುವ ರೀತಿ ಸರಿಯಾಗಿ ಇಲ್ಲ ಅನ್ಸುತ್ತೆ, ಈಡಿಗ ಸಮಾಜದಲ್ಲಿ ಈಗಾಗಲೇ ಶಾಸಕರು ಮಂತ್ರಿಗಳು ಇದ್ದಾರೆ. ಹಾಗಂತ ಸಚಿವ ಮಧು ಬಂಗಾರಪ್ಪನವರನ್ನು ವಿರೋಧ ಮಾಡ್ತಿಲ್ಲ. ಅವರು ನಮ್ಮ ಸಮಾಜದ ಮಂತ್ರಿಗಳಿದ್ದಾರೆ‌.‌ ಆದರೆ ಬಿ.ಕೆ ಹರಿಪ್ರಸಾದ್'ಗೆ ಕಾಂಗ್ರೆಸ್ ದೊಡ್ಡ ಸ್ಥಾನ ಕೊಡಬೇಕಿತ್ತು‌. 

Thank Siddaramaiah for not making me minister': Congress leader BK  Hariprasad's open attack on CM | Karnataka News - News9live

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ, ಡಿಕೆಶಿ ಮಾತ್ರ ಕಾರಣರಲ್ಲ, ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಬಿ.ಕೆ.ಹರಿಪ್ರಸಾದ್ ಅವರ ಕೊಡುಗೆಯಿದೆ‌. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಹರಿಪ್ರಸಾದ್ ಕೊಡುಗೆ ಸಾಕಷ್ಟಿದೆ‌. 

ಕಾಂಗ್ರೆಸ್ ಪಾರ್ಟಿ ಬಿ.ಕೆ.ಹರಿಪ್ರಸಾದ್ ಗೆ ಗೌರವ ಕೊಡ್ತಿಲ್ಲ‌. ಇದನ್ನ ಕಾಂಗ್ರೆಸ್ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.‌

Samaja Pranavananda Swamiji has said that it is not right for the Congress to ignore B K Hariprasad and he should be given due status.