MP Pratap Simha, Brother Arrest: : ಮರಗಳ್ಳತನ ಆರೋಪ ; ಮೈಸೂರು ಸಂಸದನ ತಮ್ಮ ವಿಕ್ರಂ ಅಂದರ್, ಮೌನ ಮುರಿದ ಸಿಂಹ, ನೆಲದ ಕಾನೂನು ಎಲ್ಲರಿಗೂ ಒಂದೆ, ನಮ್ಮ ಅಧಿಕಾರಿಗಳು ಶಾಮೀಲಾಗಿದ್ದರೂ ಕಠಿಣ ಕ್ರಮ ಎಂದ ಖಂಡ್ರೆ

31-12-23 04:43 pm       HK News Desk   ಕರ್ನಾಟಕ

ಜಿಲ್ಲೆಯ ನಂದಗೋಡನಹಳ್ಳಿಯಲ್ಲಿ ತಾವು ಲೀಜ್ ಗೆ ಪಡೆದಿದ್ದ ಜಮೀನಿನಲ್ಲಿ 126 ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಎದುರಿಸುತ್ತಿರುವ, ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಆನಂತರ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಹಾಸನ, ಡಿ.31: ಜಿಲ್ಲೆಯ ನಂದಗೋಡನಹಳ್ಳಿಯಲ್ಲಿ ತಾವು ಲೀಜ್ ಗೆ ಪಡೆದಿದ್ದ ಜಮೀನಿನಲ್ಲಿ 126 ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಎದುರಿಸುತ್ತಿರುವ, ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಆನಂತರ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ವಾರದ ಹಿಂದೆ, ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪದ ಮೇರೆಗೆ ಅವರ ವಿರುದ್ಧ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಆಧರಿಸಿ ಅವರನ್ನು ವಶಕ್ಕೆ ಪಡೆಯಲು ವಿಕ್ರಂ ಅವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.

ಆದರೆ, ವಿಕ್ರಂ ಅವರು ತಲೆಮರೆಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಅರಣ್ಯಾಧಿಕಾರಿಗಳಿಗೆ, ಅವರು ಬೆಂಗಳೂರಿನಲ್ಲಿ ಇರುವ ಕುರಿತಾಗಿ ಮಾಹಿತಿ ಸಿಕ್ತಿತ್ತು. ಹಾಗಾಗಿ, ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು ಅವರನ್ನು ಬೆಂಗಳೂರಿನಲ್ಲೇ ಇರುವ ಜಾರುಬಂಡೆ ಕಾವಲ್ ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಆನಂತರ ಅವರನ್ನು ಬಂಧಿಸಿ ಹಾಸನಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾಯ್ದೆ ಉಲ್ಲಂಘನೆಯೇ ಬಂಧನಕ್ಕೆ ಕಾರಣ

ಮೂಲಗಳ ಪ್ರಕಾರ, ಯಾರೇ ಆಗಲೀ ಮರಗಳನ್ನು ಕಡಿಯುವಂತಿಲ್ಲ. ಮರಗಳನ್ನು ಕತ್ತರಿಸಲು ಸೂಕ್ತವಾದ ಕಾರಣಗಳು ಬೇಕು ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಕಡ್ಡಾಯ. ಆದರೆ, ಅನುಮತಿಯನ್ನು ಪಡೆಯದೇ, ಜಮೀನಿನ ಮಾಲೀಕರಿಗೂ ತಿಳಿಸದೇ ಸ್ವಯಂಪ್ರೇರಿತವಾಗಿ ಮರಗಳನ್ನು ಕತ್ತರಿಸಿದ್ದಾರೆಂದು ಅವರ ವಿರುದ್ದ ದೂರು ದಾಖಲಾಗಿತ್ತು.

ದೂರಿನ ಆಧಾರದಲ್ಲಿ ಹಾಸನ ಜಿಲ್ಲೆಯ ಅರಣ್ಯಾಧಿಕಾರಿಗಳು ವಿಕ್ರಂ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ, ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಆಗಿನಿಂದಲೂ ವಿಕ್ರಂ ಅವರು ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದೆ. ಪದೇ ಪದೇ ನೋಟಿಸ್ ಜಾರಿಗೊಳಿಸಿದ್ದರೂ ವಿಕ್ರಂ ಅವರು ವಿಚಾರಣೆಗೆ ಸ್ಪಂದಿಸಿರಲಿಲ್ಲ. ಡಿ. 25ರಂದು ಅವರ ನಿವಾಸಕ್ಕೆ ಹೋಗಿದ್ದ ಅರಣ್ಯಾಧಿಕಾರಿಗಳು, ಅಲ್ಲಿಯೂ ಅವರು ಸಿಕ್ಕದೇ ಇದ್ದಿದ್ದರಿಂದ ಹಿಂದಿರುಗಿದ್ದರು ಎನ್ನಲಾಗಿದೆ.

ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಅರಣ್ಯ ಇಲಾಖೆಯ ಗಮನಕ್ಕೂ ತರದೇ ಕಡಿಯಲಾಗಿದೆ ಎಂಬ ದೂರಿನ ಆಧಾರದ ಮೇಲೆ ಸಂಸದ ಪ್ರತಾಪ್ ಸಿಂಹ ಸಹೋದರನ ಮೇಲೆ ಎಫ್‍ಐಆರ್ ದಾಖಲಾಗಿತ್ತು. ಅಲ್ಲದೇ ಜಮೀನಿನ ಮಾಲೀಕರಾದ ಜಯಮ್ಮ ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು..

ಪ್ರಕರಣ ತನಿಖೆಗೆ ಇಳಿದ ವೇಳೆ ವಿಕ್ರಂ ಸಿಂಹ ಹಾಸನದಿಂದ ಬೆಂಗಳೂರಿಗೆ ಶಿಫ್ಟ ಆದ ಬಗ್ಗೆ ಮಾಹಿತಿ ಪಡೆದ ಬೇಲೂರು ಪೊಲೀಸರ ತಂಡ, ನಿನ್ನೆ ಅಷ್ಟೇ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹನನ್ನು ವಶಕ್ಕೆ ಪಡೆಯಿತು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಕುಟುಕಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಎಫ್‍ಐಆರ್ ಎಂಬ ಟ್ಯಾಗ್ ಲೈನ್ ನೀಡಿದ ಸಂಸದರು, ಪ್ರಮುಖ ಆರೋಪಿಗಳ ಹೆಸರನ್ನು ಅಂಡರ್ ಲೈನ್ ಮಾಡಿದ್ದಾರೆ. ಎಫ್‍ಐಆರ್ ಪ್ರತಿಯಲ್ಲಿ ಪ್ರಕರಣದ ಮೊದಲ ಆರೋಪಿ ರಾಕೇಶ್ ಶೆಟ್ಟಿ ಎಂದಿದ್ದು, 2ನೇ ಆರೋಪಿ ಜಯಮ್ಮ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದ ಆರೋಪಿ ಅಲ್ಲದೇ ಇದ್ದರೂ ವಿಕ್ರಂ ಬಂಧನ ಎಂದು ಮಾರ್ಮಿಕವಾಗಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

Centre doing grave injustice to Karnataka on drought relief, says Minister Eshwar  Khandre

ಸಹೋದರ ವಿಕ್ರಂ ಸಿಂಹ ಬಂಧನದ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, ನೆಲದ ಕಾನೂನು ಎಲ್ಲರಿಗೂ ಒಂದೆ. ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಮರ ಕಡಿಯುವ ಪ್ರಕರಣ ಹೆಚ್ಚಾಗಿದೆ. ವಿಕ್ರಂ ಸಿಂಹ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಮಾಡೋದೆಲ್ಲ ಮಾಡಿ, ಕಾಂಗ್ರೆಸ್ ಅಂತ ಎಲ್ಲಾ ಲೇಪನ ಕೊಡೋದು ಸರಿಯಲ್ಲ. ದಾಖಲೆ ಎಲ್ಲವೂ ಇದೆಯಲ್ಲ ಎಂದು ಕಿಡಿಕಾರಿದರು

ವಿಕ್ರಂ ಸಿಂಹ 126 ಮರ ಕಡಿದ ದಾಖಲೆ ಇದೆ. ಹಿರಿಯ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ಇದರಲ್ಲಿ ನಮ್ಮ ಅಧಿಕಾರಿಗಳು ಶಾಮೀಲಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಹೋದರನಿಗೆ ಜಾಮೀನು ಮಂಜೂರು : 

ಮರಗಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ಮಂಜೂರಾಗಿದೆ. ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದರು. ಬೇಲೂರು ಬಳಿಯ ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಆರೋಪದಡಿ ವಿಕ್ರಂ ಸಿಂಹನನ್ನು ಅಧಿಕಾರಿಗಳು ಬಂಧಿಸಿದ್ದರು.

BJP Mysuru MP Pratap Simha brother arrested for illegally felling 126 trees in Karnataka, slams Eshwar Kandre. Forest department officials arrested Vikram Simha, the brother of Bharatiya Janata Party (BJP) Member of Parliament Pratap Simha on Saturday, December 30 in connection with a tree felling case. Vikram was accused of  illegal felling of 126 trees on government land at Nandagondanahalli in Belur taluk in Hassan district.