Srikanth Poojari, Hubbali arrest, BJP Protest: ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಅರೆಸ್ಟ್ ; ಬೆಂಗಳೂರಿನಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಧರಣಿ, ರಾಮಭಕ್ತ ವಿರೋಧಿ ಸಿಎಂ ಸಿದ್ದರಾಮಯ್ಯ ಎಂದು ಧಿಕ್ಕಾರ, ಬೆದರಿಕೆ ತಂತ್ರಗಳಿಗೆ ಕಾರ್ಯಕರ್ತರು ಹೆದ್ರಲ್ಲ  

03-01-24 12:33 pm       Bangalore Correspondent   ಕರ್ನಾಟಕ

ಹಳೆಯ ಕೇಸ್ ಗೆ ಮರುಜೀವ ನೀಡಿ ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಳಿದಿದೆ.

ಬೆಂಗಳೂರು, ಜ 03: ಹಳೆಯ ಕೇಸ್ ಗೆ ಮರುಜೀವ ನೀಡಿ ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಳಿದಿದೆ. ರಾಮಭಕ್ತನ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಹೂಡಿದ  ಕಾರ್ಯಕರ್ತರು ಭಾರತ್ ಮಾತಾಕೀ ಜೈ, ಜೈಶ್ರೀರಾಮ್ ಜಯಘೋಷ ಮೊಳಗಿಸಿದರು. ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರ, ರಾಮಭಕ್ತ ವಿರೋಧಿ ಸಿಎಂ ಸಿದ್ದರಾಮಯ್ಯ ಎಂದು ಧಿಕ್ಕಾರ ಕೂಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆದಿದ್ದು, ಇಡೀ ದೇಶದಲ್ಲಿ ಸಂಭ್ರಮ, ಸಡಗರದ ವಾತಾವರಣ ಸೃಷ್ಟಿಯಾಗಿದೆ‌. ರಾಮನ ಮಂತ್ರಾಕ್ಷತೆ ವಿತರಣೆ, ರಾಮನ ದೀಪಾರಾಧನೆಗೆ ಜನರು ಉತ್ಸಾಹದಿಂದ ಸಜ್ಜಾಗುತ್ತಿದ್ದರೆ, ಕಾಂಗ್ರೆಸ್ ಗೆ ಹಿಂದುಗಳು ಮತ್ತು ರಾಮನ ಭಕ್ತರ ಬಗ್ಗೆ ಭಯ ಶುರುವಾಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಿ‌.ಸಿ.ಮೋಹನ್, ಶಾಸಕರಾದ ಕೆ.ಗೋಪಾಲಯ್ಯ, ಚನ್ನಬಸಪ್ಪ, ಡಾ‌.ಸಿ‌‌.ಎನ್.ಅಶ್ವತ್ಥ ನಾರಾಯಣ ಮತ್ತಿತರರು ಕಿಡಿಕಾರಿದರು‌

ಹುಬ್ಬಳ್ಳಿಯ ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ 31 ವರ್ಷಗಳ ಹಿಂದೆ ರಾಮ ಮಂದಿರದಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ಕೇಸ್ ಮರು ತೆರೆಯಲಾಗಿದೆ. ದಶಕಗಳ ಸುಮ್ಮನಿದ್ದವರು ಈಗ ಎಚ್ಚೆತ್ತಿದ್ದು, ವಾಸ್ತವಾಂಶ ಮರೆಮಾಚಲು ಅನೇಕ ಕೇಸ್ ಗಳಿದ್ದವು ಎಂದು ಸಮಜಾಯಿಷಿ ನೀಡುತ್ತಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದ ಆತನನ್ನು

ದಬ್ಬಾಳಿಕೆ, ದೌರ್ಜನ್ಯಗಳಿಗೆ ರಾಮನ ಭಕ್ತರು ಬೆದರುವುದಿಲ್ಲ. ಹಿಂದು ಕಾರ್ಯಕರ್ತರು ಕುಗ್ಗುವುದಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲೆಸೆದ ಶಾಸಕ ಚನ್ನಬಸಪ್ಪ, ಮಾಡಿರುವ ತಪ್ಪು ಒಪ್ಪಿಕೊಂಡು ಹಿಂದು ಕಾರ್ಯಕರ್ತನನ್ನು ಬಿಡುಗಡೆ ಮಾಡುವ ಮೂಲಕ ತಿದ್ದಿಕೊಳ್ಳಬೇಕು. ಇಲ್ಲವಾದರೆ ರಾಮ ಭಕ್ತರೇ ನಿಮ್ಮ ಸರ್ಕಾರಕ್ಕೆ ಮುಳುಗು ತರುತ್ತಾರೆ ಎಂದು ಎಚ್ಚರಿಸಿದರು‌.

ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭಯ ಕಾಡಲಾರಂಭಿಸಿದ್ದು, ಮತಬ್ಯಾಂಕ್ ರಾಜಕಾರಣಕ್ಕೆ ಇಳಿದಿದೆ. ಒಂದು ಸಮುದಾಯವನ್ನು ಮೆಚ್ಚಿಸುವುದಕ್ಕಾಗಿ ರಾಮಭಕ್ತನ ಮೇಲೆ ದಬ್ಬಾಳಿಕೆ ಮಾಡಿದ್ದು, ಇಂತಹ ಬೆದರಿಕೆ ತಂತ್ರಗಳಿಗೆ ಕಾರ್ಯಕರ್ತರು ಹೆದರುವುದಿಲ್ಲ, ಹಿಂಜರಿಯುವುದಿಲ್ಲ ಎಂದು ಸಂಸದ ಪಿ.ಸಿ.ಮೋಹನ್ ಗುಡುಗಿದರು.

Srikanth Poojari from Hubbali arrested, protest by BJP in Bangalore over Congress. Srikanth Poojari, 51-year-old kar sevak from Hubballi was arrested on Sunday in connection with a case registered 31 years ago in 1992. State BJP leaders have alleged that Poojari was arrested to intimidate BJP and Right-wing group workers.