Karnataka High Court, Shakti Scheme, Bengalore: ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆ ವಿಸ್ತರಿಸಲು ಹೈಕೋರ್ಟ್ ಸೂಚನೆ ; ರಾಜ್ಯ ಸರ್ಕಾರಕ್ಕೆ ಪೀಕಲಾಟ 

06-01-24 09:50 pm       Bangalore Correspondent   ಕರ್ನಾಟಕ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರು, ಜ.6: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರರ ಮನವಿಯನ್ನು ಎರಡು ತಿಂಗಳೊಳಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. 

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ಕೋರಿ ಕಾರ್ಕಳದ ಖಾಸಗಿ ಬಸ್ ಮಾಲೀಕ ಶರತ್ ಕುಮಾರ್ ಶೆಟ್ಟಿ ಎಂಬವರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಖಾಸಗಿ ಬಸ್ ನಿರ್ವಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಖಾಸಗಿ ಬಸ್ ಗಳಿಗೂ ಯೋಜನೆ ಅನ್ವಯವಾಗಬೇಕು. ಸರ್ಕಾರಿ ಬಸ್​​ಗಳಂತೆ ಮಹಿಳೆಯರ ಪ್ರಯಾಣ ವೆಚ್ಚವನ್ನು ಖಾಸಗಿ ಬಸ್ ಗಳಿಗೂ ಮರುಪಾವತಿ ಮಾಡಬೇಕು ಎಂದು ಶರತ್ ಅವರು ಹೈಕೋರ್ಟ್​ಗೆ ಸಲ್ಲಿಸಿದ್ದರು. 

Shakti Scheme New Update: free travel for women in private buses - News  Next Live

KSRTC Announces 32 Special Bus Services For Onam. Travel From Bengaluru To  Kerala With KSRTC

ಈ ಬಗ್ಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ರಾಜ್ಯ ಸರ್ಕಾರ ಮತ್ತು ಆರ್‌ಟಿಒಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಉಚಿತ ಯೋಜನೆ ಜಾರಿ ಬಂದ ವೇಳೆ ಕರಾವಳಿಯ ದಕ್ಷಿಣ ಕನ್ನಡ ‌ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರು ತಮಗೂ ಯೋಜನೆ ವಿಸ್ತರಿಸಲು ಆಗ್ರಹಿಸಿದ್ದರು.

The High Court of Karnataka on Friday directed the state government to consider, within two months, a plea by private transport firms to extend the Shakti Scheme offering free bus travel for women to their buses as well.