Lok Sabha elections, DC Sasikanth Senthil: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ; ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕೇಂದ್ರ ತಂಡಕ್ಕೆ ನೇಮಕ 

06-01-24 10:00 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿದ್ದು ಸೆಂಟ್ರಲ್ ವಾರ್ ರೂಂ ತಂಡಕ್ಕೆ ಪ್ರತಿನಿಧಿಗಳನ್ನು ನೇಮಕಗೊಳಿಸಿ ಎಐಸಿಸಿ ಜನರಲ್ ಸೆಕ್ರೆಟರಿ ಕೆಸಿ ವೇಣುಗೋಪಾಲ್ ಆದೇಶ ಮಾಡಿದ್ದಾರೆ. 

ಬೆಂಗಳೂರು, ಜ.6: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿದ್ದು ಸೆಂಟ್ರಲ್ ವಾರ್ ರೂಂ ತಂಡಕ್ಕೆ ಪ್ರತಿನಿಧಿಗಳನ್ನು ನೇಮಕಗೊಳಿಸಿ ಎಐಸಿಸಿ ಜನರಲ್ ಸೆಕ್ರೆಟರಿ ಕೆಸಿ ವೇಣುಗೋಪಾಲ್ ಆದೇಶ ಮಾಡಿದ್ದಾರೆ. 

ವಾರ್ ರೂಂ ತಂಡದ ಸಂಘಟನಾ ಸಮಿತಿಗೆ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಗೋಕುಲ್ ಬುಟೈಲ್, ನವೀನ್ ಶರ್ಮಾ, ವರುಣ್ ಸಂತೋಷ್, ಅರವಿಂದ್ ಕುಮಾರ್ ನೇಮಕಗೊಂಡಿದ್ದಾರೆ. 

Learnings from 2008-09, 2013-14 and 2018-19 election cycles: Karnataka  matters not for 2023 state or 2024 Lok Sabha polls

ವಾರ್ ರೂಂ ತಂಡದ ಸಂವಹನ ವಿಭಾಗಕ್ಕೆ ವೈಭವ್ ವಾಲಿಯಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಸಿಕಾಂತ್ ಸೆಂಥಿಲ್ ಐಎಎಸ್‌ ಹುದ್ದೆಗೆ ರಾಜಿನಾಮೆ ನೀಡಿದ ಬಳಿಕ ಕಾಂಗ್ರೆಸ್ ಪರವಾಗಿ ಕೆಲಸ ಮಾಡಲಾರಂಭಿಸಿದ್ದರು. ಕಳೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಇಲ್ಲದೇ ಇದ್ದರೂ, ಪಕ್ಷದಲ್ಲಿ ಸ್ಟ್ರಾಟಜಿ ಮೇಕರ್ ಆಗಿ ಕೆಲಸ ಮಾಡಿದ್ದರು. ಇವರ ತಂಡ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದಾಗಿ ಹೇಳಿತ್ತು. ಹೀಗಾಗಿ ಸೆಂಥಿಲ್ ಭರವಸೆ ಮೂಡಿಸಿದ್ದು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ತಂಡಕ್ಕೆ ನೇಮಕಗೊಂಡಿದ್ದಾರೆ.

AICC general secretary KC Venugopal has ordered the appointment of representatives to the Central War Room team as the Congress gears up for the Lok Sabha elections.