ಕೊಡಗಿನ ಕುಂದಬೆಟ್ಟದಲ್ಲಿ ಪಾಂಡವರ ಕಾಲದ ಶಿವಲಿಂಗ ಪತ್ತೆ ; ಗೋಳಿಮರದಡಿಯಲ್ಲಿತ್ತು ಬೃಹತ್ ಲಿಂಗ 

08-01-24 02:24 pm       HK News Desk   ಕರ್ನಾಟಕ

ದಕ್ಷಿಣ ಕೊಡಗಿನ ಕುಂದ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಪಾಂಡವರ ಕಾಲದ್ದು ಎನ್ನಲಾದ ನಾಲ್ಕು ಅಡಿ ಎತ್ತರದ ಕಲ್ಲಿ‌ನ ಶಿವಲಿಂಗ ಪತ್ತೆಯಾಗಿದೆ. 

ಮಡಿಕೇರಿ, ಜ.8: ದಕ್ಷಿಣ ಕೊಡಗಿನ ಕುಂದ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಪಾಂಡವರ ಕಾಲದ್ದು ಎನ್ನಲಾದ ನಾಲ್ಕು ಅಡಿ ಎತ್ತರದ ಕಲ್ಲಿ‌ನ ಶಿವಲಿಂಗ ಪತ್ತೆಯಾಗಿದೆ. 

ಗ್ರಾಮದ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್ ಅವರ ಕಾಫಿ ತೋಟದಲ್ಲಿ ಬೃಹತ್ ಗೋಳಿಮರದ ಬುಡದಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಸುಮಾರು 800 ವರ್ಷ ಇತಿಹಾಸವುಳ್ಳ ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದ್ದು, ಕುಟುಂಬಸ್ಥರು ಸಂತೋಷಗೊಂಡಿದ್ದಾರೆ.
 
ಗೋಳಿಮರದ ಅಡಿಯಲ್ಲಿ ಈ 4 ಅಡಿ ಎತ್ತರದ 3 ಅಡಿ ಅಗಲದ ಪುರಾತನ ಕಾಲದ ಬೃಹತ್ ಶಿವಲಿಂಗ ಪತ್ತೆಯಾಗಿರುವುದರಿಂದ ಇದು ಅಪಾರವಾದ ಶಕ್ತಿಯನ್ನು ಹೊಂದಿರುವುದಾಗಿ ಸ್ಥಳಕ್ಕಾಗಮಿಸಿದ ಹಿರಿಯ ಅರ್ಚಕರು ಹಾಗೂ ಗುಮ್ಮಟ್ಟಿರ ಕುಟುಂಬದ ಹಿರಿಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಿವಲಿಂಗದೊಂದಿಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆಗಳು, ಸೋಮಸೂತ್ರ, ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತಿವೆ. ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದಿಂದ ಸ್ವಲ್ಪ ಅಂತರದಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಪಾಂಡವರು ಈ ಭಾಗದಲ್ಲಿ ಸಂಚರಿಸುವ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರು ಎಂದು ಕಾರ್ಕಳದ ಶಿಲ್ಪಿಗಳಾದ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. 

ಮಣ್ಣಿನ ಅಡಿಯಲ್ಲಿ ಲಭಿಸಿರುವ ಶಿವಲಿಂಗದ ಎರಡು ಕಡೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಆಗಿನ ಕಾಲದ ಬಿಳಿಕಲ್ಲಿನಿಂದ ಹಾಗೂ ಕಾಡು ಸವಕಲ್ಲಿನಿಂದ ಈ ಶಿವಲಿಂಗ ಮಾಡಲಾಗಿದೆ. ಶಿವಲಿಂಗ ಪತ್ತೆಯಾದ ಸ್ಥಳದಿಂದ ಅನತಿ ದೂರದ ಎತ್ತರದ ಕುಂದಬೆಟ್ಟದಲ್ಲಿ ಇಂದಿಗೂ ಶಿವನು ನೆಲೆಸಿರುವ, ಒಂದೇ ರಾತ್ರಿಯಲ್ಲಿ ಕಟ್ಟಿರುವುದು ಎನ್ನಲಾದ ಬಾಗಿಲು ಇಲ್ಲದಿರುವ ಕಲ್ಲಿನ ದೇವಸ್ಥಾನವು ಪ್ರಸಿದ್ಧಿ ಪಡೆದಿದೆ. ಮಣ್ಣಿನಡಿಯಲ್ಲಿದ್ದ ಶಿವಲಿಂಗವನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಕಲ್ಯಾಟಂಡ ಅಜ್ಜಪ್ಪ ಮಾರ್ಗದರ್ಶನದಲ್ಲಿ ಶಿವಲಿಂಗ ಹೊರಗೆ ತೆಗೆಯಲಾಗಿದೆ. ಈ ವೇಳೆ ಶಿವಲಿಂಗವನ್ನು ಎಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಜ್ಜಪ್ಪನವರ ನುಡಿಯಂತೆ ಕರುವಿನ ಸಹಾಯದಿಂದ ಶಿವಲಿಂಗಕ್ಕೆ ಹಗ್ಗ ಕಟ್ಟಿ ಮೇಲೆ ಎತ್ತಲಾಗಿದೆ. ಇದರೊಂದಿಗೆ ಭೂಮಿ ಅಡಿಯಲ್ಲಿ ಸಿಕ್ಕಿರುವ ಹಲವು ವಸ್ತುಗಳನ್ನು ಜೋಡಿಸಿ ಸ್ಥಳದಲ್ಲಿ ಶೇಖರಿಸಿ ಇಡಲಾಗಿದೆ.

A remarkable discovery has been made in the quaint village of Kunda in the Ponnampet taluk of Kodagu district. A massive Shivalinga believed to date back to the Pandava era, has been unearthed, leaving the locals astounded by its presence in the tomb of Kilan Ganapati.