ಬ್ರೇಕಿಂಗ್ ನ್ಯೂಸ್
08-01-24 02:52 pm HK News Desk ಕರ್ನಾಟಕ
ಬೆಳಗಾವಿ, ಜ.8: ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಮರು ತಾವಾಗೇ ಅವನ್ನು ಕಿತ್ತು ಹಾಕಬೇಕು. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, 500 ವರ್ಷದ ಕೆಳಗೆ ರಾಮ ಹುಟ್ಟಿದ ಜಾಗದಲ್ಲಿದ್ದ ದೇವಸ್ಥಾನ ಕಿತ್ತು ಹಾಕಿದ್ದರು. ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿದ್ದ. ಬಾಬ್ರಿ ಮಸೀದಿ ಅಂದ್ರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಲಾಠಿ ಗೋಲಿ ಖಾಯೆಂಗೆ ಮಂದಿರ ವಹಿ ಬನಾಯೇಂಗೆ ಎಂದು ಕೂಗ್ತಿದ್ದೆವು. ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ. ಅಲ್ಲಿರುವ ಮಸೀದಿಗಳು ಧ್ವಂಸ ಆಗುತ್ತೆ, ದೇವಸ್ಥಾನ ತಲೆ ಎತ್ತುತ್ತದೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಮರು ನೀವಾಗಿ ನೀವೇ ಕಿತ್ತು ಹಾಕಬೇಕು. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕುತ್ತೇವೆ ಎಂದಿದ್ದಾರೆ.
ಸಿದ್ದರಾಮಯ್ಯ ನಾವು ಜಾತ್ಯತೀತವಾದಿಗಳು ಅಂತಾರೆ. ನಾವು ನಿಮಗಿಂತ ಜಾತ್ಯತೀತವಾದಿಗಳು. ಹಿಂದೂ ಮುಸ್ಲಿಂ ಅನ್ಯೋನ್ಯವಾಗಿರಬೇಕು ಎನ್ನುವವರು ನಾವು. ನೀವು ನಮಾಜ್ ಮಾಡ್ಕೊಳ್ಳಿ, ನಾವು ಅದರ ತಂಟೆಗೆ ಬರಲ್ಲ. ಬಾಬರ್ ಕಟ್ಟಡ ಈ ದೇಶದ ಜನರಿಗೆ ನೀವು ಗುಲಾಮರಾಗಿದ್ದಿರಿ ಅಂತ ಹೇಳ್ತಿತ್ತು. ನೀವಾಗಿ ನೀವೇ ಮಥುರಾ ಹಾಗೂ ಕೃಷ್ಣಾದ ಮಸೀದಿ ತೆಗೆಯಿರಿ. ತೆಗೆಯದಿದ್ದರೆ ಕೊಲೆಗಳಾಗುತ್ತೊ ಇನ್ನೇನಾಗುತ್ತೊ ಗೊತ್ತಿಲ್ಲ. ಅಧಿಕಾರದಾಸೆಗೆ ಪಾಕಿಸ್ತಾನವನ್ನು ನೆಹರೂ ಮಾಡಿದರು. ಈ ದೇಶದಲ್ಲಿ ಈಗಾಗಲೇ ತ್ರಿವಳಿ ತಲಾಕ್ ಬಂದಿದೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಸಂದೇಶ ಸಾರಿದೆ. ನಮಗೆ ಒಂದು ಹೆಣ್ಣು ಒಂದು ಗಂಡು ಇತ್ತು. ಆದರೆ ಮುಸ್ಲಿಮರಿಗೆ ಹಮ್ ಪಾಂಚ್ ಹಮ್ಕೊ ಪಚ್ಚಿಸ್ ಎಂಬಂತಾಗಿದೆ.
ಗೋವು ನಮ್ಮ ತಾಯಿ. ಗೋಹತ್ಯೆ ನಿಷೇಧ ಮಾಡಿದ್ದೀವಿ. ಗೋಹತ್ಯೆ ನಿಷೇಧ ಕಾಯ್ದೆಯನ್ನು ತಾಕತ್ತಿದ್ದರೆ ಹಿಂಪಡೆಯಿರಿ. ಅದನ್ನ ನಾವು ಹಿಂದೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
KS Eshwarappa, former Karnataka Chief Minister and senior Bharatiya Janata Party (BJP) leader, on Sunday again warned the Muslims of dire consequences if they did not vacate the mosques allegedly constructed on demolished temple lands.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm