ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ ; ಕಾಂಗ್ರೆಸ್ ಲೇವಡಿ

09-01-24 10:36 pm       Bangalore Correspondent   ಕರ್ನಾಟಕ

ಕರ್ನಾಟಕದ ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ First rank ಪಡೆಯಲು ಪೈಪೋಟಿಗೆ ಬಿದ್ದಿರುವಂತಿದೆ, ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಬೆಂಗಳೂರು, ಜ.9: ಕರ್ನಾಟಕದ ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ First rank ಪಡೆಯಲು ಪೈಪೋಟಿಗೆ ಬಿದ್ದಿರುವಂತಿದೆ, ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ, ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೇ? ಎಂದು ಪ್ರಶ್ನಿಸಿದೆ. 

1976ರಲ್ಲಿ ಕಲರ್ ಕ್ಯಾಮರಾ ಅಸ್ತಿತ್ವದಲ್ಲಿತ್ತಾ? ಇರಬಹುದೇನೋ. ಏಕೆಂದರೆ 1988ರಲ್ಲೇ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲವೇ ಮೋದಿ! ಬಿಜೆಪಿ ಮೋದಿಯ ಬಗ್ಗೆ ಹೇಗೆ ಫೇಕ್ ನೆರೇಟಿವ್ ಗಳನ್ನು ಕಟ್ಟುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ! ಅಂದಹಾಗೆ, ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದಲೇ ಕಲಿತಿರಾ ಪಾಟೀಲರೇ? ಎಂದು ಕುಹಕವಾಡಿದೆ.

Bjp leaders in Karnataka seem to be vying for the first rank in WhatsApp University, with the Congress saying that WhatsApp University is the only source of bjp leaders' "ignorance" editing.