Sindagi Accident: ಸಿಂದಗಿ ; ಬಸ್ - ಬೈಕ್ ಮುಖಮುಖಿ ಡಿಕ್ಕಿ, ಬೈಕ್ ಸವಾರ ಬಲಿ, ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ

10-01-24 08:02 pm       Bangalore Correspondent   ಕರ್ನಾಟಕ

ಬೈಕ್ ಗೆ ಡಿಕ್ಕಿಯಾಗಿ ಸಾರಿಗೆ ಬಸ್ ಹೊತ್ತಿ ಉರಿದಿದ್ದು, ಬಸ್ ಪ್ರಯಾಣಿಕರು ಅಪಾಯದಿಂದ ಪಾರಾದರೂ ಬೈಕ್ ಸವಾರ ಮಾತ್ರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಂದಗಿ ರಸ್ತೆಯಲ್ಲಿ ಸಂಭವಿಸಿದೆ.

ವಿಜಯಪುರ, ಜ 10: ಬೈಕ್ ಗೆ ಡಿಕ್ಕಿಯಾಗಿ ಸಾರಿಗೆ ಬಸ್ ಹೊತ್ತಿ ಉರಿದಿದ್ದು, ಬಸ್ ಪ್ರಯಾಣಿಕರು ಅಪಾಯದಿಂದ ಪಾರಾದರೂ ಬೈಕ್ ಸವಾರ ಮಾತ್ರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಂದಗಿ ರಸ್ತೆಯಲ್ಲಿ ಸಂಭವಿಸಿದೆ.

ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ-52 ರಲ್ಲಿ ಸಿಂದಗಿ ತಾಲೂಕಿನ ಗಬಸಾವಳಗಿ ಬಳಿ ಅಪಘಾತ ಸಂಭವಿಸಿದ್ದು, ಮೋರಟಗಿ ಕಡೆಯಿಂದ ಸಿಂದಗಿ ಕಡೆ ಹೊರಟಿದ್ದ ಸರ್ಕಾರಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಬಸ್ಸಿನ ಅಡಿಯಲ್ಲಿ ಸಿಲುಕಿದ ಪರಿಣಾಮ ಪೆಟ್ರೋಲ್ ಸೋರಿಕೆಯಾಗಿ ಏಕಾಏಕಿ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ.

ಬಸ್ ಗೆ ಬೆಂಕಿ‌ ಹೊತ್ತಿಕೊಳ್ಳುತ್ತಲೇ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದ ಪ್ರಯಾಣಿಕರು, ಕೂಡಲೇ ಬಸ್ ನಿಂದ ಕೆಳಗೆ ಇಳಿದ ಕಾರಣ ಭಾರಿ ದುರಂತ ತಪ್ಪಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೂ, ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸಿಂದಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತ ಬೈಕ್ ಸವಾರ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.

In a tragic incident, a bike rider died on the spot after a bus collided with a bike and caught fire on Sindagi Road in Vijayapura district. The accident took place near Gabasavalagi in Sindagi taluk on Vijayapura-Kalaburagi National Highway-52 when the government bus, which was on its way to Sindagi from Moratagi side, collided with a bike. While the bike rider died on the spot, the bike got stuck under the bus and the petrol leaked and the bus caught fire.