Cm Siddaramaiah, Budget 2024: ವಿನಾಶಕಾರಿ ಭಾರತ ಮಾಡುವ ಬಜೆಟ್ ಇದು, 45 ವರ್ಷಗಳಲ್ಲಿ‌ ನಿರುದ್ಯೋಗ ಜಾಸ್ತಿಯಾಗಿದೆ ಅದಕ್ಕೆ ಪರಿಹಾರ ಇಲ್ಲ , ಬರಗಾಲದ ಪರಿಹಾರಕ್ಕೂ ಒಂದು ಪೈಸೆ ಬಂದಿಲ್ಲ; ಸಿಎಂ ಸಿದ್ದರಾಮಯ್ಯ ಕಿಡಿ 

01-02-24 07:15 pm       Bangalore Correspondent   ಕರ್ನಾಟಕ

ವಿಕಸಿತ ಭಾರತ ಅಲ್ಲ, ವಿಕಸಿತ ಬಜೆಟ್ ಅಲ್ಲ. ಕೇಂದ್ರ ಸರ್ಕಾರದ್ದು ವಿನಾಶಕಾರಿ ಭಾರತ ಮಾಡುವ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಬಡವರು, ಮಹಿಳೆಯರು, ಯುವಕರು ಹಾಗೂ ರೈತರ ಬಗ್ಗೆ ನಂಬಿಕೆ ಇದೆ ಎಂದು ಹೇಳುತ್ತಾರೆ. ಆದರೆ, ಇದೊಂದು ವಿನಾಶಕಾರಿ ಬಜೆಟ್ ಎ‌ಂದರು.

ಬೆಂಗಳೂರು, ಫೆ 01: ವಿಕಸಿತ ಭಾರತ ಅಲ್ಲ, ವಿಕಸಿತ ಬಜೆಟ್ ಅಲ್ಲ. ಕೇಂದ್ರ ಸರ್ಕಾರದ್ದು ವಿನಾಶಕಾರಿ ಭಾರತ ಮಾಡುವ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಬಡವರು, ಮಹಿಳೆಯರು, ಯುವಕರು ಹಾಗೂ ರೈತರ ಬಗ್ಗೆ ನಂಬಿಕೆ ಇದೆ ಎಂದು ಹೇಳುತ್ತಾರೆ. ಆದರೆ, ಇದೊಂದು ವಿನಾಶಕಾರಿ ಬಜೆಟ್ ಎ‌ಂದರು.

ನಾವು ಅನ್ನಭಾಗ್ಯ, ಯುವನಿಧಿ, ಶಕ್ತಿ, ಕೃಷಿ ಭಾಗ್ಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. 45 ವರ್ಷಗಳಲ್ಲಿ‌ ನಿರುದ್ಯೋಗ ಜಾಸ್ತಿಯಾಗಿದೆ. ಅದಕ್ಕೆ ಪರಿಹಾರ ಹೇಳಿಲ್ಲ. ಎಂಎಸ್​​ಪಿಗೆ ಕೆಲವೇ ಬೆಳೆಗಳನ್ನು ಸೇರಿಸಿದ್ದಾರೆ. ಭತ್ತ ರಾಗಿ ಗೋಧಿಯನ್ನು ಸೇರಿಸಿಲ್ಲ. ಇದೊಂದು ಚುನಾವಣಾ ಬಜೆಟ್. ದೇಶದ ಒಟ್ಟು ಸಾಲವನ್ನು 1.90 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಜೆಟ್ ಇದಾಗಿದೆ ಎಂದು ಕಿಡಿಕಾರಿದರು.

Budget 2024 Key Highlights LIVE Updates: No changes in direct, indirect tax  rates; FY25 fiscal deficit target at 5.1% | Mint

ಕಳೆದ ವರ್ಷಕ್ಕಿಂತ 5.8% ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ನಿರುದ್ಯೋಗ, ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಮಾತೇ ಆಡಿಲ್ಲ.‌ ಸಾಲ ಹೆಚ್ಚಾಗಿರುವುದು, ಒಟ್ಟು ಸಾಲದ ಪ್ರಮಾಣ ವಿಪರೀತ ಏರಿಕೆ ಆಗಿರುವುದನ್ನು ಹೇಳಿಲ್ಲ. ನಿರ್ಮಲಾ ಸೀತಾರಾಮನ್ ಅವರು 2024-25 ನೇ ವರ್ಷಕ್ಕೆ ಮಧ್ಯಂತರ ಆಯವ್ಯಯ ಮಂಡಿಸಿದ್ದಾರೆ. 47,65,758 ಕೋಟಿ ರೂ.ಗಾತ್ರದ ಬಜೆಟ್ ಇದಾಗಿದೆ. ಕಳೆದ ವರ್ಷಕ್ಕಿಂತ 2,62671 ಕೋಟಿ ಹೆಚ್ಚುವರಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರ ಈ ವರ್ಷ 5.8% ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಜೆಟ್​​ನ 47 ಲಕ್ಷ ಕೋಟಿ ರೂ.ಗಳಲ್ಲಿ 16,85494 ಕೋಟಿ ರೂ. ಸಾಲ ಮಾಡಿದ್ದಾರೆ. ಜನರ ಮುಂದೆ ಮುಚ್ಚಿಟ್ಟಿರುವುದೇ ಹೆಚ್ಚು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟಿಲ್ಲ. ನಿರುದ್ಯೋಗ, ಬೆಲೆ ಏರಿಕೆ, ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ತೆರಿಗೆಯನ್ನು ಕಾರ್ಪೊರೇಟ್​​ಗಳ ಮೇಲಿನ ಪ್ರಮಾಣ ಶೇ. 30ಕ್ಕೆ ಇಳಿಸಿ, ಉಳಿದ ಭಾರವನ್ನು ಬಡವರು, ಮಧ್ಯಮ ವರ್ಗದವರ ಮೇಲೆ ಹೇರಿದ್ದಾರೆ ಹಾಗೂ ಹೆಚ್ಚಿಸಿದ್ದಾರೆ. ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ದಲಿತರ ವಿರೋಧಿ ಬಜೆಟ್ ಆಗಿದ್ದು, ಅತ್ಯಂತ ನಿರಾಶಾದಾಯಕವಾಗಿದೆ ಎಂದು ಟೀಕಿಸಿದರು.

ದೇಶದ ವಿನಾಶಕಾರಿ ಕುಸಿತದ ಬಜೆಟ್:

2004-14ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಬೆಳವಣಿಗೆ ದರ 13.79% ಇತ್ತು. ಈಗ ಬಜೆಟ್ ಬೆಳವಣಿಗೆ 9.6%ಕ್ಕೆ ಕುಸಿತ ಕಂಡಿದೆ. ವಿಕಸಿತ ಎಂದು ಹೇಳಿಕೊಂಡು 9.6% ಗೆ ತಂದಿದ್ದಾರೆ. 4.19%ರಷ್ಟು ಕಡಿಮೆಯಾಗಿದೆ. ಜಿ.ಡಿ.ಪಿ ಬೆಳವಣಿಗೆ ಯುಪಿಎ ಸರ್ಕಾರದಲ್ಲಿ ಶೇ 11.14% ಇತ್ತು, ಎನ್.ಡಿ.ಎ ಕಾಲದಲ್ಲಿ 6.4% ಕ್ಕೆ ಕುಸಿತವಾಗಿದೆ. ಆದ್ದರಿಂದ ಇದು ದೇಶದ ವಿನಾಶಕಾರಿ ಕುಸಿತದ ಬಜೆಟ್ ಎಂದು ಸಿಎಂ ವ್ಯಾಖ್ಯಾನಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನ ಬಂದಿಲ್ಲ. 15ನೇ ಹಣಕಾಸು, ಫೆರಿಫೆರಲ್ ರಿಂಗ್ ರೋಡಿಗೆ ಹಣ ಬಂದಿಲ್ಲ. 5,300 ಕೋಟಿ, ಭದ್ರ ಮೇಲ್ದಂಡೆ ಯೋಜನೆಗೆ ನೀಡಿಲ್ಲ. ಬರಗಾಲದ ಪರಿಹಾರಕ್ಕೂ ಒಂದು ಪೈಸೆ ಬಂದಿಲ್ಲ. ದೇಶದ ಸಾರ್ವಭೌಮತೆ ಇರಬೇಕು. ಆದರೆ ರಾಜ್ಯಗಳಿಗೆ ಅವರ ಪಾಲು ಕೊಡಬೇಕು. ಕೇಂದ್ರವು ರಾಜ್ಯಗಳ ಪಾಲನ್ನು ಕೊಡುತ್ತಿಲ್ಲ. ನಮ್ಮಿಂದ 4 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡುವ ಕೇಂದ್ರ ಸರ್ಕಾರ ನಮಗೆ, ನಮ್ಮ ನಾಡಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದೆವು, ಪ್ರಯೋಜನ ಆಗಿಲ್ಲ. ಅಖಂಡ ಭಾರತ, ಅಖಂಡ ಕರ್ನಾಟಕ ಉಳಿಯಬೇಕು‌. ಇದಕ್ಕಾಗಿ ರಾಜ್ಯಗಳ ಪಾಲನ್ನು ಚಾಚೂ ತಪ್ಪದೇ ಕೊಡಬೇಕು ಎಂದು ಒತ್ತಾಯಿಸಿದರು.

Basavaraj Bommai: Karnataka CM Basavaraj Bommai hits back at Rahul Gandhi  on "40% commission sarkar" jibe - The Economic Times

ಸಿದ್ದರಾಮಯ್ಯ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿಲ್ಲ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಕರ್ನಾಟಕ ಸರ್ಕಾರಕ್ಕೆ ಅನ್ಯಾಯವಾಗಿದ್ದರೆ ಅದು ಬಿಜೆಪಿ ಸರ್ಕಾರದಿಂದ. ಬರಗಾಲವಿದೆ ಎಂದು 26 ಸಂಸದರು ಕೇಂದ್ರದ ಮುಂದೆ ಹೇಳಿದ್ದಾರೆಯೇ? ಈ ಎಲ್ಲ ಸಂಸದರೂ ರಾಜ್ಯದ ಪರವಾಗಿ ಇವತ್ತಿನವರೆಗೂ ಬಾಯಿಯನ್ನೇ ಬಿಟ್ಟಿಲ್ಲ. ನಾವು ಕೇಳುತ್ತಿರುವುದು ಕರ್ನಾಟಕದ ಜನರಿಗೆ ಅನ್ಯಾಯ ಮಾಡಬೇಡಿ ಎಂದು. ಆದರೆ, ಸಂಸದರು ಹೇಳುತ್ತಲೇ ಇಲ್ಲ. ನಮ್ಮ ಸಂಸದರಿಗೆ ಮೋದಿ ಮತ್ತು ಅಮಿತ್ ಶಾ ಅವರನ್ನು ಕಂಡರೆ ಭಯ. ಅದಕ್ಕೇ ಅವರು ಕೇಳುವುದಿಲ್ಲ ಎಂದರು.

ಆಯವ್ಯಯವೇ ಶ್ವೇತಪತ್ರ: ಕರ್ನಾಟಕದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಆಯವ್ಯಯವೇ ಶ್ವೇತಪತ್ರ. 16ನೇ ಹಣಕಾಸು ಆಯೋಗದ ಮುಂದೆ ನಮ್ಮ ಮಂಡನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಎಷ್ಟು ಅನುದಾನ ಮೀಸಲಿಟ್ಟಿದೆ ಎನ್ನುವುದನ್ನು ಪರಿಶೀಲಿಸಬೇಕಿದೆ, ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿಎಂ ಹೇಳಿದರು.

Karnataka Cm Siddaramaiah disappointed over Budget 2024. Says no single Rupee for Drought effected areas, no news about Unemployment he added.