ರಾಜಕೀಯ ಪಿತೂರಿಗೆ ನಾವು ಬಲಿಯಾದೆವು, ಸಂಬಂಧ ಕೆಡಬಾರದೆಂದು ವಿಷಕಂಠನಾಗಿದ್ದೇನೆ, ಪಿತೂರಿ ತಿಳಿಯದಷ್ಟು ಅಮಾಯಕನಲ್ಲ ; ಜೆಡಿಎಸ್ ಬಗ್ಗೆ ಸಿಟಿ ರವಿ ಗುಟುರು 

03-02-24 10:20 pm       HK News Desk   ಕರ್ನಾಟಕ

ಹಾಸನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ಅಸಮಾಧಾನ ಹೊರ ಹಾಕಿದ್ದಾರೆ.‌

ಹಾಸನ, ಫೆ.3: ಹಾಸನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ಅಸಮಾಧಾನ ಹೊರ ಹಾಕಿದ್ದಾರೆ.‌ ನಾನು ಮತ್ತು ಪ್ರೀತಂ ಗೌಡ ಪಿತೂರಿಗೆ ಬಲಿಯಾಗಿದ್ದೇವೆ. ಕೆಲವು ಸಲ ವಿಷಕಂಠ ಆಗ್ಬೇಕಾಗುತ್ತೆ. ಈಗ ಯಾರ ಬಗ್ಗೆಯೂ ದೂರುವುದಿಲ್ಲ ಎಂದು ಹೇಳಿ ಜೆಡಿಎಸ್ ನಾಯಕರ ಬಗ್ಗೆ ಪರೋಕ್ಷ ಅಸಮಾಧಾನ ಹೇಳಿದ್ದಾರೆ. 

ಚಿಕ್ಕಮಗಳೂರಿನಲ್ಲಿ ನಾನು ಹಾಗೂ ಹಾಸನದಲ್ಲಿ ಪ್ರೀತಂ ಕೆಲಸ ಮಾಡಿಯೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ. ನಮ್ಮನ್ನು ಕೆಲಸ ಮಾಡಿಲ್ಲ ಅಂತ ಯಾರೂ ದೂರುವುದಿಲ್ಲ. ರಾಜಕೀಯ ಪಿತೂರಿಗೆ ನಾವು ಬಲಿಯಾದ್ವಿ. ಚಿಕ್ಕಮಗಳೂರಿನಲ್ಲಿ ಜೆಡಿಎಸ್ 2018 ರಲ್ಲಿ 40 ಸಾವಿರ ಓಟು ಪಡೆದಿತ್ತು. ಇತ್ತೀಚಿನ ಚುನಾವಣೆಯಲ್ಲಿ 1700 ಓಟು ಪಡೆದಿದೆ. 

Former PM Deve Gowda, HD Kumaraswamy greet BJP for winning elections in 3  states

ಕಾಂಗ್ರೆಸ್ ಹಾಸನದಲ್ಲಿ ಕಳೆದ ಬಾರಿ 38 ಸಾವಿರ ತಗೊಂಡಿತ್ತು. ಈಗ 4 ಸಾವಿರ ಮತ ಮಾತ್ರ ಗಳಿಸಿದೆ. ಪಿತೂರಿ ಹೇಗೆ ನಡೆದಿದೆ ಅಂತ ಬಿಡಿಸಿ ಹೇಳಬೇಕಿಲ್ಲ. ಸಂಬಂಧ ಕೆಡಬಾರದು ಅಂತ ನಾವು ನೀಲಕಂಠ ಆಗಿದ್ದೇವೆ, ವಿಷಕಂಠ ಆಗಿದ್ದೇವೆ. ಒಳ್ಳೆಯ ಉದ್ದೇಶಕ್ಕಾಗಿ ಸಂಬಂಧ ಕೆಡಬಾರದು ಅಂತ ಇದ್ದೀವಿ‌. 

ಈಗ ಎಲ್ಲವನ್ನು ಬಿಡಿಸಿ ಹೇಳಲು ಆಗುವುದಿಲ್ಲ. ಎಲ್ಲಿ ಏನು, ಹೇಗೆ ಪಿತೂರಿ ನಡೀತು ಅಂತ ಗೊತ್ತು. ಎಲ್ಲವನ್ನು ಹೊಟ್ಟೆಯಲ್ಲಿ  ಇಟ್ಗೊಂಡಿದ್ದೀವಿ, ನಾವು ಅಷ್ಟು ಅಮಾಯಕರಲ್ಲ. ನಾವು ತತ್ವದ ಮೇಲೆ ನಂಬಿಕೆ ಇಟ್ಟವರು. ನಾನು ವಿನಂತಿ ಮಾಡೋದು ಇಷ್ಟೇ. ದೇಶ ಮೊದಲು ಅಂತ ಕೆಲಸ ಮಾಡ್ತಿದ್ಧೇವೆ. ಮೋದಿ ಅವರ ಚಿತ್ರ ಕಣ್ಮುಂದೆ ಬರಬೇಕು, ಆ ಕಾರಣಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ ಎಂದರು.

"Saffron is the colour that has inspired all of us. It is not just colour, it has a legacy of 1,000 years," said former BJP minister CT Ravi.