Bjp Mudigere fight, Video: ಮೂಡಿಗೆರೆ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ವಿರೋಧ, ಸ್ಥಾನ ಕೈತಪ್ಪಿದ ಸಿಟ್ಟಿನಲ್ಲಿ ನಡುಬೀದಿಯಲ್ಲಿ ಮುಖಂಡರ ಹೊಡೆದಾಟ ; ವಿಡಿಯೋ ವೈರಲ್, ಎಫ್ಐಆರ್ ದಾಖಲು 

10-02-24 11:48 am       HK News Desk   ಕರ್ನಾಟಕ

ಮೂಡಿಗೆರೆ ಬಿಜೆಪಿ ತಾಲೂಕು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಇಬ್ಬರು ಮುಖಂಡರು ನಡುಬೀದಿಯಲ್ಲಿ ಹೊಡೆದಾಟ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಮೂಡಿಗೆರೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಚಿಕ್ಕಮಗಳೂರು, ಫೆ.10: ಮೂಡಿಗೆರೆ ಬಿಜೆಪಿ ತಾಲೂಕು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಇಬ್ಬರು ಮುಖಂಡರು ನಡುಬೀದಿಯಲ್ಲಿ ಹೊಡೆದಾಟ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಮೂಡಿಗೆರೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಮೂಡಿಗೆರೆ ತಾಲೂಕು ಸಮಿತಿಯ ಅಧ್ಯಕ್ಷ ಸ್ಥಾನ ತಪ್ಪಲು ಹಾಲಿ ತಾಪಂ ಸದಸ್ಯ ಕೆ.ಸಿ ರತನ್ ಕಾರಣ ಎಂದು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ ಹಲ್ಲೆ ನಡೆಸಿದ್ದಾರೆ. ತಾಲೂಕು ಅಧ್ಯಕ್ಷರಾಗಿ ಟಿಎಂ ಗಜೇಂದ್ರ ಅವರನ್ನು ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ನೇಮಕ ಮಾಡಿದ್ದರು. ಇದರಿಂದ ಕೋಪಗೊಂಡ ಪುಟ್ಟಣ್ಣ ಮತ್ತು ಬೆಂಬಲಿಗರು ತಾಲೂಕು ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಇದೇ ವೇಳೆ, ಪುಟ್ಟಣ್ಣ ಮತ್ತು ಕೆಸಿ ರತನ್ ನಡುವೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲೇ ಹೊಡೆದಾಟ ನಡೆಸಿದ್ದಾರೆ. ಬಟ್ಟೆ ಹರಿದುಕೊಂಡು ಇಬ್ಬರೂ ಪರಸ್ಪರ ಕಿತ್ತಾಡಿದ್ದು ಇತರರು ಬಿಡಿಸಲು ಬಂದರೂ ಕೇಳದೆ ಹೊಡೆದಾಟ ನಡೆಸಿದ್ದಾರೆ. ಇದನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು ನೆಲಕ್ಕುರುಳಿಸಿ ಹೊಡೆದಾಡಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. 

ಮೂಡಿಗೆರೆಯ ತಾಲೂಕು ಬಿಜೆಪಿ ಕಚೇರಿ ಬಳಿಯಲ್ಲೇ ಘಟನೆ ನಡೆದಿದೆ. ಕೆ.ಸಿ ರತನ್ ಹಸ್ತಕ್ಷೇಪದಿಂದ ತನ್ನ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎಂದು ಸಿಟ್ಟಿನಲ್ಲಿ ಹೊಡೆದಾಡಿದ್ದಾರೆ. ಹೊಸತಾಗಿ ಅಧ್ಯಕ್ಷರಾದ ಗಜೇಂದ್ರ ಬಗ್ಗೆ ಪುಟ್ಟಣ್ಣ ಮತ್ತು ಕನ್ನಳ್ಳಿ ಭರತ್ ಟೀಮ್ ವಿರೋಧ ವ್ಯಕ್ತಪಡಿಸಿದ್ದು ಕಚೇರಿ ಎದುರಲ್ಲಿ ಪ್ರತಿಭಟನೆ ನಡೆಸಿದ್ದರು.‌ ಹಲ್ಲೆಗೊಳಗಾದ ರತನ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Party leaders #fight in the middle of the street during the election of the #Mudigere #BJP taluk president selection #BREAKING_NEWS @INCKarnataka pic.twitter.com/44zNNHy7Sm

— Headline Karnataka (@hknewsonline) February 10, 2024

Bjp workers fight in the middle of the road over selection of taluk President post in Mudigere, video viral.