ಪ್ರಿವೆಡ್ಡಿಂಗ್ ಶೂಟ್ ಗೆ ಅಪರೇಷನ್ ಥಿಯೇಟರ್ ಸೆಲೆಕ್ಟ್ ಮಾಡಿಕೊಂಡ ಡಾಕ್ಟರ್ ; ಅಪರೇಷನ್ ಮಾಡೋ ತರ ಪೋಸ್ ಕೊಟ್ಟ ಜೋಡಿ, ಶೋಕಿ ಮಾಡಲು ಹೋಗಿ ಮದುವೆ ಮುಂಚೆ ಕೆಲಸ ಕಳ್ಕೊಂಡ 'ಭಾವಿ ಪತಿ'

10-02-24 10:40 pm       HK News Desk   ಕರ್ನಾಟಕ

ಸಮುದಾಯ ಆರೋಗ್ಯ ಕೇಂದ್ರದ ಅಪರೇಷನ್ ಥಿಯೇಟರ್ ನಲ್ಲಿ‌ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ನಡೆಸಿದ್ದ ಡಾ.ಅಭಿಷೇಕ್ ರವರನ್ನ ಸೇವೆಯಿಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ, ಫೆ 10: ಸಮುದಾಯ ಆರೋಗ್ಯ ಕೇಂದ್ರದ ಅಪರೇಷನ್ ಥಿಯೇಟರ್ ನಲ್ಲಿ‌ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ನಡೆಸಿದ್ದ ಡಾ.ಅಭಿಷೇಕ್ ರವರನ್ನ ಸೇವೆಯಿಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಸ್ಪತ್ರೆಯ ಐಸಿಯು ವೈದ್ಯರಾಗಿದ್ದ ಡಾ. ಅಭಿಷೇಕ್  ಫೆ7 ರಂದು ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿರುವ ಕುರಿತು ಸೋಶಿಯಲ್ ಮೆಡಿದಲ್ಲಿ ಸಕತ್ ವೈರಲ್ ಆಗಿತ್ತು 

ಕಾನೂನು ಬಾಹಿರ ಕೃತ್ಯ ಎಸಗಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಗೊಂಡಿದ್ದ ಗುತ್ತಿಗೆ ಆಧಾರಿತ ಡಾಕ್ಟರ್ ಅಭಿಷೇಕ್ ರನ್ನ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಳ ಆದೇಶದಲ್ಲಿ ಉಲ್ಲೇಖಿಸಿದ್ದಾರೆ

ಪ್ರಿವೆಡ್ಡಿಂಗ್ ವಿಡಿಯೋ ಸಾಮಾಜಿಕ ಜಾಲತಾಲಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋದಲ್ಲಿ ವ್ಯಕ್ತಿಯೊಬ್ಬರಿಗೆ ಆಪರೇಷನ್ ಥಿಯೇಟರ್ ನಲ್ಲಿ ಅಪರೇಷನ್ ನಡೆಸುತ್ತಿರುವ ಡಾ.ಅಭಿಷೇಕ್ ತನ್ನ ಭಾವಿ ಪತ್ನಿಯನ್ನು ಮತ್ತೊಂದು ಬದಿಯಲ್ಲಿ ನಿಲ್ಲಿಸಿಕೊಂಡು ತನಗೆ ಸಹಾಯ ಮಾಡುತ್ತಿರುವಂತೆ ನಟಿಸಿರುವ ವಿಡಿಯೋ, ಇತರರು ಖುಷಿಯಲ್ಲಿ ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸರಕಾರಿ ಆಸ್ಪತ್ರೆಯ ಅಪರೇಷನ್ ಥಿಯೇಟರ್ ನ್ನು ಹೀಗೆ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಬೇಜವಬ್ದಾರಿ ಮೇರೆದಿರುವ ಡಾ.ಅಭಿಷೇಕ್ ಜೋಡಿಯ ವಿರುದ್ದ ಎಲ್ಲೆಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.

Deputy Commissioner T. Venkatesh has dismissed Dr. Abhishek from service for shooting a pre-wedding video at the Operation Theatre of a Community Health Centre (CHC).