ಬ್ರೇಕಿಂಗ್ ನ್ಯೂಸ್
12-02-24 11:10 pm HK News Desk ಕರ್ನಾಟಕ
ಶಿವಮೊಗ್ಗ, ಫೆ.12: ಸಮಾಜಘಾತುಕ, ಉದ್ರೇಕಕಾರಿ ಭಾಷಣಗಳು ಕೇಳಿಬರುತ್ತಿವೆ. ಇವರ ದೇಶಭಕ್ತಿ ಮುಗಿಲು ಮುಟ್ಟಿದೆ. ಡಿ.ಕೆ. ಸುರೇಶ್ ರಾಜ್ಯಕ್ಕಾದ ಅನ್ಯಾಯವನ್ನು ನೋವಿನಿಂದ ಹತಾಶೆಯಿಂದ ಹೇಳಿಕೊಂಡಿದ್ದರು. ಹತಾಶೆಯಿಂದ ನೀಡಿದ ಹೇಳಿಕೆ ಯಾರೂ ಗಮನಿಸಿಲ್ಲ. ಊಟದಲ್ಲಿ ಸಿಕ್ಕ ಕಲ್ಲಿನಂತೆ ತೆಗೆದು ಊಟ ಮಾಡಬೇಕಿತ್ತು. ಕಲ್ಲು ಸಿಕ್ಕರೆ ಇಡೀ ಊಟ ಯಾರೂ ಎಸೆಯುವುದಿಲ್ಲ. ರಾಜ್ಯಕ್ಕಾದ ಅನ್ಯಾಯ ಪ್ರಶ್ನೆ ಮಾಡಿದ್ದು ತಪ್ಪಾ....? ಎಂದು ಮಾಜಿ ಎಂ.ಎಲ್.ಸಿ. ಆಯನೂರು ಮಂಜುನಾಥ್, ಈಶ್ವರಪ್ಪ ಗುಂಡಿಕ್ಕುವ ಹೇಳಿಕೆಗೆ ಖಡಕ್ ಟಾಂಗ್ ಇಟ್ಟಿದ್ದಾರೆ.
ಡಿ.ಕೆ. ಸುರೇಶ್ ಅವರ ರಾಜ್ಯಕ್ಕಾದ ಅನ್ಯಾಯ ಪ್ರಶ್ನೆ ಮಾಡಿದ್ದನ್ನು ಯಾರು ಗಮನಿಸಿಲ್ಲ. ರಾಜ್ಯದ ಬಗ್ಗೆ ಇರುವ ಪ್ರೀತಿ ಬಗ್ಗೆ ಯಾರೂ ಗಮನಿಸಿಲ್ಲ. ಅವರ ಒಂದು ಪದದ ಬಗ್ಗೆ ಆಕ್ಷೇಪ ಎತ್ತಲಾಗುತ್ತಿದೆ. ಕೇಂದ್ರ ಅನುದಾನ, ಪರಿಹಾರ ಕೊಟ್ಟಿಲ್ಲ ಎಂದಾದರೆ, ನಮ್ಮ ದಕ್ಷಿಣ ರಾಜ್ಯಗಳು ಬೇರೆ ಮಾಡಿ ಎಂದು ಸಹಜವಾಗಿ ಹೇಳಿದ್ದಾರೆ ಅಷ್ಟೇ. ಡಿ.ಕೆ. ಸುರೇಶ್ ಯಾವುದೇ ದುರುದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ಪ್ರಜಾತಂತ್ರದಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ತರಲು ಆಗುತ್ತಾ ಎಂದು ಪ್ರಶ್ನೆ ಮಾಡಿದರು.
ಬರಗಾಲದ ಪರಿಹಾರ ಅನುದಾನ ಬರಲಿಲ್ಲ. ಬಿಜೆಪಿಯವರಿಗೆ ಯಾವಾಗ ರಾಜಕೀಯ ಅಭದ್ರತೆ ಕಾಡುತ್ತೋ ಆಗ ಇಂತಹ ಹೇಳಿಕೆ ನೀಡುತ್ತಾರೆ. ಬಿಜೆಪಿಯವರು ಇಂತಹ ಹೇಳಿಕೆ ನೀಡಿ ತಮ್ಮ ಇರುವಿಕೆ ತೋರಿಸುತ್ತಾರೆ. ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆಗ ಯಾವ ಎಂಪಿಯೂ ಪ್ರಶ್ನೆ ಮಾಡಿಲ್ಲ. ಇದನ್ನು ಪ್ರಶ್ನಿಸುವ ಗೋಜಿಗೆ ಯಾರೂ ಹೋಗಿಲ್ಲ. ಕೇಂದ್ರ ಸರ್ಕಾರ ಯಾವುದೇ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ಸಹಜವಾಗಿ ಮನೆಯಲ್ಲಿ ಗೊಂದಲವಾದಾಗ ಮನೆ ಮಗ ಸಿಟ್ಟಾಗಿ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾನೆ. ಅವನ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಅದು ಬಿಟ್ಟು ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ತಪ್ಪು.
ಉದ್ರೇಕಕಾರಿಯಾಗಿ ಸಮಾಜದಲ್ಲಿ ಬೆಂಕಿ ಹಚ್ಚುವ ಹೇಳಿಕೆ ನೀಡಬಾರದು. ನನಗೆ ಒಮ್ಮೆಯು ದಂಡ ವಿಧಿಸಿಲ್ಲ. ಜೈಲಿಗೆ ಹೋಗಿಲ್ಲ ಎಂದು ಹೇಳುತ್ತಿದ್ದೀರಾ..? ನಿಮ್ಮ ಮನೆಯಲ್ಲಿ ನೋಟು ಏಣಿಸುವ ಯಂತ್ರ ಸಿಕ್ಕಾಗ ನಿಮ್ಮ ಸರ್ಕಾರ ಇಲ್ಲವಾಗಿದ್ದರೆ, ಆಗಲೇ ನೀವು ಕೂಡ ಜೈಲಿಗೆ ಹೋಗುತ್ತಿದ್ರಿ. ನಿಮಗೆ ರಕ್ಷಣೆ ಮಾಡುವ ಸರ್ಕಾರ ಇಲ್ಲದೇ ಹೋಗಿದ್ದರೆ, ಆಗಲೇ ಜೈಲಿಗೆ ಹೋಗ್ತಾ ಇದ್ರಿ ಈಶ್ವರಪ್ಪನವರೇ. ಪದೇ, ಪದೇ ಡಿ.ಕೆ. ಶಿವಕುಮಾರ್ ಗೆ ಜೈಲಿಗೆ ಹೋಗಿ ಬಂದವರು ಎಂದು ಹೇಳುವ ಮೂಲಕ ತಮ್ಮ ನಾಯಕನಿಗೆ ತಾವು ತಿವಿಯುತ್ತಿದ್ದಿರಿ. ನಿಮಗೆ ಧೈರ್ಯ ಇದ್ದರೆ ನೇರವಾಗಿ ನಿಮ್ಮ ನಾಯಕನಿಗೆ ಜೈಲಿಗೆ ಹೋಗಿ ಬಂದವರು ಎಂದು ಹೇಳಿ. ಡಿ.ಕೆ. ಶಿವಕುಮಾರ್ ಅವರ ಹೆಗಲ ಮೇಲೆ ಬಂದೂಕಿಟ್ಟು ನಿಮ್ಮ ನಾಯಕನಿಗೆ ಟ್ರಿಗರ್ ಮಾಡುತ್ತಿದ್ದೀರಾ..
ಒಂದು ಕಡೆ ಮೋದಿ, ಮತ್ತೊಂದು ಕಡೆ ರಾಮನ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಿರಿ. ಮೋದಿ ಮತ ಕೇಳುವ ಒಂದು ಮುಖವಾಡ. ಮೋದಿ ಮುಖವಾಡ ಹಾಕಿಕೊಂಡು ಮತ ಕೇಳುವುದು ನಿಲ್ಲಿಸಿ. ನಿಮ್ಮ ಕಪಟ ದೇಶಭಕ್ತಿಯ ಅನಾವರಣ ನಿಲ್ಲಿಸಬೇಕು. ಸಮಾಜವನ್ನು ಅನಾವಶ್ಯಕವಾಗಿ ಗೊಂದಲ ಮೂಡಿಸುವುದು ನಿಲ್ಲಿಸಿ. ಬೂಟಾಟಿಕೆಯ ದೇಶಭಕ್ತಿ ಬಿಡಿ. ಖರ್ಗೆಯವರ ಹೊಟ್ಟೆಯಲ್ಲಿ ಕೆಟ್ಟ ಹುಳು ಹುಟ್ಟಿದೆ ಅಂತೀರಿ. ಇವರ ಮಕ್ಕಳ ಬಗ್ಗೆ ನಾವೇನು ಹೇಳಬೇಕು. ನಾನಾಗಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೆ. ಡಿ.ಕೆ. ಸುರೇಶ್ ರೀತಿ ನನಗೆ ಹೇಳಿದ್ದರೆ ಅದನ್ನು ಸಾಬೀತು ಪಡಿಸುವವರೆಗೂ ಬಿಡುತ್ತಿರಲಿಲ್ಲ ಎಂದರು.
Anti-social and provocative speeches are being heard. Their patriotism has reached its peak. D.K. Suresh had expressed his pain and frustration about the injustice done to the state.
20-05-25 03:30 pm
Bangalore Correspondent
Shashi Kumar IPS, Corruption, Hubballi, polic...
19-05-25 04:00 pm
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 02:03 pm
Mangalore Correspondent
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm