Chamarajanagar, commits suicide: ರೀಲ್ಸ್​  ಮಾಡ್ಬೇಡ, ಬಿಟ್ಟುಬಿಡು ಎಂದ ಪತಿ, ನಾನು ಇರೋದೇ ಹೀಗೆ, ವಯಸ್ಸಾದವರ ತರ ಮಾಡ್ಬೇಡ ಎಂದ್ಲು ಶೋಕಿ ಪತ್ನಿ ; ಮನನೊಂದ ಗಂಡ ಆತ್ಮಹತ್ಯೆ 

15-02-24 09:02 pm       HK News Desk   ಕರ್ನಾಟಕ

ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ. ಕುಮಾರ್ (33) ಮೃತ ವ್ಯಕ್ತಿ.

ಚಾಮರಾಜನಗರ, ಫೆ 15: ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ. ಕುಮಾರ್ (33) ಮೃತ ವ್ಯಕ್ತಿ. ಪತ್ನಿ ರೂಪಾ, ರೂಪಾಳ‌ ಸೋದರಮಾವ ಗೋವಿಂದನ ವಿರುದ್ಧ ಮೃತನ ಸೋದರ ಮಹಾದೇವಸ್ವಾಮಿ ದೂರು ಕೊಟ್ಟಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಳೆದ 10 ರಂದು ರೂಪಾಳ ತವರು ಮನೆಯಾದ ಗುಂಡಾಪುರಕ್ಕೆ ಕುಮಾರ್ ಮತ್ತು ರೂಪಾ ಇಬ್ಬರು ತೆರಳಿದ್ದರು. ಒಂದು ದಿನ ಇದ್ದು ಕುಮಾರ್ ಮರುದಿನ ಪಿ.ಜಿ‌‌. ಪಾಳ್ಯಕ್ಕೆ ವಾಪಸ್​ ಆಗಿದ್ದರೆ, ಪತ್ನಿ ರೂಪಾ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದರು. ರೂಪಾ ಊರಿನಲ್ಲಿದ್ದ ವೇಳೆ ಸೋದರಮಾವ ಹಾಗೂ ಆತನ ಸಹೋದರಿ ಜೊತೆ ಸೇರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​​ಲೋಡ್ ಮಾಡಿದ್ದಾರೆ. ಇದನ್ನು ಸ್ನೇಹಿತರು ಕುಮಾರನ ಗಮನಕ್ಕೆ ತಂದಿದ್ದರು. ತಕ್ಷಣ ಫೋನ್ ಪತ್ನಿಗೆ​ ಮಾಡಿದ್ದ ಕುಮಾರ್, ಈ ರೀತಿ ರೀಲ್ಸ್​ಗಳನ್ನು ಏಕೆ ಮಾಡುತ್ತಿದ್ದಿ? ಬಿಟ್ಟುಬಿಡು ಎಂದಾಗ ಪತ್ನಿಯು, ನಾನು ಇರುವುದೇ ಹೀಗೆ, ನೀನೇಕೆ ವಯಸ್ಸಾದವರ ರೀತಿ ಇದ್ದೀಯಾ ಎಂದಿದ್ದಾಳೆ. ಇದರಿಂದ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮನನೊಂದ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹನೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Chamarajanagar Husband commits suicide after fighting with wife in matter of reels.