ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

Ks Eshwarappa, Siddaramaiah on RSS: ನಾನು ಯಾರನ್ನೂ ಹೊಡೆಯಿರಿ ಬಡಿಯಿರಿ, ಕಡಿಯಿರಿ ಎಂದು ಹೇಳಿಲ್ಲ ; ಆರ್‌ಎಸ್‌ಎಸ್‌ ತರಬೇತಿಯ ಬಗ್ಗೆ  ಸಿದ್ದರಾಮಯ್ಯಗೆ ಏನು ಗೊತ್ತಿಲ್ಲ, ಶಾಖೆಗೆ ಬರ್ಲಿ ಎಂದ ಈಶ್ವರಪ್ಪ

19-02-24 07:32 pm       HK News Desk   ಕರ್ನಾಟಕ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ತರಬೇತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿರುವಂತೆ ಕಾಣುತಿಲ್ಲ. ಅವರು ಸಂಘದ ಶಾಖೆಗೆ ಬರಲಿ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ತಿರುಗೇಟು ನೀಡಿದರು.

ಚಿತ್ರದುರ್ಗ, ಫೆ 19: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ತರಬೇತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿರುವಂತೆ ಕಾಣುತಿಲ್ಲ. ಅವರು ಸಂಘದ ಶಾಖೆಗೆ ಬರಲಿ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ತಿರುಗೇಟು ನೀಡಿದರು.

ನಾನು ಯಾರನ್ನೂ ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎಂದು ಹೇಳಿಲ್ಲ. ದೇಶ ವಿಭಜನಯ ಬಗ್ಗೆ ಪ್ರಸ್ತಾಪಿಸಿದವರ ವಿರುದ್ಧ ಕಾನೂನು ರೂಪಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ದೇಶವನ್ನು ತುಂಡು ಮಾಡಿದ ಜಿನ್ನಾ ಮನಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಹೈಕೋರ್ಟ್‌ ದಂಡದ ಶಿಕ್ಷೆಗೆ ಗುರಿಯಾಗಿರುವ ಮುಖ್ಯಮಂತ್ರಿಯಿಂದ ಕಲಿಯುವುದು ಏನೂ ಇಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ರಾಜಕೀಯಕ್ಕೆ ಬಂದರೆ ಖುಷಿಯಿಂದ ಸ್ವಾಗತಿಸುತ್ತೇವೆ. ಅವರು ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾದರೆ ಕೆಲಸ ಮಾಡುತ್ತೇವೆ. ಆದರೆ, ಈ ಕುರಿತು ರಾಜ್ಯ ಬಿಜೆಪಿಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಪಕ್ಷದ ರಾಷ್ಟ್ರೀಯ ಘಟಕದಲ್ಲಿ ಆಗಿರುವ ಚರ್ಚೆಯ ಬಗ್ಗೆ ಗಮನಕ್ಕೆ ಬಂದಿಲ್ಲ. ಉತ್ತರಪ್ರದೇಶದಂತೆ ಕರ್ನಾಟಕದಲ್ಲಿ ಕೂಡ ಸಾಧು ಸಂತರು ರಾಜಕಾರಣಕ್ಕೆ ಬಂದರೆ ತಪ್ಪೇನು’ ಎಂದು ಪ್ರಶ್ನಿಸಿದರು.

Ks Eshwarappa Slams CM Siddaramaiah on RSS matter.