ಬ್ರೇಕಿಂಗ್ ನ್ಯೂಸ್
26-02-24 02:32 pm HK News Desk ಕರ್ನಾಟಕ
ಮಂಡ್ಯ, ಫೆ.26: ಲೋಕಸಭೆಗೆ ಬಿಜೆಪಿ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮಂಡ್ಯದಿಂದ ಸ್ಪರ್ಧೆ ಮಾಡುವುದು ನನ್ನ ಆಸೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗೆ ಪ್ರಧಾನಿ ಮೋದಿ ಸೋಮವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ, ನಾನು ಟೆಕೆಟ್ ಕೇಳಿಯೇ ಕೇಳುತ್ತೇನೆ. ನನಗೆ ನನ್ನದೇ ಆದ ಆತ್ಮವಿಶ್ವಾಸ ಇದೆ. ಜೆಡಿಎಸ್ ಪಕ್ಷ ಈಗ ಎನ್ಡಿಎ ಭಾಗ, ನಾನು ಸಹ ಎನ್ಡಿಎ ಭಾಗವಾಗಿದ್ದೇನೆ. ಮಂಡ್ಯ ಸ್ಥಿತಿಗತಿ ಕುರಿತು ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.
ರವಿವಾರ (ಫೆ.25) ರಂದು ನಡೆದ ಸಭೆಯಲ್ಲಿ ಕಳೆದ ಐದು ವರ್ಷದಲ್ಲಿ ಏನಾಯಿತು, ಮುಂದಿನ ನಡೆ ಏನಾಗಿರಬೇಕು ಎಂಬ ಚರ್ಚೆಗಳು ಆದವು. ತುಂಬಾ ಸಕಾರಾತ್ಮಕ ಅಂಶಗಳು ಹೊರಬಂದವು. ಸಭೆಯಲ್ಲಿ ಬಿಜೆಪಿಯಿಂದ ಟಿಕೆಟ್ ತೆಗೆದುಕೊಂಡು ನಿಲ್ಲಿ ಎಂದು ಹೇಳಿದರು. ಮಂಡ್ಯವನ್ನು ಬಿಡಬೇಡಿ, ನಾವು ನಿಮ್ಮನ್ನು ನಂಬಿದ್ದೇವೆ ಎಂದಿದ್ದಾರೆ. ನನಗೆ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ಜೆಡಿಎಸ್-ಬಿಜೆಪಿ ಜೊತೆ ಮೈತ್ರಿ ಆದರೆ ನನ್ನ ಜೊತೆ ದ್ವೇಷ ಇರುತ್ತಾ? ಜೆಡಿಎಸ್ ಎನ್‌ಡಿಎದ ಒಂದು ಭಾಗವಾಗಿದೆ. ಅದೇ ರೀತಿ ನಾನು ಸಹ ಎನ್‌ಡಿಎದ ಒಂದು ಭಾಗವಾಗಿದ್ದೇನೆ ಎಂದರು.
ಬಿಜೆಪಿ ಮಹಿಳಾ ಮಿಸಲಾತಿ ತಂದಿದೆ. ಹೀಗಾಗಿ ಬಿಜೆಪಿ ನನಗೆ ಮಂಡ್ಯ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸವಿದೆ. ಮೈತ್ರಿ ಅಂತ ಬಂದ ಮೇಲೆ ಜೆಡಿಎಸ್ನವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿಯಾದರೆ ಮೈತ್ರಿ ವಿಶ್ವಾಸದಿಂದ ಇರಿ ಎಂದು ಜೆಡಿಎಸ್ ಅವರನ್ನು ಕೇಳುವೆ. ಯಾರಿಗೆ ಟಿಕೆಟ್ ನೀಡುತ್ತೇವೆ ಅಂತ ವರಿಷ್ಠರು ಹೇಳುತ್ತಾರೆ. ಅವರು ಎಲ್ಲವನ್ನು ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಒಂದು ವೇಳೆ ಜೆಡಿಎಸ್ನವರಿಗೆ ಟಿಕೆಟ್ ಸಿಕ್ಕರೆ, ಅವರೊಂದಿಗೆ ವಿಶ್ವಾಸದಿಂದ ಇರುತ್ತೇನೆ ಎಂದು ಹೇಳಿದರು.
ಒಂದು ಕಾಲದಲ್ಲಿ ರೈಲಿನಲ್ಲಿ ಓಡಾಡುವುದು ಕಷ್ಟವಾಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಸುಸಜ್ಜಿತವಾದ ರೆಲ್ವೆ ವ್ಯವಸ್ಥೆ ಇದೆ. ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕೇಂದ್ರಕ್ಕೆ ಪ್ರತ್ಯೇಕ ರಾಜ್ಯಗಳಿಲ್ಲ. ಅವರು ಅಭಿವೃದ್ಧಿ ಮಾಡುವುದೆ ರಾಜ್ಯಗಳನ್ನು. ತೆರಿಗೆ ಹಣವನ್ನು ಬ್ಯಾಂಕ್‌ನಲ್ಲಿಟ್ಟುಕೊಂಡು ಬೇರೆಡೆ ಖರ್ಚು ಮಾಡಲು ಆಗಲ್ಲ. ತೆರಿಗೆ ಹಣ ಎಷ್ಟು ವಾಪಾಸ್ ಬಂತು ಅನ್ನುವುದರ ಜೊತೆಗೆ, ರಾಜ್ಯಕ್ಕೆ ಸಿಗುತ್ತಿರುವ ಯೋಜನೆಗಳನ್ನು ಗಮನಿಸಬೇಕು. ಪ್ರಧಾನಿ ಮೋದಿ ಅವರು ಎಲ್ಲರನ್ನು ಸಮನಾಗಿ ಕಾಣುತ್ತಿದ್ದಾರೆ ಎಂದವರು ಅನುದಾನ ತಾರತಮ್ಯದ ಕಾಂಗ್ರೆಸ್ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ವಿಶ್ವದಲ್ಲೇ ದೇಶದ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಮೊದಲೆಲ್ಲ ಭಾರತ ಅಂದರೆ ಬಡದೇಶ ಎನ್ನುತ್ತಿದ್ದರು. ಈಗ ಇಂಡಿಯಾ ಅಂತನೂ ಹೇಳಲ್ಲ, ಭಾರತದಿಂದ ಬಂದಿದ್ದೀರಾ ಅಂತ ಹೆಮ್ಮೆ ಪಡುತ್ತಾರೆ. ಪ್ರಧಾನ ಸೇವಕ ಎಂದು ಹೇಳಿಕೊಂಡು ಮೋದಿ ಅವರು ಸೇವೆ ಮಾಡುತ್ತಿದ್ದಾರೆ. ಭಾರತವನ್ನು ನಂ 1 ಮಾಡುವುದು ಮೋದಿ ಅವರ ಗುರಿ. ಅದರಲ್ಲಿ ಸ್ವಾರ್ಥ ಇಲ್ಲ. ಎಲ್ಲ ಜಾತಿ, ಪಕ್ಷ, ಧರ್ಮ ಎಲ್ಲರೂ ನಮ್ಮವರೆ. ಮಂಡ್ಯದಲ್ಲಿ ಎಲ್ಲರೂ ನಮ್ಮವರೆ. ಮಂಡ್ಯ ಅಭಿವೃದ್ಧಿ ಆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.
Mandya MP Sumalatha Ambareesh on Friday said she is hopeful that the BJP would retain the Mandya Parliamentary Seat in the seat-sharing exercise with the JD(S) and added that the BJP high command would make an announcement on the seat soon.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm