Kalaburagi, Road Accident: ಕಲಬುರಗಿ ; ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ,  ಮದುವೆಗೆ ಹೊರಟಿದ ಸೊಸೆ – ಮಾವ ದಾರುಣ ಸಾವು 

26-02-24 04:30 pm       HK News Desk   ಕರ್ನಾಟಕ

ತಾಲೂಕಿನ ಅವರಾದ್ ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಕಲಬುರಗಿ, ಫೆ  26: ತಾಲೂಕಿನ ಅವರಾದ್ ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಬೈಕ್ ನಲ್ಲಿದ ಮಾವ ಮತ್ತು ಸೊಸೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುನಾಥ (46) ಹಾಗೂ ಸಂಗೀತ (35) ಸಾವನ್ನಪ್ಪಿದ ದುರ್ದೈವಿಗಳು.

ಕಲಬುರಗಿ ತಾಲೂಕಿನ ಬೆಲೂರ್ ನಿಂದ ಮದುವೆಗಾಗಿ ಬಸವಕಲ್ಯಾಣಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಟ್ರಾಫಿಕ್ ಒನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದೆ.

Two bikers were killed when their bike collided with a stationary lorry near Avarad in Kalaburagi taluk on Monday.