ಬ್ರೇಕಿಂಗ್ ನ್ಯೂಸ್
27-02-24 01:14 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.27: ಕರ್ನಾಟಕ ಸಿವಿಲ್ ಜಡ್ಜ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರಾಜ್ಯದ ವಿವಿಧೆಡೆಯ 33 ಮಂದಿ ಜಡ್ಜ್ ಹುದ್ದೆಗೆ ನೇಮಕ ಆಗಿರುವ ಬಗ್ಗೆ ಫೆ.23ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆ ಪೈಕಿ ಮಂಗಳೂರಿನ ಅನಿಲ್ ಜಾನ್ ಸಿಕ್ವೇರಾ 25ರ ಹರೆಯದಲ್ಲಿ ಜಡ್ಜ್ ಹುದ್ದೆಗೇರಿದ ಕರ್ನಾಟಕದ ಅತಿ ಕಿರಿಯ ವ್ಯಕ್ತಿಯೆಂದು ಹೆಗ್ಗಳಿಕೆ ತೋರಲಾಗಿತ್ತು. ಆದರೆ, ಅದೇ ಪಟ್ಟಿಯಲ್ಲಿರುವ ಬೆಂಗಳೂರಿನ ನಮ್ರತಾ ಎಸ್. ಹೊಸ್ಮಠ್ ಎಂಬ ಯುವತಿ 24 ವರ್ಷದಲ್ಲೇ ಜಡ್ಜ್ ಪರೀಕ್ಷೆ ಪಾಸ್ ಮಾಡಿದ್ದು, ರಾಜ್ಯದ ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.
ಶ್ರೀರಾಮಪುರದ ನಿವಾಸಿ ವಕೀಲ ಸ್ವಾಮಿ ಶಿವಪ್ರಕಾಶ್ ಅವರ ಪುತ್ರಿಯಾಗಿರುವ ನಮ್ರತಾ ಅವರು ಮಲ್ಲೇಶ್ವರಂನಲ್ಲಿ ವಿದ್ಯಾಮಂದಿರ ಎಜುಕೇಶನ್ ಸೊಸೈಟಿಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪೂರೈಸಿದ್ದರು. ಪಿಯುಸಿಯಲ್ಲಿ ಸೈನ್ಸ್ ಓದಿದ್ದ ಅವರು, ಬಳಿಕ ಬೆಂಗಳೂರು ಯುನಿವರ್ಸಿಟಿಯ ಕಾನೂನು ಕಾಲೇಜಿನಲ್ಲಿ 2022ನೇ ವರ್ಷದಲ್ಲಿ ಬಿಎ –ಎಲ್ಎಲ್ ಬಿ ಪೂರೈಸಿದ್ದರು. ಸದ್ಯ ಕರ್ನಾಟಕ ಹೈಕೋರ್ಟಿನಲ್ಲಿ ಜಡ್ಜ್ ಡಾ.ಪ್ರಭಾಕರ ಶಾಸ್ತ್ರೀ ಅವರಲ್ಲಿ ಲಾ ಕ್ಲರ್ಕ್ ಮತ್ತು ರೀಸರ್ಚ್ ಅಸಿಸ್ಟೆಂಟ್ ಆಗಿದ್ದಾರೆ. 24 ವರ್ಷ ಎಂಟು ತಿಂಗಳ ಹರೆಯದಲ್ಲಿರುವ ನಮ್ರತಾ ತನ್ನ ಮೊದಲ ಪ್ರಯತ್ನದಲ್ಲಿಯೇ ಜಡ್ಜ್ ಹುದ್ದೆಯ ಪರೀಕ್ಷೆಯನ್ನು ಪಾಸ್ ಮಾಡಿದ್ದು ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸು ತನಗೆ ಸೇರಬೇಕೆಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಅನಿಲ್ ಜಾನ್ ಸಿಕ್ವೇರಾ 25 ವರ್ಷ ಪೂರೈಸಿದ್ದು, ಜಡ್ಜ್ ಹುದ್ದೆಗೇರಿದ ರಾಜ್ಯದ ಅತಿ ಕಿರಿಯ ವ್ಯಕ್ತಿಯೆಂದು ಈ ಮೊದಲು ಹೇಳಲಾಗಿತ್ತು. ನಮ್ರತಾ ಮತ್ತು ಅನಿಲ್ ಸಿಕ್ವೇರಾ ಅವರು ಬೆಂಗಳೂರಿನಲ್ಲಿ ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಅನಿಲ್ ಸಿಕ್ವೇರಾ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದ್ದರೆ, ನಮ್ರತಾ ಮೊದಲ ಪ್ರಯತ್ನದಲ್ಲಿಯೇ ಸಾಧನೆ ಮಾಡಿದ್ದಲ್ಲದೆ, ರಾಜ್ಯದ ಅತಿ ಕಿರಿಯ ಮಹಿಳಾ ಜಡ್ಜ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
2023ರ ನವೆಂಬರ್ ತಿಂಗಳಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ 33 ಮಂದಿ ತೇರ್ಗಡೆಯಾಗಿರುವ ಬಗ್ಗೆ ಫೆ.23ರಂದು ಹೈಕೋರ್ಟ್ ರಿಜಿಸ್ಟ್ರಾರ್ ಅಧಿಸೂಚನೆ ಪ್ರಕಟಿಸಿದ್ದರು. ಅವರು ಪಡೆದ ಅಂಕದ ಆಧಾರದಲ್ಲಿ ಒಂದರಿಂದ 33ರ ಕ್ರಮಾಂಕದಲ್ಲಿ ಜಡ್ಜ್ ಹುದ್ದೆಗೆ ಆಯ್ಕೆಗೆ ಲಿಸ್ಟ್ ಮಾಡಲಾಗಿತ್ತು. ಅದರ ಪ್ರಕಾರ, ಹರ್ಷಿತಾ ಜಿಎಂ(1), ಝಹೀರಾ ಅತಾನೂರ್(2), ನಮ್ರತಾ ಹೊಸ್ಮಠ್(3), ಭುವನೇಶ್ವರಿ ಡಿ(4), ವರ್ಣಿಕಾ ಆರ್(5), ಪುಷ್ಪಾ ಡಿ(6), ಪೂಜಾ ಎಸ್. ಕುಮಾರ್(7), ಸುನಿಲ್ ಎಚ್.ಸಿ(8), ಕೃಷ್ಣಪ್ಪ ಪಮ್ಮಾರ್ (9), ಗೀತಾ ಡಿ.(10), ಪುನೀತ್ ಬಿಆರ್ (11), ರಂಜಿತ್ ಕುಮಾರ್ (12), ಸುರಕ್ಷಾ ಕೆಕೆ (13), ಶರ್ಮಿಳಾ ಇಜೆ (14), ಶ್ರುತಿ ತೇಲಿ(15), ಪ್ರಹಾನ್ ಸಿಂಗ್ (16), ಮೇಘಾ ಸೋಮನ್ನವರ್(17), ಮಧುಶ್ರೀ ಆರ್.ಎಂ.(18), ವಿಕಾಸ್ ದಲವಾಯಿ (19), ರಂಜಿತಾ ಎಸ್.(20), ಶ್ರೇಯಾ ಎಚ್.ಜೆ(21), ಧನಂಜಯ್ ಹೆಗ್ಡೆ (22), ತುಷಾರ್ ಸಂಜಯ್ ಸದಾಲಗಿ(23), ಐಶ್ವರ್ಯಾ ಗುಡಾದಿನ್ನಿ(24), ಶ್ರೀದೇವಿ (25), ರಮೇಶ್ ಕೆ.(26), ವಿಜಯಕುಮಾರ್ ಎನ್(27), ಅನಿಲ್ ಜಾನ್ ಸಿಕ್ವೇರಾ(28), ದಾನಪ್ಪ (29), ಕೃತಿಕಾ ಪಿ. ಪವಾರ್ (30), ಮಹಾಂತೇಶ್ ಮಠದ್(31), ಭಾಗ್ಯಶ್ರೀ ಮಾದಾರ್(32), ಸುಮಾ ಟಿ(33) ಇದ್ದಾರೆ.
At just 24 years old, Namrata S Hosmath from Bangalore has achieved the distinction of becoming Karnataka's youngest civil judge.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm