ಬ್ರೇಕಿಂಗ್ ನ್ಯೂಸ್
01-03-24 06:43 pm HK News Desk ಕರ್ನಾಟಕ
ಮೈಸೂರು, ಮಾ 01: ಕುಣಿಯಲಾರದವಳು ನೆಲ ಡೊಂಕು ಎಂನ್ನುವಂತೆ ಎಂಬ ಸ್ಥಿತಿ ರಾಜ್ಯ ಸರಕಾರದ್ದು. ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಬೆರಳು ತೋರುತ್ತಿದೆ. ಜನರು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯಕ್ಕೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಸಿಎಂ ಆರೋಪಿಸಿದ್ದಾರೆ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ಕೇಂದ್ರ ಕೊಟ್ಟಿದ್ದೆಂದು ತಾಯಿ ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡುತ್ತೇನೆ. ನೀವು ಬನ್ನಿ ಅದು ನಿಮ್ಮದೆ ಅಕ್ಕಿ ಎಂದು ಪ್ರಮಾಣ ಮಾಡಿ. ನೀವೇ ಪ್ರಮಾಣದ ದಿನ ನಿಗದಿ ಮಾಡಿ. ನೀವು ಕರೆದ ದಿನ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ ಎಂದು ಸವಾಲೆಸೆದರು.
ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ತೆರಿಗೆ, ವಂತಿಗೆ ಮತ್ತು ಅನುದಾನದ ಹೆಸರಿನಲ್ಲಿ 4 ಲಕ್ಷ 91 ಸಾವಿರ ಕೋಟಿ ಕೊಟ್ಟಿದೆ. 10 ವರ್ಷದಲ್ಲಿ ಮನಮೋಹನ್ ಸಿಂಗ್ ಸರಕಾರ ತೆರಿಗೆ, ವಂತಿಗೆ ಮತ್ತು ಅನುದಾನದ ಹೆಸರಿನಲ್ಲಿ 1 ಲಕ್ಷ 92 ಸಾವಿರ ಕೋಟಿ ಕೊಟ್ಟಿದೆ. ಇದು ಸತ್ಯ ಎಂದು ನಮ್ಮ ಎಲ್ಲಾ ಸಂಸದರನ್ನು ಕರೆದುಕೊಂಡು ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡುತ್ತೇವೆ. ಸಿಎಂ ಕೂಡ ತನ್ನ ಸಚಿವ ಸಂಪುಟದ ಜೊತೆ ಬಂದು ತಾವು ಹೇಳುತ್ತಿರುವುದು ಸತ್ಯ ಎಂದು ಪ್ರಮಾಣ ಮಾಡಲಿ ಎಂದರು.
ಕಾಂಗ್ರೆಸ್ ಕೃಪಾಪೋಷಿತ ಮಂಡಳಿ ನೀಡಿರುವ ಜಾತಿ ಗಣತಿ ವರದಿಯಿದು. ಜಾತಿಗಳ ನಡುವೆ ಎತ್ತಿಕಟ್ಟಲು ಈ ವರದಿ ಸಿದ್ಧ ಮಾಡಿಸಲಾಗಿದೆ. ಹಿಂದೂ ಸಮಾಜವನ್ನು ಜಾತಿ ಜಾತಿ ಹೆಸರಿನಲ್ಲಿ ಹೊಡೆಯಲು ಈ ತಂತ್ರ. ಹಿಂದೂ ಎಂಬ ಭಾವದಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವಾಗಿ ಈ ವರದಿಯಿದೆ. ಕಾಂಗ್ರೆಸ್ ನ ಟೂಲ್ ಕಿಟ್ ನ ಭಾಗವಾಗಿ ಈ ವರದಿ ಇದೆ ಎಂದು ಕಿಡಿಕಾರಿದರು.
ಪಾಕಿಸ್ತಾನ್ ಪರ ಘೋಷಣೆ ವಿಚಾರಕ್ಕೆ ಮಾತನಾಡಿ, ನನ್ನ ಮಾಹಿತಿ ಪ್ರಕಾರ ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದು ಸತ್ಯ ಎಂಬುದಿದೆ. ಸರಕಾರ ತಕ್ಷಣ ಈ ವರದಿ ಬಹಿರಂಗ ಪಡಿಸಬೇಕು. ನಾಲ್ವರನ್ನು ಪೊಲೀಸರು ವಿಚಾರಣೆ ಮಾಡ್ತಿದ್ದಾರೋ ಅಥವಾ ಬಿರಿಯಾನಿ ತಿನ್ನಿಸುತ್ತಿದ್ದಾರೋ? ಮುಸ್ಲಿಮರನ್ನ ಬ್ರದರ್ಸ್ ಅಂತಾ ಡಿಕೆಶಿಯೆ ಹೇಳಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಕೊಟ್ಟರೂ ಅಚ್ಚರಿ ಬೇಡ
Pakistan Zindabad, Ct Ravi slams Dk Shivakumar, says they might be eating biryani inside, says no wonder if they get biryani inside. He also slammed About the 5kg rice given by Siddaramaiah.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm