Rameshwaram Cafe Blast, Ballari ISIS Module: ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಐಸಿಸ್ ಕೈವಾಡ ಶಂಕೆ ; ಕುಕ್ಕರ್ ಬಾಂಬ್ ರೀತಿಯಲ್ಲೇ ಐಇಡಿ ಸ್ಫೋಟಕ ಬಳಕೆ, ಒಬ್ಬಂಟಿ ಕೃತ್ಯ, ಆರೋಪಿ ಬಗ್ಗೆ ಇನ್ನೂ ಸಿಗದ ಸುಳಿವು 

03-03-24 08:15 pm       Bangalore Correspondent   ಕರ್ನಾಟಕ

ರಾಮೇಶ್ವರ ಕೆಫೆಯ ಬಾಂಬ್‌ ಸ್ಫೋಟದ ಹಿಂದೆ 'ಐಸಿಸ್‌' ಉಗ್ರರ ಕೈವಾಡದ ಕುರಿತು ಶಂಕೆ ವ್ಯಕ್ತವಾಗಿದೆ. ಒಂಟಿ ತೋಳ ಮಾದರಿಯಲ್ಲಿ ಒಬ್ಬಂಟಿಯಾಗಿಯೇ ಬಂದು ಬಾಂಬ್ ಇಟ್ಟು ಹೋಗಿರುವುದರಿಂದ ಈ ಕೃತ್ಯವನ್ನೂ ಐಸಿಸ್ ಪ್ರೇರಿತ ಉಗ್ರರು ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮಾ.3: ರಾಮೇಶ್ವರ ಕೆಫೆಯ ಬಾಂಬ್‌ ಸ್ಫೋಟದ ಹಿಂದೆ 'ಐಸಿಸ್‌' ಉಗ್ರರ ಕೈವಾಡದ ಕುರಿತು ಶಂಕೆ ವ್ಯಕ್ತವಾಗಿದೆ. ಒಂಟಿ ತೋಳ ಮಾದರಿಯಲ್ಲಿ ಒಬ್ಬಂಟಿಯಾಗಿಯೇ ಬಂದು ಬಾಂಬ್ ಇಟ್ಟು ಹೋಗಿರುವುದರಿಂದ ಈ ಕೃತ್ಯವನ್ನೂ ಐಸಿಸ್ ಪ್ರೇರಿತ ಉಗ್ರರು ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಘಟನೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ‌

ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬಂಧಿಸಲು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹತ್ತು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಬಾಂಬ್ ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಮಗ್ರಿಗಳನ್ನು ಬಳಸಿರುವುದು ಮತ್ತು ಈ ಹಿಂದೆ ರಾಜ್ಯದಲ್ಲಿ ಇದೇ ಮಾದರಿಯ ಸ್ಫೋಟ ಘಟನೆಗಳಿಗೆ ಸಾಮ್ಯತೆ ಕಂಡುಬಂದಿದ್ದರಿಂದ ಐಸಿಸ್‌ ಕೃತ್ಯವೇ ಆಗಿರಬಹುದು ಎಂಬ ಶಂಕೆಗೆ ಪುಷ್ಟಿ ಸಿಕ್ಕಿದೆ. 

Bengaluru Blast Linked to Coimbatore, Mangaluru Terror Cases? Probe Finds  Similarities in Assembly of Timer Device - News18

ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿಯೂ ಐಇಡಿ ಮಾದರಿ ಸ್ಫೋಟಕ ಬಳಸಲಾಗಿತ್ತು. ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರು ತುಂಗಾ ತೀರದಲ್ಲಿ ಐಇಡಿ ಬಳಸಿ ಪ್ರಾಯೋಗಿಕ ಸ್ಫೋಟ ನಡೆಸಿದ್ದು ಎನ್‌ಐಎ ತನಿಖೆಯಲ್ಲಿ ಬಯಲಾಗಿತ್ತು. ಇವುಗಳಿಗೆ ಐಸಿಸ್‌ ಉಗ್ರರ ಪ್ರೇರಣೆ ಮತ್ತು ನೆಟ್ವರ್ಕ್ ಇರುವುದು ತನಿಖೆಯಲ್ಲಿ ಸಾಬೀತಾಗಿತ್ತು. ಹೀಗಾಗಿ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟವನ್ನು ಕುಕ್ಕರ್ ಬಾಂಬ್ ಮಾದರಿಯಲ್ಲಿ ಒಬ್ಭನೇ ಬಂದು ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. 

ಬಾಂಬ್‌ ಸ್ಫೋಟದ ಸಂಬಂಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಯುಎಪಿಎ ಪ್ರಕಾರ (ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ) ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ಬೆಂಗಳೂರಿನ ಪೊಲೀಸ್ ಕಮಾಂಡ್‌ ಸೆಂಟರ್‌ನಲ್ಲಿ ಸ್ಫೋಟದ ಆರೋಪಿಯ ಚಲನವಲನದ ಬಗ್ಗೆ ಶೋಧ ನಡೆಸಲಾಗಿತ್ತು. ರಾಮೇಶ್ವರಂ ಕೆಫೆ ಮಾರ್ಗದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯವನ್ನು ಕಮಾಂಡ್‌ ಸೆಂಟರ್‌ ಸಿಬ್ಬಂದಿ ಪರಿಶೀಲಿಸಿದ್ದರು. ಆರೋಪಿಯ ಚಲನವಲನ ಆಧರಿಸಿ ಪೊಲೀಸರು ಶಂಕೆಯ ಮೇರೆಗೆ ಹಲವರನ್ನು ವಶಕ್ಕೆ ಪಡೆದಿದ್ದರೂ ಆರೋಪಿಯನ್ನು ಬಂಧಿಸಿದ್ದನ್ನು ದೃಢಪಡಿಸಿಲ್ಲ. ತಲೆಗೆ ಟೊಪ್ಪಿ ಮುಖಕ್ಕೆ ಮಾಸ್ಕ್ ಹಾಕಿರುವ ವ್ಯಕ್ತಿ ತಮಿಳುನಾಡು ಕಡೆಗೆ ಪರಾರಿಯಾಗಿರುವ ಶಂಕೆಯಿದ್ದು ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

The ISIS Ballari module, believed to be behind the attack, has connections to Afghanistan, Iran, and Iraq, receiving orders through the darkweb. Comprised mainly of tech-savvy individuals, the group is said to have a significant presence in Kerala. The NIA had recently uncovered the module's plans for IED blasts in several cities, including Bengaluru.