Pakistan zindabad slogan 3 arrested, Congress: ಪಾಕ್ ಪರ ಘೋಷಣೆ ಪ್ರಕರಣ ; ಕಡೆಗೂ ಮೂವರು ಆರೋಪಿಗಳ ಬಂಧನ, ಒಬ್ಬ ದೆಹಲಿ ಮೂಲದ ಯುವಕ ಅರೆಸ್ಟ್ ! 

04-03-24 07:18 pm       Bangalore Correspondent   ಕರ್ನಾಟಕ

ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯ ಪೊಲೀಸರು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುನಾವರ್, ಇಲ್ತಾಜ್ ಮತ್ತು ಮೊಹಮ್ಮದ್ ಶಫಿ ನಾಶಿಪುಡಿ ಬಂಧಿತರು. 

ಬೆಂಗಳೂರು, ಮಾ.4: ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯ ಪೊಲೀಸರು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುನಾವರ್, ಇಲ್ತಾಜ್ ಮತ್ತು ಮೊಹಮ್ಮದ್ ಶಫಿ ನಾಶಿಪುಡಿ ಬಂಧಿತರು. 

ಆರ್​ಟಿ ನಗರದ ಮುನಾವರ್, ಇಲ್ತಾಜ್ ದೆಹಲಿ ಮೂಲದವನು ಎಂದು ತಿಳಿದುಬಂದಿದೆ. ಶಫಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿದವ ಎಂದು ಹೇಳಲಾಗಿದೆ. ಬಂಧಿತ ಆರೋಪಿಗಳ ಪೈಕಿ ಓರ್ವ ಪಾಕಿಸ್ತಾನ ಅಂತಾ ಕೂಗಿದರೆ ಉಳಿದ ಇಬ್ಬರು ಜಿಂದಾಬಾದ್‌, ಜಿಂದಾಬಾದ್‌ ಅಂತಾ ಕೂಗಿದ್ದರು. ಪಾಕಿಸ್ತಾನ ಜಿಂದಾಬಾದ್ ಕೂಗಿದ ಆರೋಪ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. 

ಮೂವರು ಆರೋಪಿಗಳ ಬಂಧನವನ್ನು ಖಚಿತಪಡಿಸಿರುವ ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. FSL ವರದಿ, ಸಾಂದರ್ಭಿಕ ಸಾಕ್ಷ್ಯಗಳು, ಆರೋಪಿಗಳ ಹೇಳಿಕೆ ಹಾಗೂ ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು ವೈದ್ಯಕೀಯ ಪರೀಕ್ಷೆ ನಡೀತಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರಮಂಗಲದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲಿದ್ದಾರೆ.

Three people were arrested on Monday for raising pro-Pakistan slogans inside the Karnataka assembly after a Congress candidate's victory in Rajya Sabha elections last week. The three arrested have been identified as Ilthaz from Delhi, Munavar from RT Nagar in Bengaluru, and Mohammad Shafi from Byadagi in Haveri