PSI rescues toddler, Bengaluru: 10 ಅಡಿ ನೀರಿನ‌ ಸಂಪ್​ಗೆ ಬಿದ್ದ ಮಗು ; ಟ್ರಾಫಿಕ್ ಪಿಎಸ್ಐ ಸಮಯ ಪ್ರಜ್ಞೆಯಿಂದ ಉಳಿತು ಜೀವ , ಪೋಷಕರ ಕೃತಜ್ಞತೆ, ಸಾರ್ವಜನಿಕರಿಂದ ಪ್ರಶಂಸೆ

07-03-24 04:16 pm       Bangalore Correspondent   ಕರ್ನಾಟಕ

ಆಟವಾಡುವಾಗ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದ ಎರಡೂವರೆ ವರ್ಷದ ಮಗುವನ್ನು ಟ್ರಾಫಿಕ್ ಸಬ್‌ ಇನ್​ಸ್ಪೆಕ್ಟರ್ ರಕ್ಷಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಪಾಲಿಗೆ ನಿಜವಾದ ಹೀರೋ ಆಗಿದ್ದಾರೆ.

ಬೆಂಗಳೂರು, ಮಾ.07: ಆಟವಾಡುವಾಗ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದ ಎರಡೂವರೆ ವರ್ಷದ ಮಗುವನ್ನು ಟ್ರಾಫಿಕ್ ಸಬ್‌ ಇನ್​ಸ್ಪೆಕ್ಟರ್ ರಕ್ಷಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಪಾಲಿಗೆ ನಿಜವಾದ ಹೀರೋ ಆಗಿದ್ದಾರೆ.

ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್‌ ಲೇಔಟ್​ನ ಮನೆಯೊಂದರಲ್ಲಿ ಆಟವಾಡುವಾಗ ಆಯತಪ್ಪಿ ಎರಡೂವರೆ ವರ್ಷದ ಮಗು 10 ಅಡಿಯ ನೀರಿನ‌ ಸಂಪ್​ಗೆ ಬಿದ್ದಿದೆ. ಕೂಡಲೇ ಚೀರಾಡಿದೆ. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ಚೀರಾಟದ ಶಬ್ದ ಗ್ರಹಿಸಿ ಸಂಪ್ ಬಳಿ ಬಂದಿದ್ದಾರೆ.

ಮಗು ಬಿದ್ದಿರುವುದನ್ನು ಕಂಡು ಕೂಡಲೇ‌ ಸಮವಸ್ತ್ರದಲ್ಲೇ ನೀರಿನ ಸಂಪ್​ಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಕೊಂಚ ತಡವಾಗಿದ್ದರೂ ಮಗುವಿನ ಪ್ರಾಣಕ್ಕೆ ಅಪಾಯವಾಗುತಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದೆ.‌ ಮಗುವನ್ನು ರಕ್ಷಿಸಿದ್ದ ಟ್ರಾಫಿಕ್ ಪಿಎಸ್ಐಗೆ‌ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

A sub-inspector stationed at the Byatarayanapura traffic police station in western Bengaluru earned accolades on Wednesday for his courageous act in rescuing a two-and-a-half-year-old boy from a sump.