Bangalore Four year old baby consumes tablets: ಚಾಕಲೇಟ್ ಎಂದು ಭಾವಿಸಿ 10 ಮಾತ್ರೆ ನುಂಗಿದ 4 ವರ್ಷದ ಮಗು ; ಚಿಕಿತ್ಸೆ ಫಲಿಸದೇ ಸಾವು 

08-03-24 11:52 am       HK News Desk   ಕರ್ನಾಟಕ

ಚಾಕ್ಲೆಟ್ ಎಂದು ಭಾವಿಸಿ 10 ಮಾತ್ರೆ ಸೇವಿಸಿ 4 ವರ್ಷದ ಮಗು ಸಾವನ್ನಪ್ಪಿದೆ.

ಚಿತ್ರದುರ್ಗ, ಮಾ.08: ಚಾಕ್ಲೆಟ್ ಎಂದು ಭಾವಿಸಿ 10 ಮಾತ್ರೆ ಸೇವಿಸಿ 4 ವರ್ಷದ ಮಗು ಸಾವನ್ನಪ್ಪಿದೆ.

ಚಿತ್ರದುರ್ಗದ ಕಡಬನಕಟ್ಟೆ ಗ್ರಾಮದ ತಿಪ್ಪೇಸ್ವಾಮಿ ಅಂಜಿನಮ್ಮ ದಂಪತಿಗಳ ಪುತ್ರ ಹೃತ್ವಿಕ್ ಮೃತ ಬಾಲಕನಾಗಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ  ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.

ತಂದೆಯ ಅನಾರೋಗ್ಯ ಹಿನ್ನೆಲೆ ಮಾತ್ರೆಗಳನ್ನು ತಂದು ಮನೆಯಲ್ಲಿಟ್ಟಿದ್ದರಂತೆ. ಆದರೆ ಮನೆಯಲ್ಲಿ ಯಾರು ಇಲ್ಲದ ವೇಳೆ ಚಾಕಲೇಟ್ ಎಂದು ಭಾವಿಸಿ ಮಗು ಮಾತ್ರೆ ನುಂಗಿದ್ದಾನೆ. ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ.

ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Bangalore Four year old baby consumes 10 tablets thinking it as chocolates