ಬ್ರೇಕಿಂಗ್ ನ್ಯೂಸ್
13-03-24 06:31 pm HK News Desk ಕರ್ನಾಟಕ
ಶಿವಮೊಗ್ಗ, ಮಾ.13: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ಚರ್ಚೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಸಿಟ್ಟಿಗೆ ಕಾರಣವಾಗಿದೆ. ದಿಢೀರ್ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಅಭಿಮಾನಿಗಳು ಶಿವಮೊಗ್ಗದಲ್ಲಿ ಪಕ್ಷೇತರ ಸ್ಪರ್ಧಿಸಬೇಕು ಎಂಬ ಒತ್ತಡ ಬರುತ್ತಿದೆ. ಹಿತೈಷಿಗಳ ಜೊತೆ, ಜನರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕಾದು ನೋಡಿ ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ.
ಟಿವಿಯಲ್ಲಿ ಏನ್ ಬೇಕಾದರೂ ಹಾಕಿಕೊಳ್ಳಲಿ. ನಾನೇನೂ ಹೇಳುವುದಿಲ್ಲ. ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ನೀವು ಪಕ್ಷೇತರ ನಿಲ್ಲಬೇಕು ಅಂತ ಒತ್ತಡ ಹಾಕುತ್ತಿದ್ದಾರೆ, ಈ ಬಗ್ಗೆ ಸಭೆ ಕರೆದಿದ್ದಾರೆ. ನಾನು ಸಹ ಆ ಸಭೆಯಲ್ಲಿ ಭಾಗವಹಿಸುತ್ತೇನೆ. ಆಮೇಲೆ ತೀರ್ಮಾನ ಮಾಡುತ್ತೇನೆ. ಭಾರತೀಯ ಜನತಾ ಪಾರ್ಟಿ ಸಂಸ್ಕಾರ ಕಲಿಸಿಕೊಟ್ಟಿದೆ. ನಾಲ್ಕು ಗೋಡೆ ನಡುವೆ ಕುಳಿತು ತೀರ್ಮಾನ ಮಾಡಬೇಕು ಎಂದು ಹೇಳಿಕೊಟ್ಟಿದೆ. ಏನ್ ಆಗುತ್ತೆ ಎಂಬುದನ್ನು ಕಾದು ನೋಡಿ ಎಂದಿದ್ದಾರೆ.
ಊಹಾಪೋಹಗಳಿಗೆ ಉತ್ತರ ಕೊಡಲ್ಲ!
ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ. ಊಹಾಪೋಹಗಳಿಗೆ ಉತ್ತರ ಕೊಡಲ್ಲ, ನಾನು ನಿಲ್ಲುವುದರಿಂದ ಒಳ್ಳೆಯದೋ ಕೆಟ್ಟದೋ ಚರ್ಚೆ ಮಾಡೋಣ. ಕಳೆದ ಸಲ ನಮ್ಮ ಪಕ್ಷದಲ್ಲಿ ಅನೇಕ ತಪ್ಪಾಗಿದೆ. ಅದನ್ನು ನಾವು ತಿದ್ದಿಕೊಳ್ಳಬೇಕಿದೆ. ಸುದ್ದಿಗೋಷ್ಠಿ ಕರೆಯುತ್ತಿದಂತೆ ವರಿಷ್ಠರಿಗೂ ಕೂತುಹಲ ಆಗಿದೆ, ಏನಾದರೂ ಹೇಳಿ ಬೀಡಬಹುದು ಅಂತ. ನನ್ನ ಅಭಿಮಾನಿ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂದಿದ್ದಾರೆ. ಹಿತೈಷಿಗಳ ಜೊತೆ ಚೆರ್ಚೆ ಮಾಡಿ ತೀರ್ಮಾನ ತಿಳಿಸುತ್ತೇನೆ ಎಂದು ಹೇಳಿದರು.
ನಾನಾಗಿ ಹಾವೇರಿಗೆ ಹೋಗಿಲ್ಲ. ಶಿವಮೊಗ್ಗ ವಿಧಾನಸಭಾ ಟಿಕೆಟ್ ನನ್ನ ಮಗನಿಗೆ ಕೇಳಿದಾಗ ಅಮಿತ್ ಶಾ ಅವರು ನಿಮ್ಮ ಸೊಸೆಗೆ ಟಿಕೆಟ್ ಕೊಡುತ್ತೇವೆ ಎಂದರು. ನಾನು ನನ್ನ ಸೊಸೆಯನ್ನು ಹೊರಗೆ ಕಳಿಸಲ್ಲ ಎಂದಿದ್ದೆ. ಹಾವೇರಿ ಚುನಾವಣೆ ಹೋಗುವ ಮುಂಚೆ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೆ. ಆಗ ಯಡಿಯೂರಪ್ಪನವರು ಟಿಕೆಟ್ ಸಹ ಕೊಡುತ್ತೇನೆ, ನಾನು ಓಡಾಡುತ್ತೇನೆ ಎಂದಿದ್ದರು. ಈಗಲೂ ನನಗೆ ನಂಬಿಕೆ ಇದೆ, ಟಿಕೆಟ್ ಸಿಗುತ್ತೆ ಅಂತ ಎಂದರು.
My followers are asking me to stand as independent candidate from Shivamogga says Eshwarappa, let me decide with my members and supporters he added.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm