ಬ್ರೇಕಿಂಗ್ ನ್ಯೂಸ್
14-03-24 06:14 pm HK News Desk ಕರ್ನಾಟಕ
ಶಿವಮೊಗ್ಗ, ಮಾ 14: ಈಶ್ವರಪ್ಪ ಹೇಳುತ್ತಿರುವುದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ. ಅವರಿಗೆ ಯಾರೂ ಟಿಕೆಟ್ ತಪ್ಪಿಸಲಿಲ್ಲ. 40% ಗೆ ಅವರೇ ಬಲಿದಾನ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಧಾನಸಭೆ, ಲೋಕಸಭೆ ಕೇಳಿದ್ದರು, ಎರಡೂ ತಪ್ಪಿ ಹೋಯ್ತು. ಈಗ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಕೇಳುತ್ತಿದ್ದಾರೆ. ಅದು ಸಿಗಲಿಲ್ಲವಾದರೆ ಜಿ.ಪಂ. ಇದೆಯಲ್ಲಾ. ಅದಕ್ಕಾಗಿ ಈ ರೀತಿ ಮಾತನಾಡ್ತಿದ್ದಾರೆ. ಈಶ್ವರಪ್ಪ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ಅವರಿಗೆ ಖಂಡಿತವಾಗಿ ಅಂತ ಧಮ್ ಇಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಯಾಕೆ ಅಷ್ಟೊಂದು ಮನ್ನಣೆ ಕೊಡುತ್ತೀರಿ? ಕೈಲಾಗದ ಈಶ್ವರಪ್ಪ ಬಗ್ಗೆ ಏಕೆ ಪ್ರಶ್ನೆ ಕೇಳುತ್ತೀರಿ? ಶಿವಮೊಗ್ಗ ಜಿಲ್ಲೆಯ ಯಾವ ತಾಲೂಕಿನಲ್ಲಿ ಈಶ್ವರಪ್ಪ ಪ್ರಭಾವವಿದೆ? ಈಶ್ವರಪ್ಪ ಯಾವ ರಾಜ್ಯ ನಾಯಕ? ಕೇವಲ ಶಿವಮೊಗ್ಗ ನಗರಕ್ಕೆ ನಾಯಕ. ಈಶ್ವರಪ್ಪ ಧೈರ್ಯಶಾಲಿಯಾದ್ರೆ ಜನರಿಗೆ ಬೇಕಾದ ವ್ಯಕ್ತಿಯಾದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಲಿ. ಈಶ್ವರಪ್ಪ ಅವರ ಕೈಯಲ್ಲಿ ಏನೇನು ಆಗಲ್ಲ. ಕೇವಲ ಬೋರ್ಡ್ ಅಧ್ಯಕ್ಷರ ಸ್ಥಾನ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಈಶ್ವರಪ್ಪ ಯಾವುದೇ ರಾಷ್ಟ್ರ ಭಕ್ತನಲ್ಲ, ಕಪಟ ರಾಷ್ಟ್ರ ಭಕ್ತ ಎಂದರು.
ಈಶ್ವರಪ್ಪ ಏನಾದರೂ ಪಕ್ಷೇತರನಾಗಿ ಸ್ಪರ್ಧೆ ಮಾಡಿದರೆ ನಾನು ಈಶ್ವರಪ್ಪನವರಿಗೆ ಮತ ಹಾಕುತ್ತೇನೆ. ಧಮ್ ತಾಕತ್ತಿದ್ದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ. ಅವರಿಗೆ ಧಮ್ ಗಿಮ್ ಏನು ಇಲ್ಲ. ಅವರು ಗಂಡಸಾ? ನಾಳೆ ಮೋದಿ ಬಂದಾಗ ಮೋದಿ ಕಾಲಿಗೆ ಬೀಳುತ್ತಾರೆ ಎಂದು ಕುಟುಕಿದರು.
ಯುದ್ದ ಆರಂಭವಾಗಿದೆ:
ಈ ಬಾರಿ ನಾವು ಶಿವಮೊಗ್ಗ ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಯುದ್ದ ಆರಂಭವಾಗಿದೆ. ವ್ಯವಸ್ಥಿತ ಜಾಲ ಹೆಣೆಯುತ್ತಿದ್ದೇವೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಗೆಲ್ಲುವುದು ರೋಚಕವಾಗಿದೆ ಎಂದು ಆಯನೂರು ಹೇಳಿದರು.
ಸರ್ಕಾರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. 7 ನೇ ವೇತನ ಆಯೋಗದ ವರದಿ ಸಿದ್ದವಾಗಿದೆ ಎಂಬ ಮಾಹಿತಿ ಇದೆ. ಇನ್ನು ಒಂದು ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಚುನಾವಣೆ ಘೋಷಣೆ ನಂತರ ನೀತಿ ಸಂಹಿತೆ ಜಾರಿಯಾಗಲಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲು ವೇತನ ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು. ಸರಕಾರ ವರದಿ ಸ್ವೀಕರಿಸಿ ಸಚಿವ ಸಂಪುಟದಲ್ಲಿ ಚರ್ಚೆಗೆ ಇಟ್ಟು ಜಾರಿ ಮಾಡಬೇಕು. ಎನ್ ಪಿಎಸ್ ಪದ್ದತಿಯನ್ನು ರದ್ದುಗೊಳಿಸಿ ಒಪಿಎಸ್ ಪದ್ದತಿ ಜಾರಿಗೊಳಿಸಬೇಕು ಎಂದು ಹೇಳಿದರು.
Ayanur Manjunath slams Eshwarappa, says he's a blackmail politician. Says he doesn't have courage or guts to fight independently.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm